Health Tips: ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಈ 6 ಕಷಾಯಗಳನ್ನು ಮಾಡಿ ಕುಡಿಯಿರಿ
ಕಷಾಯಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುತ್ತದೆ. ಹಾಗಿದ್ದರೆ ಯಾವೆಲ್ಲಾ ಪದಾರ್ಥಗಳಿಂದ ಕಷಾಯ ತಯಾರಿಸಬೇಕು ಎಂಬ ಗೊಂದಲವಿದ್ದರೆ ಇಲ್ಲಿದೆ ಅದಕ್ಕೆ ಉತ್ತರ.
ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದರೂ, ಕಾಲೋಚಿತವಾಗಿ ಬರುವ ಕಾಯಿಲೆಗಳ ಬಗ್ಗೆ ನಾವು ಗಮನಹರಿಸಿವುದು ಸೂಕ್ತ. ಅದರಲ್ಲೂ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಮಳೆಗೆ ಹೆಚ್ಚಿನ ಜನರು ಶೀತ ಮತ್ತು ಕೆಮ್ಮು ಹಾಗೂ ಇನ್ನಿತರ ಸೋಂಕುಗಳಿಗೆ ಗುರಿಯಾಗುತ್ತಾರೆ. ಆಸ್ಪತ್ರೆಗೆ ಈಗ ಹೋಗುವುದು ಅಷ್ಟು ಸುಲಭವಲ್ಲ. ಹೀಗಾಗಿ ಪ್ರಾಚೀನ ಕಾಲದಿಂದ ಮುಂದುವರಿದುಕೊಂಡು ಬಂದ ಕಷಾಯವನ್ನು ಮಾಡಿ ಕುಡಿಯಿರಿ. ಈ ಕಷಾಯವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇವುಗಳು ಮುಖ್ಯ ಪಾತ್ರ ವಹಿಸುತ್ತದೆ. ಕಷಾಯಗಳಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುತ್ತದೆ. ಹಾಗಿದ್ದರೆ ಯಾವೆಲ್ಲಾ ಪದಾರ್ಥಗಳಿಂದ ಕಷಾಯ ತಯಾರಿಸಬೇಕು ಎಂಬ ಗೊಂದಲವಿದ್ದರೆ ಇಲ್ಲಿದೆ ಅದಕ್ಕೆ ಉತ್ತರ.
ಅಶ್ವಗಂಧ ಅಶ್ವಗಂಧ ವಿವಿಧ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೆ ಇದನ್ನು ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಳಿಗೆ ಬಳಸಲಾಗುತ್ತದೆ. ಇದು ಪೆಪ್ಟೈಡ್ಸ್, ಅಮೈನೋ ಆಮ್ಲಗಳು, ಲಿಪಿಡ್ಳಂತಹ ಗುಣಗಳನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಒತ್ತಡ, ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.
ಬ್ರಾಹ್ಮಿ ಬ್ರಾಹ್ಮಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆತಂಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಒತ್ತಡ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ. ಬ್ರಾಹ್ಮಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮಧುಮೇಹ ಮತ್ತು ಕ್ಯಾನ್ಸರ್ ನಂತಹ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ತುಳಸಿ ಬೀಜಗಳು ತುಳಸಿ ಬೀಜಗಳಿಂದ ತಯಾರಿಸುವ ಕಷಾಯ ಕೆಮ್ಮು ಮತ್ತು ಶೀತದಿಂದ ಮುಕ್ತಿ ನೀಡುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಳಸಿ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಎ, ಬಿ, ಇ, ಕೆ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣವಿದೆ. ಈ ಬೀಜಗಳಲ್ಲಿ ಫ್ಲೇವನಾಯ್ಡ್ಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಸೋಂಪು ಬೀಜಗಳು ಸೋಂಪು ಟ್ರಾನ್ಸ್ ಅನಾಥೋಲ್ ಅನ್ನು ಹೊಂದಿರುತ್ತದೆ. ಇದು ಅನೇಕ ರೀತಿಯ ಸೋಂಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೋಂಪಿನಿಂದ ತಯಾರಿಸಿದ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಉರಿಯೂತ ಕಡಿಮೆಯಾಗುತ್ತದೆ. ಶ್ವಾಸನಾಳವನ್ನು ಸ್ವಚ್ಛಗೊಳಿಸುವಲ್ಲಿಯೂ ಸೋಂಪು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ.
ಗಸಗಸೆ ಗಸಗಸೆ ದೇಹವನ್ನು ಹೈಡ್ರೀಕರಿಸುವುದಕ್ಕೆ ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಉಪಯುಕ್ತವಾಗಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ಸತು ಸಮೃದ್ಧವಾಗಿದೆ. ಗಸಗಸೆ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
Omega-3: ರೋಗನಿರೋಧಕ ಶಕ್ತಿ ಹೆಚ್ಚಿಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಒಮೆಗಾ-3 ಆಹಾರಗಳ ಬಗ್ಗೆ ತಿಳಿಯಿರಿ
ರಾತ್ರಿ ಊಟ ಮಾಡಿದ ಬಳಿಕ ಸ್ನಾನ ಮಾಡುವ ಅಭ್ಯಾಸ ಇದೆಯೇ? ಹಾಗಿದ್ದರೆ ಅದರಿಂದ ಉಂಟಾಗುವ ಸಮಸ್ಯೆ ಬಗ್ಗೆ ಗಮನಿಸಿ