‘ದೊಡ್ಡ ತಿಮಿಂಗಲಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ.. ಆರೋಪಿಗಳಿಗೆ ಬುದ್ಧಿ ಕಲಿಸಬೇಕಾದ್ರೆ ಎಲ್ಲರನ್ನೂ ಬಂಧಿಸಬೇಕು’
ಕಿಂಗ್‌ಪಿನ್‌ಗಳಿಗೆ ಸಹಕರಿಸಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ದೊಡ್ಡ ತಿಮಿಂಗಲಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ. ಆರೋಪಿಗಳಿಗೆ ಬುದ್ಧಿ ಕಲಿಸಬೇಕಾದ್ರೆ ಎಲ್ಲರನ್ನೂ ಬಂಧಿಸಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬೆಂಗಳೂರು: ತಮ್ಮ ವಿರುದ್ಧದ ಸಿಡಿ ಪ್ರಕರಣದಿಂದ ಮನನೊಂದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಮಾಕ್ಯ ದೇವಾಲಯಕ್ಕೆ ತೆರಳಿದ್ದಾರೆ. ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಪ್ತರ ಜೊತೆ ತೆರಳಿ ದೇವರ ದರ್ಶನ ಪಡೆದಿರುವ ರಮೇಶ್ ಇಂದು ತಡರಾತ್ರಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಇತ್ತ, ಸಿಡಿ ಕೇಸ್ನಲ್ಲಿ ಐವರನ್ನು ವಶಕ್ಕೆ ಪಡೆದು SIT ವಿಚಾರಣೆ ನಡೆಸುತ್ತಿರುವ ಬಗ್ಗೆ ಟಿವಿ9ಗೆ ರಮೇಶ್ ತಮ್ಮ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ರಮೇಶ್ ಜೊತೆ ನಿನ್ನೆಯೇ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ದೂರು ನೀಡುವ ಬಗ್ಗೆ ಯೋಚನೆ ಮಾಡಿದ್ದೇವೆ. ಸೋಮವಾರ ಬಳಿಕ 2ರಿಂದ ಮೂವರ ವಿರುದ್ಧ ದೂರು ನೀಡ್ತೇವೆ. ಕಿಂಗ್‌ಪಿನ್‌ಗಳ ಬಗ್ಗೆ ನಾವು ಆದಷ್ಟು ಬೇಗ ದೂರು ನೀಡುತ್ತೇವೆ ಎಂದು ಹೇಳಿದರು.
‘ದೊಡ್ಡ ತಿಮಿಂಗಲಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ’ ಕಿಂಗ್‌ಪಿನ್‌ಗಳಿಗೆ ಸಹಕರಿಸಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ದೊಡ್ಡ ತಿಮಿಂಗಲಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ. ಆರೋಪಿಗಳಿಗೆ ಬುದ್ಧಿ ಕಲಿಸಬೇಕಾದ್ರೆ ಎಲ್ಲರನ್ನೂ ಬಂಧಿಸಬೇಕು. ಸಾಕ್ಷ್ಯಾಧಾರಗಳನ್ನು ಖಾಸಗಿಯಾಗಿ ಸಂಗ್ರಹ ಮಾಡಲಾಗುತ್ತಿದೆ. ಪಕ್ಕಾ ಎವಿಡೆನ್ಸ್ ಕಲೆಕ್ಟ್ ಮಾಡಿ ನಾವು ದೂರು ನೀಡುತ್ತೇವೆ. ನಾವು ಗಾಳಿಯಲ್ಲಿ ಗುಂಡು ಹೊಡೆಯಲ್ಲ. ಯುವತಿ ಜೊತೆ ಇರುವ ಫೋಟೋ ನಮಗೆ ಲಭ್ಯವಾಗಿದೆ. ನಾವು ಕಾನೂನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.
‘ರಮೇಶ್ ಹೇಳಿದ ಆ ಮಹಾನಾಯಕ ಯಾರೆಂದು ಗೊತ್ತಿಲ್ಲ’ ಅತ್ತ, ಬೆಳಗಾವಿಯಲ್ಲಿ ಪ್ರಕರಣದ ತನಿಖೆ ಎಸ್ಐಟಿಗೆ ವಹಿಸಿದ್ದನ್ನು ಸ್ವಾಗತಮಾಡ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಯಾವ ಹಂತಕ್ಕೆ ತನಿಖೆ ಮಾಡುತ್ತಾರೆ ಕಾದು ನೋಡಬೇಕು. ಹೇಗೆ ತನಿಖೆ ಮಾಡ್ತಾರೆ ಅದರ ಮೇಲೆ ಅವಲಂಬಿತವಾಗಿದೆ. ಸಿಡಿ ಬಹಿರಂಗ ಸಂಬಂಧ ಮೊಕದ್ದಮೆ ದಾಖಲಾಗಿಲ್ಲ. ಎಸ್ಐಟಿಗೆ ವಿಚಾರಣೆ ನಡೆಸುವ ಅಧಿಕಾರ ಕೊಟ್ಟಿದ್ದಾರೆ. ನಿನ್ನೆ ಗೃಹಸಚಿವರು ಎಫ್ಐಆರ್ ಮಾಡುವುದಾಗಿ ಹೇಳಿದ್ದಾರೆ. ಇಲ್ಲದಿದ್ದರೆ ರಮೇಶ್ ಅವರೇ ಖುದ್ದಾಗಿ ದೂರು ನೀಡಬೇಕು. ಎಸ್ಐಟಿ ತನಿಖಾ ವರದಿ ಬಂದ ಮೇಲೆ FIR ದಾಖಲಿಸುವ ಸರ್ಕಾರ ನಿರ್ಧಾರ ಮಾಡಬೇಕು. ಸಿಡಿ ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆ ಆಗಬೇಕು ಎಂದು ಸತೀಶ್ ಜಾರಕಿಹೊಳಿ ಆಗ್ರಹಿಸಿದರು.
ತನಿಖೆ ಬಳಿಕ ಎಲ್ಲಾ ಗೊತ್ತಾಗುತ್ತೆ, ಈಗ ಊಹಾಪೋಹವಷ್ಟೇ. ಪ್ರಕರಣದಿಂದ ನಮ್ಮ ಕುಟುಂಬಕ್ಕೆ ಮುಜುಗರ ಆಗಿರಬಹುದು. ಆದರೆ, ನಮ್ಮ ಬೆಂಬಲಿಗರು, ನಮ್ಮ ಶಕ್ತಿಗೆ ಅದೇನು ಎಫೆಕ್ಟ್ ಆಗಲ್ಲ. ವೋಟ್ಬ್ಯಾಂಕ್ಗೆ ಡಿಸ್ಟರ್ಬ್ ಆಗಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದೆಲ್ಲದಕ್ಕೂ ಪರಿಹಾರ ಅಂದ್ರೆ ಪೊಲೀಸರ ತನಿಖಾ ವರದಿ. ಸಹೋದರ ರಮೇಶ್ ಜಾರಕಿಹೊಳಿ ಜೊತೆ ನಾನು ಮಾತಾಡಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಪ್ರಕರಣದ ಹಿಂದೆ 2+4+3 ಇದ್ದಾರೆಂಬ ಹೇಳಿಕೆ ವಿಚಾರ ಎಂಬ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರಾಥಮಿಕ ಹಂತದಲ್ಲಿ ತನಿಖೆ ಮಾಡಿದಾಗ ಅದನ್ನ ಹೇಳಿದ್ದಾರೆ. SITಯವರು ಬೆನ್ನು ಹತ್ತಿ 2+4+3 ಯಾರೆಂದು ಪತ್ತಿಹಚ್ಚಬೇಕು. ರಮೇಶ್ ಹೇಳಿದ ಆ ಮಹಾನಾಯಕ ಯಾರೆಂದು ಗೊತ್ತಿಲ್ಲ. ತನಿಖೆ ಬಳಿಕ ಇನ್ನೊಂದು ತಿಂಗಳಲ್ಲಿ ಯಾರೆಂದು ಗೊತ್ತಾಗುತ್ತೆ. ಎಸ್ಐಟಿ ತನಿಖೆ ತಿಪ್ಪೆಸಾರಿಸೋ ಕೆಲಸವೆಂದು HDK ಹೇಳಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಹೇಳಿರುವುದರಲ್ಲಿ ನಿಜಾಂಶ ಇದೆ. ಗೃಹ ಸಚಿವರು ವರದಿ ನೋಡಿ FIR ಮಾಡ್ತೀವಿ ಅಂದಿದ್ದಾರೆ. ಎಸ್ಐಟಿಯವರು ತನಿಖೆ ನಡೆಸಿ ವರದಿ ಕೊಡುತ್ತಾರೆ ಅಷ್ಟೇ ಎಂದು ಹೇಳಿದರು.
‘ಕಳೆದ 70 ವರ್ಷಗಳಲ್ಲಿ ಇಂತಹ ಸಾಕಷ್ಟು ತನಿಖೆಯಾಗಿವೆ’ ಎಫ್ಐಆರ್ ಆದ್ರೆ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗುವುದು. ಕಳೆದ 70 ವರ್ಷಗಳಲ್ಲಿ ಇಂತಹ ಸಾಕಷ್ಟು ತನಿಖೆಯಾಗಿವೆ. ಆರೋಪಿಗಳಿಗೆ ಶಿಕ್ಷೆಯಾಗಬೇಕಾದ್ರೆ ಎಫ್ಐಆರ್ ಆಗಬೇಕು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಹೇಳಿದರು.
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲ್, ಅಪಾರ್ಟ್ಮೆಂಟ್ನಲ್ಲಿ ಷಡ್ಯಂತ್ರವೆಂಬ ಹೇಳಿಕೆಗೆ ಹಲವು ರಾಜಕಾರಣಿಗಳಿದ್ದಾರೆ, ಯಾರೆಂದು ಗುರುತಿಸುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಹೇಳಿದರು.
ಅವೆರಡೂ ಕಡೆ ಎಲ್ಲಾ ಪಕ್ಷಗಳ ರಾಜಕಾರಣಿಗಳು ಇದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದಾಗಲೇ ಗೊತ್ತಾಗುವುದು. ಇಂಥವರೇ ಎಂದು ತೋರಿಸಲು ಹೋಗಿ ಮಿಸ್ಫೈರ್ ಆದ್ರೆ ಏನ್ ಮಾಡೋದು. ಎಲ್ಲಿ ನಡೆದಿದೆ, ಏನು ನಡೆದಿದೆ ಎಂದು ತನಿಖೆ ಮಾಡಬಹುದು. ರಮೇಶ್ ಜಾರಕಿಹೊಳಿ ಎಲ್ಲಾದರೂ ಕೇಸ್ ದಾಖಲಿಸಬಹುದು. ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಕೇಸ್ ದಾಖಲಿಸಬಹುದು ಎಂದು ಹೇಳಿದರು.
ಕೂಡಲಸಂಗಮಕ್ಕೆ ಹೆಲಿಕಾಪ್ಟರ್ನಲ್ಲಿ ಸತೀಶ್ ಭೇಟಿ ವಿಚಾರವಾಗಿ ಕೂಡಲಸಂಗಮದಲ್ಲಿ ಅವರೇನೂ ಇರಲಿಲ್ಲವಾ? ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಹೋಗಿದ್ದನ್ನು ಬೇರೆ ರೀತಿ ಅರ್ಥೈಸಲಾಗ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಹೇಳಿದರು.
ಇಂಗ್ಲಿಷ್ ಸಿನಿಮಾ ಉಲ್ಲೇಖಿಸಿ ರಮೇಶ್ ಪರ ಕುಮಟಳ್ಳಿ ಬ್ಯಾಟಿಂಗ್ ಸಿಡಿ ನಕಲಿ ಇದ್ರೆ ಮುಂದೆ ಸಮಸ್ಯೆ ಉಲ್ಬಣವಾಗೋದಿಲ್ಲ. ಸಿಡಿ ನಿಜವೇ ಆಗಿದ್ದರೆ ಅದು ಅವರ ವೈಯಕ್ತಿಕ ಬದುಕು. ಅದರಲ್ಲಿ ಬೇರೆಯವರ ಹಸ್ತಕ್ಷೇಪ ಅಪರಾಧವಾಗುತ್ತೆ. ಮಹಿಳೆ ಬಂದು ದೂರು ಕೊಟ್ಟರೆ ಹನಿಟ್ರ್ಯಾಪ್ ಆಗುತ್ತೆ. ಸತ್ಯಾಸತ್ಯತೆ ಹೊರ ಬರುವಷ್ಟರಲ್ಲಿ ಎಲ್ಲಾ ಮುಗಿದಿರುತ್ತದೆ. ಆತನ ಮನೆ ಮರ್ಯಾದೆ, ಮಾನಸಿಕ ಪರಿಸ್ಥಿತಿ ಏನಾಗಿರುತ್ತೆ? ರಮೇಶ್ ವಿಷಯದಲ್ಲಿ ಆಗಿದ್ದು ವ್ಯವಸ್ಥಿತವಾದ ಪಿತೂರಿ. ಇನ್ಮುಂದೆ ಯಾರಿಗೂ ಹೀಗಾಗದಂತೆ ಕಾನೂನು ತರಬೇಕು. ಜಾರಕಿಹೊಳಿ ಬ್ರದರ್ಸ್ಗೆ ನಾವು ನೈತಿಕ ಬೆಂಬಲ ಕೊಡ್ತೇವೆ ಎಂದು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಹೇಳಿದರು.
ಇಂಗ್ಲಿಷ್ ಸಿನಿಮಾ ಉಲ್ಲೇಖಿಸಿ ರಮೇಶ್ ಪರ ಬ್ಯಾಟಿಂಗ್ ಮಾಡಿದ ಕುಮಟಳ್ಳಿ ಫಾಸ್ಟ್ & ಫ್ಯೂರಿಯಸ್ ಸಿನಿಮಾ ಶೂಟಿಂಗ್ ಶೇ.80ರಷ್ಟು ಆಗಿತ್ತು. ಆಗ ಅದರ ಹೀರೋ ಪಾಲ್ ವಾಕರ್ ಮೃತಪಟ್ಟಿದ್ದರು. ನಂತ್ರ ನಿರ್ದೇಶಕ ವಾಕರ್ ಬ್ರದರ್ಸ್ ಮೂಲಕ ಶೂಟಿಂಗ್ ಮುಗಿಸಲಾಯಿತು. ತಂತ್ರಜ್ಞಾನದ ಬೆಳವಣಿಗೆಗೆ ಹೆದರಬೇಕಾದ ಪರಿಸ್ಥಿತಿಯಿದೆ. 50 ಸಾವಿರದಿಂದ 1 ಲಕ್ಷ ರೂಪಾಯಿಗೆ ಮುಖವಾಡ ಸಿಗುತ್ತೆ. ನನ್ನನ್ನೇ ಹೋಲುವ ಮುಖವಾಡ ಮಾರುಕಟ್ಟೆಯಲ್ಲಿ ಸಿಗುತ್ತೆ. ಆ ಮುಖವಾಡ ಬಳಸಿಕೊಂಡು ಏನೇನೋ ಮಾಡುತ್ತಾರೆ ಎಂದು ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಹೇಳಿದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ರೆಡಿ ಮಾಡಿದ ಟೀಂ ಎಸ್ಐಟಿ ಬಲೆಗೆ; ‘ಸಿಡಿ ಲೇಡಿ’ ಬಾಯ್ಫ್ರೆಂಡ್ ಕೂಡ ಅಂದರ್!