Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಒಂದು ಮಗುವಿಗೆ MIS-C ಸೋಂಕಿನ ಲಕ್ಷಣ ಪತ್ತೆ; ಜಿಲ್ಲಾಧಿಕಾರಿಯಿಂದ ಅಧಿಕೃತ ಮಾಹಿತಿ

ಮಹಿಳಾ ಮತ್ತು ಮಕ್ಕಳ‌ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಈ ಮಾಹಿತಿ ನೀಡಿರುವ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ, MIS-C ಸೋಂಕು ದೃಢವಾಗಿಲ್ಲ. ಸದ್ಯಕ್ಕೆ ಲಕ್ಷಣಗಳು‌ ಕಂಡು ಬಂದಿವೆ. ಚಿಕಿತ್ಸೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ. 

ದಾವಣಗೆರೆಯಲ್ಲಿ ಒಂದು ಮಗುವಿಗೆ MIS-C ಸೋಂಕಿನ ಲಕ್ಷಣ ಪತ್ತೆ; ಜಿಲ್ಲಾಧಿಕಾರಿಯಿಂದ ಅಧಿಕೃತ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: guruganesh bhat

Updated on: Jun 22, 2021 | 9:07 PM

ದಾವಣಗೆರೆ: ಬ್ಲ್ಯಾಕ್ ಫಂಗಸ್ ರೀತಿಯಲ್ಲಿಯೇ ಮಕ್ಕಳಲ್ಲಿ MIS-C ಎಂಬ ಸೋಂಕಿನ ಲಕ್ಷಣ (MIS-C : Multisystem Inflammatory Syndrome in Children)  ಇರುವ ಪ್ರಕರಣವೊಂದು ದಾವಣಗೆರೆ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ ಮಾಹಿತಿ ನೀಡಿದ್ದಾರೆ. ಇದೊಂದು ಹೊಸ ರೀತಿಯ ಸೋಂಕಾಗಿದ್ದು, ಈ ಸೋಂಕಿನ ಲಕ್ಷಣ ಒಂದು ಮಗುವಿನಲ್ಲಿ ಕಂಡುಬಂದಿದೆ. ಮಲ್ಟಿಸಿಸ್ಟಮ್ ಇನ್​ಫ್ಲಾಮೆಟರಿ ಸಿಂಡ್ರೋಮ್ ಎಂದು ಕರೆಯಲ್ಪಡುವ ಈ ಸೋಂಕಿಗೆ ಇದಕ್ಕೆ ಎಸ್ ಎಸ್ ಆಸ್ಪತ್ರೆ ನಿರ್ದೇಶಕ ಹಾಗೂ ಮಕ್ಕಳ ತಜ್ಞ ಡಾ.ನಿಜಲಿಂಗಪ್ಪ ಕಾಳಪ್ಪನ್ನವರ ಅವರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ‌ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಈ ಮಾಹಿತಿ ನೀಡಿರುವ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ, MIS-C ಸೋಂಕು ದೃಢವಾಗಿಲ್ಲ. ಸದ್ಯಕ್ಕೆ ಲಕ್ಷಣಗಳು‌ ಕಂಡು ಬಂದಿವೆ. ಚಿಕಿತ್ಸೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಇಂದಿನ ಕೊವಿಡ್ ಸೋಂಕಿತರೆಷ್ಟು? ಕರ್ನಾಟಕದಲ್ಲಿ ಮಂಗಳವಾರ ಒಟ್ಟು 3,709 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 139 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಇಂದು ಒಂದೇ ದಿನ 803 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 26 ಜನರು ಮೃತಪಟ್ಟಿದ್ದಾರೆ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 4 ಸಾವಿರಕ್ಕಿಂತಲೂ ಕಡಿಮೆಯಾಗಿರುವುದು, ಬೆಂಗಳೂರಿನ ಸೋಂಕಿತರ ಸಂಖ್ಯೆ ಸಾವಿರದ ಗಡಿಯಿಂದ ಕೆಳಗಿಳಿದಿರುವುದು ಉಲ್ಲೇಖನೀಯ ಸಂಗತಿ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 28,150,29ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 26,622,50 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಸೋಂಕಿನಿಂತ ಮೃತಪಟ್ಟವರ ಒಟ್ಟು ಸಂಖ್ಯೆಯು 34,164ಕ್ಕೆ ಏರಿಕೆಯಾಗಿದೆ. 1,18,592 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 803 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಯು 12,07,096ಕ್ಕೆ ಏರಿಕೆಯಾಗಿದೆ. ಈ ಪೈಕಿ 11,222,52 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 26 ಜನರು ಮೃತಪಟ್ಟಿದ್ದಾರೆ. ನಗರದಲ್ಲಿ ಸೋಂಕಿನಿಂದ ಈವರೆಗೆ 15,499 ಜನರು ಸಾವನ್ನಪ್ಪಿದ್ದಾರೆ. 69,344 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ಕರ್ನಾಟಕದಲ್ಲಿ ಮಂಗಳವಾರ ಹೊಸದಾಗಿ 3709 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ, 803 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಬಾಗಲಕೋಟೆ 7, ಬಳ್ಳಾರಿ 44, ಬೆಳಗಾವಿ 134, ಬೆಂಗಳೂರು ಗ್ರಾಮಾಂತರ 103, ಬೀದರ್ 6, ಚಾಮರಾಜನಗರ 52, ಚಿಕ್ಕಬಳ್ಳಾಪುರ 38, ಚಿಕ್ಕಮಗಳೂರು 163, ಚಿತ್ರದುರ್ಗ 77, ದಕ್ಷಿಣ ಕನ್ನಡ 374, ದಾವಣಗೆರೆ 90, ಧಾರವಾಡ 30, ಗದಗ 21, ಹಾಸನ 309, ಹಾವೇರಿ 13, ಕಲಬುರಗಿ 14, ಕೊಡಗು 161, ಕೋಲಾರ 65, ಕೊಪ್ಪಳ 25, ಮಂಡ್ಯ 124, ಮೈಸೂರು 486, ರಾಯಚೂರು 15, ರಾಮನಗರ 20, ಶಿವಮೊಗ್ಗ 169, ತುಮಕೂರು 144, ಉಡುಪಿ 81, ಉತ್ತರ ಕನ್ನಡ 114, ವಿಜಯಪುರ 16, ಯಾದಗಿ ಜಿಲ್ಲೆಯಲ್ಲಿ 11 ಪ್ರಕರಣಗಳು ಪತ್ತೆಯಾಗಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿನಿಂದ 139 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ 26, ದಕ್ಷಿಣ ಕನ್ನಡ 15, ಮೈಸೂರು 11, ಕೋಲಾರ, ದಾವಣಗೆರೆ ತಲಾ 9, ಮಂಡ್ಯ 8, ಧಾರವಾಡ, ಹಾಸನ, ಬಳ್ಳಾರಿಯಲ್ಲಿ ತಲಾ 7, ಉತ್ತರ ಕನ್ನಡ, ತುಮಕೂರು, ಬೆಳಗಾವಿಯಲ್ಲಿ ತಲಾ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ತಲಾ 3, ಚಿತ್ರದುರ್ಗ, ಹಾವೇರಿ, ಕೊಡಗು, ವಿಜಯಪುರ, ಉಡುಪಿ ತಲಾ ಇಬ್ಬರು, ರಾಯಚೂರು, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 34,164 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Good News: ರಾಜ್ಯದ 1.55 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆಗೆ ನಾಳೆ ಸಿಎಂ ಯಡಿಯೂರಪ್ಪ ಚಾಲನೆ

ಈಗಲೇ ಶಾಲೆಗಳ ಆರಂಭದಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುವ ಸಂಭವ: ಟಾಸ್ಕ್​ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್

(Detection of MIS C infection in a child in Davanagere)

ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ