AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತವನ್ನೂ ಒಳಗೊಂಡಂತೆ ವಿಶ್ವದ ಅತ್ಯಂತ ದುಬಾರಿ ಚಹ ಸಿಗುವ 7 ಸ್ಥಳಗಳು ಯಾವುದು ಗೊತ್ತಾ?

world most expensive tea: ಚಹದ ಬೆಲೆ ಹೆಚ್ಚಿದೆ ಅಂದರೆ ಅದರರ್ಥ ಆ ಚಹ ಬಹಳ ಅಪರೂಪದ್ದಾಗಿರುತ್ತದೆ. ಅದರ ಮೌಲ್ಯವನ್ನಾಧರಿಸಿ ದರವನ್ನು ನಿಗದಿ ಮಾಡಲಾಗುತ್ತದೆ.

ಭಾರತವನ್ನೂ ಒಳಗೊಂಡಂತೆ ವಿಶ್ವದ ಅತ್ಯಂತ ದುಬಾರಿ ಚಹ ಸಿಗುವ 7 ಸ್ಥಳಗಳು ಯಾವುದು ಗೊತ್ತಾ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 22, 2021 | 10:35 AM

Share

ಚಹಾ ಪ್ರಿಯರಿಗೆ ಚಹಾದ ರುಚಿ ಸವಿಯಲು ಸಮಯ ನಿದಗಿಯಾಗಬೇಕಂತಿಲ್ಲ. ಚಹಾದ ಅಂಗಡಿ ಕಂಡರೆ ಸಾಕು ಒಂದು ಕಪ್​ ಚಹಾವನ್ನು ಸುರ್​​… ಎಂದು ಸವಿದುಬಿಡೋದೇ! ಚಹದ ಸವಿಯನ್ನು ಹೇಳುವುದಕ್ಕಿಂತ ಅದನ್ನು ಅನುಭವಿಸಿದವರಿಗೇ ಗೊತ್ತು ಅದರ ರುಚಿ. ಗಮ್​… ಎಂದು ಪರಿಮಳ ಬರುತ್ತಿದ್ದಬೇಕು.. ಬಿಸಿ ಬಿಸಿಯಾಗಿ ಹೊಗೆ ಹಾರುತ್ತಿರಬೇಕು.. ಇದರ ಸವಿಯನ್ನು ವರ್ಣಿಸಲು ಸಾಧ್ಯವೇ? ಹಾಗಿರುವಾಗ ಅತ್ಯಂತ ದುಬಾರಿ ಚಹ ಎಲ್ಲಿ ಸಿಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಭಾರತ ಸೇರಿದಂತೆ ವಿಶ್ವದ 7 ಸ್ಥಳಗಳಲ್ಲಿ ಅತ್ಯಂತ ದುಬಾರಿ ಚಹ ಸಿಗುವ ಪಟ್ಟಿ ಇಲ್ಲಿದೆ.

ಚಹದ ಬೆಲೆ ಹೆಚ್ಚಿದೆ ಅಂದರೆ ಅದರರ್ಥ ಆ ಚಹ ಬಹಳ ಅಪರೂಪದ್ದಾಗಿರುತ್ತದೆ. ಅದರ ಮೌಲ್ಯವನ್ನಾಧರಿಸಿ ದರವನ್ನು ನಿಗದಿ ಮಾಡಲಾಗುತ್ತದೆ. ಅಷ್ಟು ರುಚಿಯಾಗಿರುವ ಚಹವನ್ನು ಜೀವನದಲ್ಲಿ ಒಂದು ಬಾರಿಯಾದರೂ ಸವಿಯಲೇ ಬೇಕು. ಭಾರತವನ್ನೂ ಒಳಗೊಂಡಂತೆ ವಿಶ್ವದ 7 ಸ್ಥಳಗಳಲ್ಲಿ ಅತ್ಯಂತ ದುಬಾರಿ ಚಹ ರಲ್ಲಿ ಸಿಗುತ್ತವೆ ಎಂಬುದನ್ನು ತಿಳಿಯಿರಿ.

ಚೀನಾದ ಡಾ ಹಾಂಗ್​ ಪಾವೊ ಡಾ ಹಾಂಗ್​ ಪಾವೊ ಎಂಬುದು ಒಂದು ಊಲಾಂಗ್​ ಚಹ. ಇದು ವಿಶ್ವದ ಅತ್ಯಂತ ದುಬಾರಿ ಚಹಗಳಲ್ಲಿ ಒಂದು. ಊಲಾಂಗ್​ ಚಹ ಮೂಲತಃ ಚೀನಾದ ಸಾಂಪ್ರದಾಯಿಕ ಚಹ. ಚಹದ ಎಲೆಗಳು ಆಗ್ನೇಯ ಪ್ರಾಂತ್ಯದ ಫುಜಿಯಾನ್​ನ ಪರ್ವತಗಳಲ್ಲಿನ ಮರಗಳಲ್ಲಿ ಕಂಡು ಬರುತ್ತದೆ ಹಾಗೂ ಈ ಎಲೆಗಳು ಅತ್ಯಂತ ಅಪರೂಪ. ಆದ್ದರಿಂದಲೇ ಇದರಿಂದ ತಯಾರಿಸಿದ ಚಹ ಅತ್ಯಂತ ದುಬಾರಿ. ಇದರ ಬೆಲೆ ಅಂದಾಜಿಗೆ 2,90,813 ರೂಪಾಯಿ ಹಾಗೂ ಒಂದು ಮಡಕೆಗೆ ಸುಮಾರು 7,30,569ರೂಪಾಯಿ.

ಜಪಾನ್ ಜ್ಯೋಕುರೊ

ಜಪಾನ್​ನಲ್ಲಿ ಕಂಡು ಬರುವ ಈ ಚಹವು ಹಸಿರು ಚಹ. ಇದನ್ನು ಹೆಚ್ಚಾಗಿ ನೆರಳಿನಲ್ಲಿ ಬೆಳೆಸಲಾಗುತ್ತದೆ ಮತ್ತು ಎಲೆಗಳ ಕೊಯ್ಲು ಪ್ರಾರಂಭದ ಕೆಲವು ವಾರಗಳ ಮೊದಲು ಸೂರ್ಯನ ಕಿರಣ ತಾಗದಂತೆ ನೋಡಿಕೊಳ್ಳಲಾಗುತ್ತದೆ. ಹೀಗೆ ಮಾಡುವುದರಿಂದ ಎಲೆಗಳಲ್ಲಿ ಅಮೈನೊ ಆಮ್ಲಗಳು ಉತ್ಪತ್ತಿಯಾಗುತ್ತದೆ. ಇದು ಆ ಎಲೆಗಳಲ್ಲಿ ಉತ್ತಮ ಪರಿಮಳವನ್ನು ನೀಡುತ್ತದೆ. ಅಂದಾಜಿಗೆ ಈ ಚಹದ ಬೆಲೆ 10,78,321 ರೂಪಾಯಿ.

ಅಸ್ಸಾಂ ಗೋಲ್ಡ್​ ಟೀ

ವಿಶ್ವದ ಅತ್ಯಂತ ದುಬಾರಿ ಚಹಗಳಲ್ಲಿ ಈ ಚಹವೂ ಒಂದು. ಮನೋಹರಿ ಗೋಲ್ಡ್​ ಟೀ ಇದು ಅಪರೂಪದಲ್ಲಿ ಅಪರೂಪದ ಚಹಾಗಳಲ್ಲಿ ಒಂದಾಗಿದೆ. ಔಷಧೀ ಗುಣಗಳನ್ನು ಹೊಂದಿರುವ ಈ ಚಹ ಆರೋಗ್ಯಕ್ಕೆ ಉತ್ತಮ. ಚಹದ ಮೊಗ್ಗನ್ನು ಬೆಳಿಗ್ಗೆ ತೆರಿದುಹಾಕುವುದರಿಂದ ಅವುಗಳ ಗುಣಮಟ್ಟ ಮತ್ತು ಸುವಾಸನೆ ಹಾಳಾಗುವುದಿಲ್ಲ. ವರಿಗಳ ಪ್ರಕಾರ 2018ರಲ್ಲಿ ಮನೋಹರಿ ಗೋಲ್ಡ್​ ಭಾತರದ ಅತ್ಯಂತ ದುಬಾರಿ ಚಹವಾಯಿತು. ಪ್ರತಿ ಕೆಜಿಗೆ 39,001 ರೂಪಾಯಿ, 2019ರಲ್ಲಿ ಕೆಜಿಗೆ 50,000 ರೂಪಾಯಿ ಹಾಗೂ 2020ರಲ್ಲಿ ಕೆಜಿಗೆ 75,000 ರೂಪಾಯಿಗೆ ಮಾರಾಟವಾಗಿದೆ.

ಪಾಂಡಾ ಡಂಗ್​ ಟೀ ರಾಯಿಟರ್ಸ್​ ವರದಿ ಪ್ರಕಾರ, ಪಾಂಡಾ ಸಗಣಿಯನ್ನು ಈ ಚಹಾದ ಎಲೆಗಳ ಸಮೃದ್ಧಿಗೆ ರಸಗೊಬ್ಬರವಾಗಿ ಬಳಸಲಾಗುತ್ತದೆ. ಮೂಲತಃ ಈ ಚಹಾವನ್ನು ನೈರುತ್ಯ ಚೀನಾದ ಉದ್ಯಮಿ ಯಾನ್ಶಿ ಎನ್ನುವವರು ಪ್ರಾರಂಭಿಸಿದರು. ಅವರು ಸಿಚುವಾನ್​ನ ಪರ್ವತ ಯಾನ್​ ಪ್ರದೇಶದಲ್ಲಿ ಚಹಾವನ್ನು ಬೆಳೆಯುತ್ತಾರೆ. ಕ್ಯಾನ್ಸರ್​ ತಡೆಗಟ್ಟುವ ಗುಣವನ್ನು ಈ ಚಹಾದ ಎಲೆಗಳು ಹೊಂದಿವೆ ಎಂಬುದು ತಿಳಿದು ಬಂದಿವೆ.

ಸಿಲ್ವರ್​ ಟಿಪ್ಸ್​ ಇಂಪೀರಿಯರ್​ ಟೀ ಡಾರ್ಜಲಿಂಗ್​ನ ಸಿಲ್ವರ್​ ಟಿಪ್ಸ್​ ಇಂಪೀರಿಯಲ್​ ಚಹವನ್ನು ಭಾರತದಲ್ಲಿ ಪ್ರತಿ ವರ್ಷ ಸೀಮಿತ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಇದು ಒಂದು ರೀತಿಯ ಊಲಾಂಗ್​ ಚಹ. ಈ ಚಹ ವಿಶಿಷ್ಟವಾದ ಪರಿಮಳವನ್ನು ಹೊಂದಿರುತ್ತದೆ ಮತ್ತು ಕೊಂಚ ಬೆಳ್ಳಿ ಬಣ್ಣದಲ್ಲಿರುತ್ತದೆ. ಹುಣ್ಣಿಮೆಯ ಹಗಲು ರಾತ್ರಿಗಳಲ್ಲಿ ಮಾತ್ರ ಈ ಎಲೆಯನ್ನು ಕೊಯ್ಲು ಮಾಡಲಾಗುತ್ತದೆ. ಪ್ರತಿ ಕಿಲೋಗ್ರಾಂಗೆ 30,000 ರೂಪಾಯಿ ಇದೆ. 2014ರಲ್ಲಿ ಇದು ಭಾರತದಲ್ಲಿ ಅತ್ಯಂತ ದುಬಾರಿ ಚಹ ಎಂದು ಹೆಸರು ಪಡೆದುಕೊಂಡಿತು.

ಚೀನಾ ಟೈಗುವಾನಿನ್​ ಟೀ ಚೀನಾದ ಫುಜಿಯಾನ್​ ಪ್ರಾಂತ್ಯದಲ್ಲಿ ಹೆಚ್ಚು ಕಂಡು ಬರುತ್ತದೆ. ಈ ಚಹದ ಎಲೆಗಳು ಸೂರ್ಯನ ಕಿರಣಗಳು ತಾಗುವಲ್ಲಿ ಬಾಗಿಕೊಳ್ಳುತ್ತವೆ. ಇದು ಹಸಿರು ಮತ್ತು ಹೆಚ್ಚು ಕಪ್ಪು ಬಣ್ಣದಲ್ಲಿ ಗೋಚರವಾಗುತ್ತದೆ. ಆರೋಗ್ಯಕ್ಕೆ ಒಳ್ಳೆಯದು ಮತ್ತು ಅಪರೂಪದ ಎಲೆಗಳಾಗಿರುವುದರಿಂದ ಈ ಚಹ ಎಚ್ಚು ದುಬಾರಿಯಾಗಿದೆ. ವಿಶೇಷವೆಂದರೆ ಪರಿಮಳವನ್ನು ಕಳೆದುಕೊಳ್ಳುವ ಮೊದಲು ಏಳು ಬಾರಿ ಈ ಎಲೆಗಳನ್ನು ಬಳಸಬಹುದಾಗಿದೆ. ಇದರ ಬೆಲೆ ಪ್ರತಿ ಕೊಲೋಗ್ರಾಂಗೆ 30,968 ರೂಪಾಯಿ.

ಸಿಂಗಾಪುರ ಯೆಲ್ಲೋ ಗೋಲ್ಡ್​ ಬಡ್ಸ್​ ಯೆಲ್ಲೋ ಗೋಲ್ಡ್​ ಬಡ್ಸ್​ ಟೀ ಇದೂ ಸಹ ವಿಶ್ವದ ದುಬಾರಿ ಚಹಗಳಲ್ಲಿ ಒಂದಾಗಿದೆ. ಈ ಚಹದ ಎಲೆಗಳು ಸಿಂಗಾಪುರದಲ್ಲಿ ಮಾತ್ರ ಕಂಡು ಬರುತ್ತವೆ. ಇದರ ಎಲೆಗಳು ಹಳದಿ ಬಣ್ಣದ್ದಾಗಿದ್ದು ಅದು ಚಿನ್ನದ ಬಣ್ಣವನ್ನು ಹೊಂದಿದೆ. ಔಷಧೀ ಗುಣಗಳನ್ನೂ ಸಹ ಹೊಂದಿವೆ. ಇದರ ಬೆಲೆ ಸುಮಾರು ಕಿಲೋಗ್ರಾಂಗೆ 7,72,943 ರೂಪಾಯಿ.

ಇದನ್ನೂ ಓದಿ:

ಬಿಸಿಬಿಸಿ ಚಹಾದ ಜೊತೆ ಸವಿಯಲು ಗರಿಗರಿ ಸಮೋಸಾ ಮಾಡುವ ವಿಧಾನ ಕಲಿಯಿರಿ

ಚಹಾ ಕುಡಿಯುವಾಗ ಖದೀಮರ ಕೈಚಳಕ: ಸ್ಕೂಟಿಯಲ್ಲಿದ್ದ 1 ಲಕ್ಷದ 80 ಸಾವಿರ ಹಣ ಹೊತ್ತೊಯ್ದ ಕಳ್ಳರು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ