ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ವಶಕ್ಕೆ ಪಡೆದಿದ್ದ ಅಷ್ಟೂ ಜನರನ್ನ ಬಿಟ್ಟು ಕಳುಹಿಸಿದ ಎಸ್ಐಟಿ
ಪ್ರಕರಣದಲ್ಲಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ವಿಶೇಷ ತನಿಖಾ ತಂಡ ವಿಚಾರಣೆ ಬಳಿಕ ಎಲ್ಲರನ್ನೂ ವಾಪಸ್ ಕಳಿಸಿದೆ. ವಶಕ್ಕೆ ಪಡೆದಿದ್ದ ಅಷ್ಟೂ ಜನರನ್ನ ವಾಪಸ್ ಕಳಿಸಿದೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಬೆಳವಣಿಗೆ ನಡೆದಿದೆ. ಹೌದು, ಪ್ರಕರಣದಲ್ಲಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ವಿಶೇಷ ತನಿಖಾ ತಂಡ ವಿಚಾರಣೆ ಬಳಿಕ ಎಲ್ಲರನ್ನೂ ವಾಪಸ್ ಕಳಿಸಿದೆ. ವಶಕ್ಕೆ ಪಡೆದಿದ್ದ ಅಷ್ಟೂ ಜನರನ್ನ ವಾಪಸ್ ಕಳಿಸಿದೆ. ಜೊತೆಗೆ, ಮತ್ತೆ ವಿಚಾರಣೆಗೆ ಕರೆದಾಗ ಆಗಮಿಸುವಂತೆ ಸೂಚನೆ ಸಹ ನೀಡಿದೆ. ಎಸ್ಐಟಿ ತಂಡ ಸಿಐಡಿ ಕಚೇರಿಯಲ್ಲಿ ಬಂಧಿತರ ವಿಚಾರಣೆ ನಡೆಸಿತ್ತು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆಯಲಾಗಿತ್ತು. ಓರ್ವ ಯುವತಿ ಹಾಗೂ ನಾಲ್ವರು ಯುವಕರನ್ನು SIT ಅರೆಸ್ಟ್ ಮಾಡಿತ್ತು.
ಯಾರು ಈ ಐವರು? ಅಂದ ಹಾಗೆ, ಅರೆಸ್ಟ್ ಆದ ಈ ಐವರ ವಿವರ ಹೀಗಿದೆ.
ಬಂಧಿತ ವ್ಯಕ್ತಿ ನಂ.1: ವಿಜಯನಗರದಲ್ಲಿ ವಾಸವಾಗಿದ್ದ ಓರ್ವ ಯುವಕನನ್ನು ತಂಡ ಬಂಧಿಸಿದೆ. ವಿಜಯನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ಈ ಯುವಕ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಸಿಡಿ ಕೊಟ್ಟಿದ್ದ. ಮೂಲತಃ ರಾಮನಗರದವನಾದ ಯುವಕ ವಿಜಯನಗರದಲ್ಲಿ ವಾಸವಾಗಿದ್ದ.
ಬಂಧಿತ ವ್ಯಕ್ತಿ ನಂ.2: ಸಿಡಿ ಕೇಸ್ನಲ್ಲಿ ರಾಮನಗರ ಮೂಲದ ಯುವತಿಯೊಬ್ಬಳನ್ನು ಸಹ ಬಂಧಿಸಲಾಗಿದೆ. ಬಂಧಿತ ನಂ.1 ಆಗಿರುವ ವಿಜಯನಗರದ ಯುವಕನ ಸ್ನೇಹಿತೆಯಾಗಿದ್ದ ಈಕೆ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಲೇಡಿ ಜೊತೆಗಿದ್ದಳು. ಇದಲ್ಲದೆ, ರಾಮನಗರದಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ.
ಬಂಧಿತ ವ್ಯಕ್ತಿ ನಂ.3: ಚಾಮರಾಜಪೇಟೆಯಲ್ಲಿ ವಾಸವಾಗಿದ್ದ ಒಬ್ಬ ಯುವಕನನ್ನು ಸಹ SIT ತಂಡ ಅರೆಸ್ಟ್ ಮಾಡಿದೆ. ಈತ ಸೈಬರ್ ಸ್ಪೆಷಲಿಸ್ಟ್ ಆಗಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಬಂಧಿತ ವ್ಯಕ್ತಿ ನಂ.4: ಚಿಕ್ಕಮಗಳೂರು ಮೂಲದ ಆಲ್ದೂರಿನ ಒಬ್ಬ ಯುವಕನ ಬಂಧನವಾಗಿದೆ. ಇತ್ತೀಚೆಗೆ ವೆಬ್ ಸಿರೀಸ್ ಮಾಡುತ್ತಿದ್ದ ಆಲ್ದೂರಿನ ಈ ಯುವಕ ರಮೇಶ್ ಜಾರಕಿಹೊಳಿ ಸಿಡಿ ಮೇಕಿಂಗ್‌ನಲ್ಲಿ ಭಾಗಿಯಾಗಿದ್ದ.
ಬಂಧಿತ ವ್ಯಕ್ತಿ ನಂ.5: ಸಿಡಿಯಲ್ಲಿರುವ ಲೇಡಿಯ ಬಾಯ್ಫ್ರೆಂಡ್ನ ಸಹ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲೇ ಆತನನ್ನು ವಶಕ್ಕೆ ಪಡೆದಿರುವ SIT ತಂಡ ಈತ ಸಿಡಿ ಮೇಕಿಂಗ್ ಗ್ಯಾಂಗ್ ಸದಸ್ಯರಿಗೆ ಸಾಥ್ ನೀಡಿದ್ದ ಎಂಬ ಮಾಹಿತಿ ಕೊಟ್ಟಿದೆ. ಇದಲ್ಲದೆ, ಈತ CD ಹಂಚಿಕೆದಾರರ ಜೊತೆ ಸಹ ಸಂಪರ್ಕದಲ್ಲಿದ್ದ.
ಸಿಡಿ ಮೇಕಿಂಗ್ ಕಿಂಗ್ಪಿನ್ಸ್ ಬೆಂಗಳೂರಿಂದ ಎಸ್ಕೇಪ್! ಇತ್ತ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಭಾರಿ ಸದ್ದುಮಾಡುತ್ತಿದ್ದಂತೆ, ಸಿಡಿ ಮೇಕಿಂಗ್ನ ರೂವಾರಿಗಳಾಗಿದ್ದ ಇಬ್ಬರು ಕಿಂಗ್ಪಿನ್ಸ್ ಬೆಂಗಳೂರಿಂದ ಎಸ್ಕೇಪ್ ಆಗಿದ್ದಾರೆ. ಬೆಂಗಳೂರು ಬಿಟ್ಟು ಸದ್ಯ ಆಂಧ್ರದಲ್ಲಿ ಅಡಗಿರುವ ಕಿಂಗ್ಪಿನ್ಸ್ಗಾಗಿ SIT ತಂಡ ಶೋಧ ನಡೆಸುತ್ತಿದೆ.
ಸರ್ವರ್ ಹ್ಯಾಕ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದರು ಅಂದ ಹಾಗೆ, ಬಂಧಿತರು ಸರ್ವರ್ ಹ್ಯಾಕ್ ಮಾಡಿ ಮಾಜಿ ಸಚಿವರ ಸಿಡಿ ಅಪ್ಲೋಡ್ ಮಾಡಿದ್ದರು. ಐಪಿ ಅಡ್ರೆಸ್ ಬದಲಾವಣೆ ಮಾಡಿ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿತ್ತು. ಹಾಗಾಗಿ, ವಿಡಿಯೋವನ್ನು ಬೆಂಗಳೂರಿನಲ್ಲಿ ಅಪ್ಲೋಡ್ ಮಾಡಿದ್ದರೂ ರಷ್ಯಾದಲ್ಲಿ ಅಪ್ಲೋಡ್ ಆದಂತೆ ಭಾಸವಾಗುವಂತಿತ್ತು. ಹೀಗಾಗಿ, ಸಿಡಿ ರಷ್ಯಾದ ಸರ್ವರ್ನಲ್ಲಿ ಅಪ್ಲೋಡ್ ಆಗಿತ್ತೆಂದು ತೋರಿಸುತ್ತಿತ್ತು.
ಇದನ್ನೂ ಓದಿ: ‘ದೊಡ್ಡ ತಿಮಿಂಗಲಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ.. ಆರೋಪಿಗಳಿಗೆ ಬುದ್ಧಿ ಕಲಿಸಬೇಕಾದ್ರೆ ಎಲ್ಲರನ್ನೂ ಬಂಧಿಸಬೇಕು’
Published On - 10:40 pm, Fri, 12 March 21