ಚಹಾ ಕುಡಿಯುವಾಗ ಖದೀಮರ ಕೈಚಳಕ: ಸ್ಕೂಟಿಯಲ್ಲಿದ್ದ 1 ಲಕ್ಷದ 80 ಸಾವಿರ ಹಣ ಹೊತ್ತೊಯ್ದ ಕಳ್ಳರು

ಸ್ಕೂಟಿಯಲ್ಲಿದ್ದ 1 ಲಕ್ಷದ 80 ಸಾವಿರ ಹಣವನ್ನು ಖದೀಮರು ಕದ್ದೊಯ್ದ ಘಟನೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ. ಜೀರಗಾಳ ಗ್ರಾಮದ ಮೆಹಬೂಬ್ ಎಂಬುವವರ ಹಣ ಕಳ್ಳತನವಾಗಿದೆ.

ಚಹಾ ಕುಡಿಯುವಾಗ ಖದೀಮರ ಕೈಚಳಕ: ಸ್ಕೂಟಿಯಲ್ಲಿದ್ದ 1 ಲಕ್ಷದ 80 ಸಾವಿರ ಹಣ ಹೊತ್ತೊಯ್ದ ಕಳ್ಳರು
ಪ್ರಾತಿನಿಧಿಕ ಚಿತ್ರ
Follow us
KUSHAL V
|

Updated on: Mar 12, 2021 | 11:23 PM

ಬಾಗಲಕೋಟೆ: ಸ್ಕೂಟಿಯಲ್ಲಿದ್ದ 1 ಲಕ್ಷದ 80 ಸಾವಿರ ಹಣವನ್ನು ಖದೀಮರು ಕದ್ದೊಯ್ದ ಘಟನೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ. ಜೀರಗಾಳ ಗ್ರಾಮದ ಮೆಹಬೂಬ್ ಎಂಬುವವರ ಹಣ ಕಳ್ಳತನವಾಗಿದೆ. ಮೆಹಬೂಬ್​ HDFC ಬ್ಯಾಂಕ್​ನಿಂದ ಹಣ ಪಡೆದು ತೆರಳುತ್ತಿದ್ದರು. ಮಾರ್ಗ ಮಧ್ಯೆ ಚಹಾ ಕುಡಿಯಲು ಹೋಟೆಲ್​ ಎದುರು ಸ್ಕೂಟಿ ನಿಲ್ಲಿಸಿದ್ದಾರೆ. ಇದೇ ವೇಳೆ ಮೆಹಬೂಬ್​ರನ್ನ ಹಿಂಬಾಲಿಸಿದ್ದ ಖದೀಮರು ಅವರು​​ ಹೋಟೆಲ್​​ ಒಳಗೆ ತೆರಳುತ್ತಿದ್ದಂತೆ ಕಳ್ಳತನ ಮಾಡಿದ್ದಾರೆ. ಸ್ಕೂಟಿಯಲ್ಲಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಾನಸಿಕ ಅಸ್ವಸ್ಥ ವೃದ್ಧೆ ಮೇಲೆ ಅತ್ಯಾಚಾರವೆಸಗಿದ್ದವರ ಸೆರೆ ಇತ್ತ, ಮಾನಸಿಕ ಅಸ್ವಸ್ಥ ವೃದ್ಧೆ ಮೇಲೆ ಅತ್ಯಾಚಾರವೆಸಗಿದ್ದವರನ್ನು ಅರೆಸ್ಟ್​ ಮಾಡಲಾಗಿದೆ. ಶ್ರೀರಾಮ್, ಸೈಯದ್ ಅರ್ಬಾಜ್ ಬಂಧಿತ ಆರೋಪಿಗಳು. ಆರೋಪಿಗಳು ನಿನ್ನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೆಟ್ಕೂರು ಬಸ್ ನಿಲ್ದಾಣದಲ್ಲಿ ಅತ್ಯಾಚಾರವೆಸಗಿದ್ದರು. ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರವೆಸಗಿ ಪರಾರಿ ಆಗಿದ್ದರು. ಸದ್ಯ, ಮಾನಸಿಕ ಅಸ್ವಸ್ಥೆ‌ಯನ್ನು ಮಹಿಳಾ ಸಾಂತ್ವನ‌ ಕೇಂದ್ರಕ್ಕೆ ದಾಖಲಿಸಲಾಗಿದೆ. ಬೇತಮಂಗಲದ ಮಹಿಳಾ ಸಾಂತ್ವನ‌ ಕೇಂದ್ರಕ್ಕೆ ದಾಖಲಿಸಲಾಗಿದೆ.

ಹಣದಾಸೆಗೆ ಬಾಲಕನನ್ನು ಅಪಹರಿಸಿ ಕೊಲೆ: ಒಬ್ಬನ ಬಂಧನ, ಬಾಲಕ ವಶಕ್ಕೆ ಹಣದಾಸೆಗೆ ಬಾಲಕನನ್ನು ಅಪಹರಿಸಿ ಕೊಲೆಗೈದಿದ್ದ ಪ್ರಕರಣದಲ್ಲಿ ಹಾವೇರಿ ಪೊಲೀಸರಿಂದ ಒಬ್ಬನ ಬಂಧನವಾಗಿದೆ. ಇದಲ್ಲದೆ ಬಾಲಕನೋರ್ವನನ್ನು ವಶಕ್ಕೆ ಪಡೆಯಲಾಗಿದೆ. ರಿತೇಶ್​ ಮೇಟಿ ಎಂಬುವವನ ಬಂಧನವಾಗಿದ್ದು ಓರ್ವ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರೊಫೆಸರ್ ಓರ್ವರ ಪುತ್ರರು. ಬಂಧಿತರು ಮಾ.7ರಂದು ಬಾಲಕ ತೇಜಸ್​ಗೌಡನನ್ನ ಅಪಹರಿಸಿ ಹತ್ಯೆಗೈದಿದ್ದಾರೆ. ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ಇಬ್ಬರು ಕ್ರೈಂ ಸೀರಿಯಲ್​ಗಳಿಂದ ಪ್ರೇರಣೆಗೊಂಡು ದುಷ್ಕೃತ್ಯಕ್ಕೆ ಕೈಹಾಕಿದ್ದರು. ಹಣದಾಸೆಗೆ ಬಾಲಕನನ್ನ ಅಪಹರಿಸಿ ಕೃತ್ಯ ಎಸಗಿದ್ದರು.

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನವಾಗಿರುವ ಪ್ರಕರಣ ದಾವಣಗೆರೆ ಜಿಲ್ಲೆ ಹರಿಹರ ನಗರದ ಹೊರವಲಯದಲ್ಲಿ ವರದಿಯಾಗಿದೆ. ಸಿ.ಆರ್.ಅರವಿಂದನ್‌(33), ಅನಿಲ್‌ ಕುಮಾರ್(24) ಬಂಧಿತ ಆರೋಪಿಗಳು. ಬಂಧಿತರಿಂದ 2.35 ಲಕ್ಷ ರೂಪಾಯಿ ಮೌಲ್ಯದ 5.77 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ. ಬಂಧಿತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ನಿವಾಸಿಗಳು. ದಾವಣಗೆರೆ CEN ಠಾಣೆ ಪೊಲೀಸರಿಂದ ಕಾರ್ಯಾಚರಣೆ ನಡೆದಿದೆ.

DVG GANJA ARREST 3

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಕಿಡಿಗೇಡಿಗಳಿಂದ ಗ್ಯಾರೇಜ್​​ಗೆ ಬೆಂಕಿ: 4 ಕಾರು ಸುಟ್ಟು ಕರಕಲು ಕಿಡಿಗೇಡಿಗಳು ಗ್ಯಾರೇಜ್​​ಗೆ ಬೆಂಕಿ ಹಚ್ಚಿ 4 ಕಾರು ಸುಟ್ಟು ಕರಕಲಾಗಿರುವ ಘಟನೆ ಆನೇಕಲ್ ಪಟ್ಟಣದ ಲಕ್ಷ್ಮೀ ಥಿಯೇಟರ್ ಸಮೀಪ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಮುಂದಾದರು. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ.

ANK FIRE 3

ಕಿಡಿಗೇಡಿಗಳಿಂದ ಗ್ಯಾರೇಜ್​​ಗೆ ಬೆಂಕಿ

ಟ್ರ್ಯಾಕ್ಟರ್​ನಲ್ಲಿ ಮೇವು ಸಾಗಾಟ ಮಾಡುವ ವೇಳೆ ಹೊತ್ತಿಕೊಂಡ ಬೆಂಕಿ ಟ್ರ್ಯಾಕ್ಟರ್​ನಲ್ಲಿ ಒಣ ಮೇವು ಸಾಗಾಟ ಮಾಡುವ ವೇಳೆ ಅವಘಡ ಸಂಭವಿಸಿದೆ. ಟ್ರ್ಯಾಕ್ಟರ್​ನಲ್ಲಿ ಮೇವು ಸಾಗಾಟ ಮಾಡುವ ವೇಳೆ ಬೆಂಕಿ ಹೊತ್ತಿಕೊಂಡಿದೆ. ಟ್ರ್ಯಾಕ್ಟರ್ ಟ್ರೈಲರ್​ನಲ್ಲಿದ್ದ ಒಣಮೇವು ಅಕಸ್ಮಿಕ ಅಗ್ನಿಗೆ ಆಹುತಿಯಾಗಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನಾದ ಕೆ.ಡಿ ಗ್ರಾಮದ ಬಳಿ ಘಟನೆ ನಡೆದಿದೆ. ಘಟನೆಯ ಬಳಿಕ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಟ್ರ್ಯಾಕ್ಟರ್ ಮಾಲೀಕರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

VIJ TRACTOR

ಟ್ರ್ಯಾಕ್ಟರ್​ನಲ್ಲಿ ಮೇವು ಸಾಗಾಟ ಮಾಡುವ ವೇಳೆ ಹೊತ್ತಿಕೊಂಡ ಬೆಂಕಿ

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ವಶಕ್ಕೆ ಪಡೆದಿದ್ದ ಅಷ್ಟೂ ಜನರನ್ನ ಬಿಟ್ಟು ಕಳುಹಿಸಿದ ಎಸ್​ಐಟಿ

ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ