ಆಲೂಗಡ್ಡೆ ಕಟ್ಲೇಟ್ ಹೇಗೆ ಮಾಡ್ತಾರೆ ಗೊತ್ತಾ? ತುಂಬಾ ಸುಲಭ
ಸಾಮಾನ್ಯವಾಗಿ ಎಲ್ಲರೂ ಅಲೂಗಡ್ಡೆ ಸಾಂಬಾರ್, ಅಲೂಗಡ್ಡೆ ಪಲ್ಯ, ಅಲೂಗಡ್ಡೆ ಬೋಂಡಾ ಮಾಡಿ ತಿಂದಿದ್ದೀರಾ. ಆದ್ರೆ ಆಲೂಗಡ್ಡೆಯಿಂದ ಮಾಡಿದ ಕಟ್ಲೇಟ್ ತಿಂದರೆ ವಾರಕ್ಕೊಮ್ಮೆಯಾದರೂ ತಿನ್ನುತ್ತಿರಬೇಕು ಅಂತ ಅನಿಸದೆ ಇರದು.
ಯಾವುದೇ ತರಕಾರಿ ಸಾಂಬರ್ ಮಾಡಿದ್ರೂ ಅದಕ್ಕೆ ಒಂದು ಅಥವಾ ಎರಡು ಆಲೂಗಡ್ಡೆ ಹಾಕಿದ್ರೆ ಆ ಸಾಂಬಾರಿನ ರುಚಿಯೇ ಬೇರೆ. ಮಕ್ಕಳಂತೂ ಸಾಂಬಾರಿನಲ್ಲಿ ಆಲೂಗಡ್ಡೆಯನ್ನು ಆರಿಸಿ ಆರಿಸಿ ತಿನ್ನುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಅಲೂಗಡ್ಡೆ ಸಾಂಬಾರ್, ಅಲೂಗಡ್ಡೆ ಪಲ್ಯ, ಅಲೂಗಡ್ಡೆ ಬೋಂಡಾ ಮಾಡಿ ತಿಂದಿದ್ದೀರಾ. ಆದ್ರೆ ಆಲೂಗಡ್ಡೆಯಿಂದ ಮಾಡಿದ ಕಟ್ಲೇಟ್ ತಿಂದರೆ ವಾರಕ್ಕೊಮ್ಮೆಯಾದರೂ ತಿನ್ನುತ್ತಿರಬೇಕು ಅಂತ ಅನಿಸದೆ ಇರದು. ಹೊರಗೆ ಜೋರಾಗಿ ಮಳೆ ಸುರಿಯುತ್ತಿದೆ. ಚಳಿಗೆ ಬಿಸಿ ಬಿಸಿ ತಿಂಡಿ ತಿನ್ನಬೇಕು ಅಂತ ಅನಿಸುತ್ತೆ. ಹೀಗಾಗಿ ಈ ಮಳೆಗಾಲದಲ್ಲಿ ಕಾಫಿಯೊಂದಿಗೆ ಆಲೂ ಕಟ್ಲೇಟ್ ಮಾಡಿ ತಿನ್ನಿ.
ಮಾಡಲು ಬೇಕಾಗುವ ಸಾಮಾಗ್ರಿಗಳು 6 ಅಲೂಗಡ್ಡೆ 2 ಹಸಿ ಮೆಣಸಿನಕಾಯಿ ಅರ್ಧ ಚಮಚ ಖಾರದ ಪುಡಿ ಗರಂ ಮಸಾಲ ಎಣ್ಣೆ 3 ಬ್ರೆಡ್ (loaves) ಕೊತ್ತಂಬರಿ ಸೊಪ್ಪು ಚಾಟ್ ಮಸಾಲ ಉಪ್ಪು
ಮಾಡುವ ವಿಧಾನ ಮೊದಲು ಆಲೂಗಡ್ಡೆಯನ್ನು ಬೇಯಿಸಬೇಕು. ಬೆಂದ ನಂತರ ಸಿಪ್ಪೆ ತೆಗೆಯಿರಿ. ಒಂದು ಬೌಲ್ ಒಳಗೆ ಹಾಕಿ ಚೆನ್ನಾಗಿ ಪುಡಿಮಾಡಿ. ಹಸಿ ಮೆಣಸಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿ, ಪುಡಿ ಮಾಡಿದ ಆಲೂಗಡ್ಡೆಗೆ ಹಾಕಿ. ಇದಕ್ಕೆ ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಚಾಟ್ ಮಸಾಲ ಮತ್ತು ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
ಬ್ರೆಡ್ಗೆ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ಕಲಸಿ. ಬ್ರೆಡ್ ಮತ್ತು ಆಲೂಗಡ್ಡೆ ಮಿಶ್ರಣವನ್ನು ಒಂದೇ ಬೌಲ್ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಬಾಣಲೆಯಲ್ಲಿ ಎಣ್ಣೆಯಿಡಿ. ಎಣ್ಣೆ ಕಾದ ನಂತರ, ಸಿದ್ಧವಾಗಿರುವ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಕೈಯಿಂದ ಚಿಕ್ಕದಾಗಿ ತಟ್ಟಿ. ಬಿಲ್ಲೆಗಳನ್ನು ಕಾದ ಎಣ್ಣೆಗೆ ಹಾಕಿ. ಗೋಲ್ಡನ್ ಬ್ರೌನ್ ಬರುವವರೆಗೂ ತಿಂಡಿಯನ್ನು ಕರಿಯಿರಿ. ರೆಡಿಯಾದ ಆಲೂಗಡ್ಡೆ ಕಟ್ಲೇಟ್ನ ಚಣ್ನಿಯೊಂದಿಗೆ ಸವಿಯಿರಿ.
ಇದನ್ನೂ ನೋಡಿ
ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್
Health Tips: ಆಹಾರ ಕ್ರಮ ಸರಿಯಾಗಿದ್ದಲ್ಲಿ ಆರೋಗ್ಯವೂ ಸುಧಾರಿಸುತ್ತದೆ; ಇಲ್ಲಿದೆ ಕೆಲವು ಸಲಹೆಗಳು
(How to make Potato Cutlet in home with tasty)
Published On - 5:55 pm, Tue, 22 June 21