Monsoon Diet Tips: ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಒಂದಿಷ್ಟು ಟಿಪ್ಸ್​

ನಮ್ಮ ದೈನಂದಿನ ಆಹಾರ ವ್ಯವಸ್ಥೆಯಲ್ಲಿ ಪೌಷ್ಠಿಕಾಂಶಯುಕ್ತ ಹಣ್ಣುಗಳನ್ನು ಸೇವಿಸುವುದು ಆಹಾರ ವ್ಯವಸ್ಥೆಯಲ್ಲಿ ಬದಲಾಗಬೇಕಾದ ಪ್ರಮುಖ ಅಂಶ. ಪಪ್ಪಾಯಿ ಹಣ್ಣುಗಳು, ಲಿಚಿ, ಸೇಬು ಮತ್ತು ಪೇರಳೆ ಹಣ್ಣುಗಳಂತಹ ಹಣ್ಣುಗಳು ನಿಮ್ಮ ಆಹಾರ ಕ್ರಮದಲ್ಲಿ ಸೇರ್ಪಡೆಯಾಗಿಲಿ.

Monsoon Diet Tips: ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಒಂದಿಷ್ಟು ಟಿಪ್ಸ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jun 03, 2021 | 1:12 PM

ಮಳೆಗಾಲದ​ ಸಮಯದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಅಜೀರ್ಣ ಹಾಗೂ ಅಲರ್ಜಿಯಂಥಹ ಸಮಸ್ಯೆಗೆ ಒಳಗಾಗುತ್ತೇವೆ. ಈ ಸಮಯದಲ್ಲಿ ಹೆಚ್ಚು ಪೌಷ್ಠಿಕಯುಕ್ತ ಆಹಾರ ವ್ಯವಸ್ಥೆ ಬೇಕು. ಉತ್ತಮ ಆರೋಗ್ಯಕ್ಕಾಗಿ ಮನೆಯ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮಳೆಗಾಲದ ಸಮಯದಲ್ಲಿ ಪೌಷ್ಠಿಕ ಆಹಾರವನ್ನೂ ಸೇವಿಸುವುದು ಉತ್ತಮ.

ಪೌಷ್ಠಿಕಾಂಶಯುಕ್ತ ಹಣ್ಣುಗಳ ಸೇವನೆ ನಮ್ಮ ದೈನಂದಿನ ಆಹಾರ ವ್ಯವಸ್ಥೆಯಲ್ಲಿ ಪೌಷ್ಠಿಕಾಂಶಯುಕ್ತ ಹಣ್ಣುಗಳನ್ನು ಸೇವಿಸುವುದು ಆಹಾರ ವ್ಯವಸ್ಥೆಯಲ್ಲಿ ಬದಲಾಗಬೇಕಾದ ಪ್ರಮುಖ ಅಂಶ. ಪಪ್ಪಾಯಿ ಹಣ್ಣುಗಳು, ಲಿಚಿ, ಸೇಬು ಮತ್ತು ಪೇರಳೆ ಹಣ್ಣುಗಳಂತಹ ಹಣ್ಣುಗಳು ನಿಮ್ಮ ಆಹಾರ ಕ್ರಮದಲ್ಲಿ ಸೇರ್ಪಡೆಯಾಗಿಲಿ. ಇದರಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ.

ಬೆಳ್ಳುಳ್ಳಿ ಅಡುಗೆಯಲ್ಲಿ ಬೆಳ್ಳಿಯನ್ನು ಸೇರಿಸಿ ಊಟ ಮಾಡುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿ. ಹಾಗೂ ಬಿಸಿಬಿಸಿ ಸೂಪ್​ ಮಾಡಿಕುಡಿಯುವ ಮೂಲಕ ನಮ್ಮಲ್ಲಿ ಚಯಾಪಚಯ ಅಥವಾ ಜೀರ್ಣಕ್ರಿಯೆ ಸರಿಯಾಗಿ ಆಗುವಂತೆ ನೋಡಿಕೊಳ್ಳಬಹುದಾಗಿದೆ. ಬೆಳ್ಳುಳ್ಳಿ ಉತ್ಕರ್ಷಣ ನಿರೋಧಕಗಳಿಂದ ತುಂಬಿದ ಆಹಾರ ಪದಾರ್ಥವಾದ್ದರಿಂದ ನೆಗಡಿ, ಶೀತದಂತಹ ಸಮಸ್ಯೆಗೆ ಪರಿಹಾರವಾಗಿಯೂ ಕೆಲಸ ಮಾಡುತ್ತದೆ.

ಮೊಸರು ಮಳೆಗಾಲದ ಸಲಯದಲ್ಲಿ ಹಾಲಿನ ಸೇವನೆಯ ಬದಲಾಗಿ ಮೊಸರಿನ ಪದಾರ್ಥವನ್ನು ಸೇವಿಸುವುದು ಉತ್ತಮ. ನೀವು ಹಾಲು ಕುಡಿಯಲು ಬಳಸಿದರೆ ಅದಕ್ಕೆ ಒಂದು ಚಿಟಿಕೆ ಅರಿಶಿಣ ಪುಡಿ ಸೇರಿಸಿ ಬಿಸಿ ಹಾಲು ಸೇವಿಸುವುದು ಉತ್ತಮವಾಗಿದೆ. ನಿಮ್ಮೆಲ್ಲಾ ಹೆಟ್ಟೆಯ ಸಮಸ್ಯೆಗೆ ಮೊಸರು ಪರಿಹಾರವಾಗಿ ಕೆಲಸ ನಿರ್ವಹಿಸುತ್ತದೆ.

ಗಿಡಮೂಲಿಕೆಯಿಂದ ತಯಾರಿಸಿದ ಚಹಾ ಚಹ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಯಾವ ಸಮಯದಲ್ಲಿಯೂ ಚಹ ಅಂದರೆ ಸಾಕು ಮುಗಿ ಬೀಳುತ್ತಾರೆ. ಅದರಲ್ಲಿಯೂ ಮಳೆಗಾಲದ ತಂಪು ವಾತಾವಣದಲ್ಲಿ ಬಿಸಿಬಿಸಿ ಚಹ ಸೇವಿಸಲು ಹಾತೊರೆಯುತ್ತಾರೆ. ಆದರೆ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು ಗಿಡಮೂಲಿಕೆಗಳಿಂದ ತಯಾರಿಸ ಚಹ. ಹಾಗಾಗಿ ಮಳೆಗಾಲದಲ್ಲಿ ಗಿಡಮೂಲಿಕೆಗಳಿಂದ ತಯಾರಿಸಿದ ಚಹವನ್ನೇ ಸೇವಿಸಿ. ರೋಗನಿರೋಧಕ ವರ್ಧಕವಾಗಿ ಇದು ಕೆಲಸ ಮಾಡುತ್ತದೆ. ಹಾಗಾಗಿ ಶುಂಠಿ, ನಿಂಬೆ ಅಥವಾ ಪುದೀನ ಚಹವನ್ನು ಸೇವಿಸಿ.

ನೀರು ಒಟ್ಟಾರೆಯಾಗಿ ಆರೋಗ್ಯ ಕನಿಷ್ಠ ಎರಡು ಲೀಟರ್​ ನೀರಾದರೂ ಸೇವಿಸುವುದು ಅತ್ಯಂತ ಅವಶ್ಯಕವಾಗಿದೆ. ಮಳೆಗಾಲದ ಸಮಯದಲ್ಲಿ ಹೆಚ್ಚು ಬಾಯಾರಿಕೆ ಆಗುವುದಿಲ್ಲ ನಿಜ. ಆದರೆ ದೇಹಕ್ಕೆ ನೀರಿನ ಅಂಶ ಸೇರಲೇ ಬೇಕು. ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವ ಸಾಧ್ಯತೆಗಳು ಹೆಚ್ಚು. ಬ್ಯಾಕ್ಟೀರಿಯಾಗಳು ನಮ್ಮ ದೇಹಕ್ಕೆ ಸೇರಿ ಶೀತ, ಜ್ವರದಂತಹ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಕುದಿಸಿದ ನೀರನ್ನೇ ಹೆಚ್ಚು ಸೇವಿಸಿ.

ಮಳೆಗಾಲದ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಹೆಚ್ಚು ಕಾಳಜಿಯಾಗಿ ನೋಡಿಕೊಳ್ಳಿ. ಶೀತ, ಜ್ವರ, ಕೆಮ್ಮು, ನೆಗಡಿ ಹಾಗೂ ತಲೆನೋವಿನಂತಹ ಲಕ್ಷಣಗಳು ಕಂಡು ಬರುವುದು ಮಳೆಗಾಲದ ಸಮಯದಲ್ಲಿ. ಆರೋಗ್ಯದಲ್ಲಿ ಏನೇ ವ್ಯತ್ಯಾಸವಾದರೂ ವೈದ್ಯರ ಸಲಹೆ ಪಡೆದು ಬಳಿಕ ಇತರ ಆಹಾರಕ್ರಮದ ಕುರಿತಾಗಿ ಗಮನಹರಿಸಿ.

ಇದನ್ನೂ ಓದಿ: 

Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ

Health Tips: ಕಾಕಮಾಚಿ-ಕಾಗೆ ಸೊಪ್ಪಿನ ಗುಣಗಳನ್ನು ತಿಳಿದರೆ ಮನೆಯಲ್ಲೇ ಗಿಡ ಬೆಳೆಸುವುದಂತೂ ಸತ್ಯ