Peter Pan Syndrome: ಪೀಟರ್​ ಪ್ಯಾನ್ ಸಿಂಡ್ರೋಮ್​ ಎಂದರೇನು? 

ಪೀಟರ್​ ಪ್ಯಾನ್ ಸಿಂಡ್ರೋಮ್: ಪೀಟರ್​ ಪ್ಯಾನ್​ ಸಿಂಡ್ರೋಮ್​ ಎಂಬುದು ಒಂದು ರೀತಿಯ ಮಾನಸಿಕ ಸ್ಥಿತಿ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡು ಬರುತ್ತದೆ.

Peter Pan Syndrome: ಪೀಟರ್​ ಪ್ಯಾನ್ ಸಿಂಡ್ರೋಮ್​ ಎಂದರೇನು? 
ಪ್ರಾತಿನಿಧಿಕ ಚಿತ್ರ

ವ್ಯಕ್ತಿಯು 14 ವರ್ಷದ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆರೋಪಿಯು ಪೀಟರ್​ ಪ್ಯಾನ್​ ಸಿಂಡ್ರೋಮ್​ ಎಂಬ ಮಾನಸಿಕ ಸ್ಥಿತಿಯಿಂದ ಬಳಲುತ್ತಿದ್ದಾನೆ. ಈ ಆಧಾರದ ಮೇಲೆ ಬಾಂಬೆ ಹೈಕೋರ್ಟ್​ ಸೋಮವಾರ ಆರೋಪಿಗೆ ಜಾಮೀನು ನೀಡಿತು.

ಪೀಟರ್​ ಪ್ಯಾನ್​ ಸಿಂಡ್ರೋಮ್​ ಎಂಬುದು ಒಂದು ರೀತಿಯ ಮಾನಸಿಕ ಸ್ಥಿತಿ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡು ಬರುತ್ತದೆ. ಬೆಳವಣಿಗೆಯು ಕುಂಠಿತಗೊಳ್ಳುವ ಅಥವಾ ಬೆಳವಣಿಗೆ ಸರಿಯಾಗಿ ಆಗದೇ ಅವರು ವರ್ತಿಸುವ ನಡವಳಿಕೆಯನ್ನು ವಿವರಿಸಲು ಮನಶಾಸ್ತ್ರ ತಜ್ಞ ಡಾನ್​ ಕಿಲೆ ಈ ಪದವನ್ನು ರಚಿಸಿದ್ದಾರೆ.

ಸಾಮಾನ್ಯ ಭಾಷೆಯಲ್ಲಿ ಪೀಟರ್​ ಪ್ಯಾನ್​ ಸಿಂಡ್ರೋಮ್​ಅನ್ನು ಮಿತಿ ಮೀರಿ ಬೆಳೆದ ಮಗು ಎಂದೂ ಕರೆಯಬಹುದು. ಈ ಸಿಂಡ್ರೋಮ್​ ಹೊಂದಿರುವ ವ್ಯಕ್ತಿಯ ಮಾನಸಿಕ ಸ್ಥಿತಿ ಬದಲಾವಣೆ ಹೊಂದಿರುತ್ತದೆ. ಆತ ವರ್ತಿಸುವ ರೀತಿಯು ಬದಲಾಗಿರುತ್ತದೆ. ಕೆಲವು ಬಾರಿ ಸಮಾಜವಿರೋಧಿ ವರ್ತನೆಯಿಂದ ಗೊಂದಲಕ್ಕೊಳಗಾಗಬಹುದು ಎಂದು ಮಾನ್ವಿ ಶರ್ಮಾ ಕ್ಲಿನಿಕ್​ ಸೈಕಾಲಿಜಿಸ್ಟ್,​ ಇಂಡಿಯಾ ಟುಡೇ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಅವರು ಯಾವಾಗಲೂ ಹಠವಂತರಾಗಿರುತ್ತಾರೆ(ನಾವು ಮಾಡಿದ್ದೇ ಸರಿ ಎಂಬ ಭಾವನೆ). ಅವರು ಮದ್ಯಪಾನ ಸೇವನೆಯಲ್ಲಿ ಮುಳುಗಿರಬಹುದು. ಅವರು ಮಾಮೂಲಿಯಾಗಿ ವರ್ತಿಸದೆ ವಿಚಿತ್ರವಾಗಿ ವರ್ತಿಸುತ್ತಿರಬಹುದು. ಆದರೆ ತಮಾಷೆಯ ರೀತಿಯಲ್ಲಿ ವರ್ತಿಸುತ್ತಾ ಅವರ ದೈನಂದಿನ ದಿನಚರಿಗಳನ್ನು ಉತ್ತಮವಾಗಿ ನಿರ್ವಹಿಸಬಲ್ಲರು ಎಂದು ಅವರು ಹೇಳಿದ್ದಾರೆ. 1983ರಲ್ಲಿ ಪ್ರಕಟವಾದ ಪೀಟರ್​ ಪ್ಯಾನ್​ ಸಿಂಡ್ರೀಮ್; ಮ್ಯಾನ್​ ಹು ಹ್ಯಾವ್​ ನೆವರ್​ ಗ್ರೋನ್​ ಅಪ್​ ಎಂಬ ಪುಸ್ತಕದಲ್ಲಿ ಡಾನ್​ ಕಿಲೆ ಅವರು ಪೀಟರ್​ ಪ್ಯಾನ್​ ಸಿಂಡ್ರೋಮ್​ ಎಂಬ ಪದವನ್ನು ಪರಿಚಯಿಸಿದರು.

ಇದು ವೈದ್ಯಕೀಯವಾಗಿ ಅಂಗೀಕರಿಸಲ್ಪಟ್ಟ ಸಿಂಡ್ರೋಮ್ ಅಲ್ಲವಾದ್ದರಿಂದ, ಈ ಮಾನಸಿಕ ಸ್ಥಿತಿಗೆ ಒಪ್ಪಿತ ವ್ಯಾಖ್ಯಾನ ಇಲ್ಲ. ಆದರೆ, ಬಾಂಬೆ ಹೈಕೋರ್ಟ್ ಪ್ರತಿವಾದಿ ವಕೀಲರ ವಾದವನ್ನು ಅಂಗೀಕರಿಸಿದ್ದು ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿತು.

ಆರೋಪಿಯು ಸಂತ್ರಸ್ತೆಗೆ ಪರಿಚಿತನಾಗಿದ್ದನು. ಅವರು ಕುಟುಂಬದವರೂ ಸಹ ಒಬ್ಬರಿಗೊಬ್ಬರು ಪರಿಚಿತರು. ಯುವಕನಿಗೆ ಪೀಟರ್​ ಸಿಂಡ್ರೋಮ್​ ಇದ್ದರಿಂದ ಸಂತ್ರಸ್ತೆಯ ಕುಟುಂಬದವರು ಈತನನ್ನು ವಿರೋಧಿಸಿದ್ದರು. ಸಂತ್ರಸ್ತೆ ಸ್ವ ಇಚ್ಚೆಯಿಂದ ಯುವಕನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದರು.

ಬಾಲಕಿಯು ನೀಡಿದ್ದ ಹೇಳಿಕೆಯ ಆಧಾರದ ಮೇಲೆ ಆಕೆ ಸ್ವ ಇಚ್ಛೆಯಿಂದ ಯುವಕನ ಬಳಿ ಹೋಗಿರುವುದು ಗೊತ್ತಾಗುತ್ತದೆ. ಸಂತ್ರಸ್ತೆ ಚಿಕ್ಕವಳಾಗಿದ್ದಳೂ ಸಹ ಅವಳು ಏನು ಮಾಡುತ್ತಿದ್ದಾಳೆ ಎಂಬುದರ ಕುರಿತಾದ ಜ್ಞಾನವಿದೆ ಎಂದು ನ್ಯಾಯಾಲಯವು ಹೇಳಿತು.

ಇದನ್ನೂ ಓದಿ:

ದಾವಣಗೆರೆಯಲ್ಲಿ ಒಂದು ಮಗುವಿಗೆ MIS-C ಸೋಂಕಿನ ಲಕ್ಷಣ ಪತ್ತೆ; ಜಿಲ್ಲಾಧಿಕಾರಿಯಿಂದ ಅಧಿಕೃತ ಮಾಹಿತಿ

ಪ್ರಾಣಿಗಳಿಂದ ಮನುಷ್ಯರಿಗೆ ಬಂತೇ ಕೊರೊನಾ ಸೋಂಕು? ಚೀನಾದಲ್ಲಿ ನಿಜಕ್ಕೂ ನಡೆದದ್ದು ಏನು?