ಬಿಸಿಬಿಸಿ ಚಹಾದ ಜೊತೆ ಸವಿಯಲು ಗರಿಗರಿ ಸಮೋಸಾ ಮಾಡುವ ವಿಧಾನ ಕಲಿಯಿರಿ
ಸಂಜೆಯ ವೇಳೆ ಮಳೆ ಬರುವ ಸಮಯದಲ್ಲಿ ಮನೆಯ ಹೊರಗಡೆ ಕೂತು ಬಿಸಿಬಿಸಿ ಕಾಫಿ/ಟೀ ಜತೆ ರುಚಿಕರವಾದ ತಿಂಡಿಗಳನ್ನು ಸವಿಯಬಹುದು. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ದಿಢೀರ್ ತಿಂಡಿಗಳು ಇಷ್ಟವಾಗುತ್ತದೆ. ಕಡಿಮೆ ಸಮಯದಲ್ಲಿ ರುಚಿಕರವಾಗಿಯೂ ಸಿದ್ಧಪಡಿಸಬಹುದು.
ಸಂಜೆಯ ಸಮಯದಲ್ಲಿ ಬಿಸಿಬಿಸಿ ಕಾಫಿ ಅಥವಾ ಚಹಾ ಕುಡಿಯುವಾಗ ಏನಾದರೂ ಸ್ನ್ಯಾಕ್ಸ್ ಇರಬೇಕಿತ್ತು ಎಂಬ ಆಸೆಯಾಗುತ್ತದೆ. ಆಗತಾನೆ ಸಿದ್ಧಪಡಿಸಿದ ರುಚಿಕರವಾದ ಸ್ನ್ಯಾಕ್ಸ್ಗಳನ್ನು ಸವಿಯಲು ಹೆಚ್ಚು ಬಯಕೆ ಆಗುತ್ತದೆ. ಕಡಿಮೆ ಸಮಯದಲ್ಲಿ ತಿಂಡಿ ರೆಡಿಯಾಗಬೇಕು. ತಿನ್ನಲೂ ಸಹ ರುಚಿಯಾಗಿರಬೇಕು. ಹಾಗಿದ್ದಲ್ಲಿ ಇಂದು ಸ್ಪೆಷಲ್ಲಾಗಿ ಏನು ತಯಾರಿಸುವುದು ಎಂದು ಯೋಚಿಸುತ್ತಿದ್ದರೆ ರುಚಿಕರವಾದ ಸಮೋಸಾ ಹಾಗೂ ಆಲೂ ಬೋಂಡಾ ಮಾಡಿ ಸವಿಯಬಹುದು. ಇದನ್ನು ಸುಲಭವಾಗಿ ಮಾಡುವ ವಿಧಾನ ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.
ಕೇವಲ 30 ನಿಮಿಷಗಳಲ್ಲಿ ರುಚಿಕರವಾದ ತಿಂಡಿಗಳನ್ನು ಸಿದ್ಧಪಡಿಸಬಹುದು. ಸಂಜೆಯ ವೇಳೆ ಮಳೆ ಬರುವ ಸಮಯದಲ್ಲಿ ಮನೆಯ ಹೊರಗಡೆ ಕೂತು ಬಿಸಿಬಿಸಿ ಕಾಫಿ/ಟೀ ಜತೆ ಇವುಗಳನ್ನು ಸವಿಯಬಹುದು. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ದಿಢೀರ್ ತಿಂಡಿಗಳು ಇಷ್ಟವಾಗುತ್ತದೆ. ಕಡಿಮೆ ಸಮಯದಲ್ಲಿ ರುಚಿಕರವಾಗಿಯೂ ಸಿದ್ಧಪಡಿಸಬಹುದು.
ಗರಿಗರಿ ಸಮೋಸಾ ಒಂದು ಪಾತ್ರೆಯಲ್ಲಿ ಹಸಿರು ಬಟಾಣಿ ಕಾಳು, ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸರಿಯಾಗಿ ಬೇಯಿಸಿ ಬದಿಗಿಟ್ಟುಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಅದಕ್ಕೆ ಕತ್ತರಿಸಿದ ಆಲೂಗಡ್ಡೆ, ಚೂರೇ ಚೂರು ಉಪ್ಪು, ಖಾರದ ಪುಡಿ, ಗರಂ ಮಸಾಲಾ, ಕರಿ ಬೇವಿನಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ ಹಾಕಿ ಫ್ರೈ ಮಾಡಿಕೊಳ್ಳಿ. ಆಲೂಗಡ್ಡೆ ಬೇಯುವವರೆಗೆ ಸಣ್ಣ ಉರಿಯಲ್ಲಿಯೇ ಇರಲಿ. ಚೂರೇ ಚೂರು ನೀರು ಬೆರೆಸಿ ಆಲೂಗಡ್ಡೆಯನ್ನು ಬೇಯಿಸಿ. ಆ ಬಳಿಕ ಬೇಯಿಸಿಕೊಂಡ ಬಟಾಣಿ ಹಾಗೂ ಆಲೂಗಡ್ಡೆಯನ್ನು ಮಿಶ್ರಣ ಮಾಡಿಟ್ಟುಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ಮೈದಾ ಹಿಟ್ಟಿಗೆ ಚಿಟಿಕೆ ಅಡುಗೆ ಸೋಡಾ, ಉಪ್ಪು, ಎಣ್ಣೆ ಹಾಕಿ ನಾದಿಕೊಳ್ಳಿ. ನಂತರ ಚಪಾತಿ ಒರೆವಂತೆಯೇ ಸ್ವಲ್ಪ ಸಣ್ಣ ಗಾತ್ರದಲ್ಲಿ ಲಟ್ಟಿಸಿ, ಅದಕ್ಕೆ ಆಲೂಗಡ್ಡೆ ಮಿಶ್ರಣವನ್ನು ಸೇರಿಸಿ ಸಮೋಸಾ ಆಕೃತಿಯಲ್ಲಿ ಮಡಚಿ. ನಂತರ ಕೆಂಪಾಗುವವರೆಗೆ ಎಣ್ಣೆಯಲ್ಲಿ ಕರಿದರೆ ಸಮೋಸಾ ರೆಡಿಯಾಗುತ್ತದೆ.
ಬಿಸಿ ಬಿಸಿ ಬೋಂಡಾ ಮೊದಲಿಗೆ ಆಲೂ ಪಲ್ಯವನ್ನು ಸಿದ್ಧ ಮಾಡಿಕೊಳ್ಳಿ. ಬೇಯಿಸಿದ ಆಲೂಗಡ್ಡೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸಾಸಿವೆ, ಕರಿಬೇವು, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ನೊಂದಿಗೆ ಒಗ್ಗರಣೆ ಹಾಕಿ. ಅದಕ್ಕೆ ನೆನಸಿದ ಬಟಾಣಿ, ಅರಿಶಿಣ ಪುಡಿ ಹಾಕಿ ವಿಶ್ರಣ ಮಾಡಿದರೆ ಆಲೂ ಪಲ್ಯ ಸಿದ್ಧವಾಗುತ್ತದೆ.
ಬೋಂಡಾ ತಯಾರಿಸುವ ಹಿಟ್ಟಿಗೆ 2 ಚಮಚ ಬಿಸಿ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ಆ ಬಳಿಕ ನೀರು ಸೇರಿ. ಆಲೂ ಮಿಶ್ರಣವನ್ನು ಸಣ್ಣದಾಗಿ ಉಂಡೆ ಕಟ್ಟಿ ಅದನ್ನು ಹಿಟ್ಟಿನಲ್ಲಿ ಅದ್ದಿ ಬಿಸಿ ಎಣೆಯಲ್ಲಿ ಕರಿಯಿರಿ.
ಇದನ್ನೂ ಓದಿ: ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್