Viral: ಹೆಚ್‌ಎಂಪಿವಿ ವೈರಸ್ ನಿಜಕ್ಕೂ ಅಪಾಯಕಾರಿಯೇ? ಈ ಬಗ್ಗೆ ಡಾ. ಜಗದೀಶ್ ಚತುರ್ವೇದಿ ಏನು ಹೇಳಿದ್ದಾರೆ ನೋಡಿ
ರಾಜ್ಯದಲ್ಲಿ ಹೆಚ್‌ಎಂಪಿವಿ ವೈರಸ್‌ನ ಎರಡು ಪ್ರಕರಣಗಳು ಪತ್ತೆಯಾದ ಬಳಿಕ ಈ ಬಗ್ಗೆ ಜನರಲ್ಲಿ ಇನ್ನೂ ಹೆಚ್ಚು ಆತಂಕ ಸೃಷ್ಟಿಯಾಗಿದೆ. ಕೆಲವರಂತೂ ಇದು ಕೊರೊನಾದಂತಿರುವ ವೈರಸ್, ಇದರಿಂದ ಕೂಡಾ ಲಾಕ್‌ಡೌನ್ ಆಗುವ ಸಾಧ್ಯತೆ ಇದೆ ಅಂತೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಈ ಬಗ್ಗೆ ಮಾತನಾಡಿರುವ ವೈದ್ಯ ಹಾಗೂ ಸ್ಟಂಡ್‌ಅಪ್ ಕಾಮಿಡಿಯನ್ ಜಗದೀಶ್ ಚತುರ್ವೇದಿ ʼಕೊರೊನಾ ಹಾಗೂ ಹೆಚ್‌ಎಂಪಿವಿ ವೈರಸ್‌ಗೆ ಯಾವುದೇ ಸಂಬಂಧವಿಲ್ಲ. ಇದು ಡೇಂಜರ್ ಕೂಡಾ ಅಲ್ಲ, ಈ ಬಗ್ಗೆ ಸುಮ್ಮನೆ ನ್ಯೂಸೆನ್ಸ್ ಕ್ರಿಯೇಟ್ ಮಾಡ್ಬೇಡಿ ಎಂದು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚೀನಾದಲ್ಲಿ ಕಂಡು ಬಂದ ಹೆಚ್‌ಎಂಪಿವಿ ಮಾದರಿ ಸೋಂಕು ಪತ್ತೆಯಾದ ಹಿನ್ನೆಲೆ ಜನರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ. ಇದೊಂದು ಕೊರೊನಾದಂತೆ ತೀವ್ರ ತರನಾದ ವೈರಸ್, ಇದರಿಂದ ಕೂಡಾ ಲಾಕ್‌ಡೌನ್ ಆಗುವ ಸಾಧ್ಯತೆ ಇದೆ ಅಂತೆಲ್ಲಾ ಜನ ಊಹಾಪೋಹದ ಮಾತುಗಳನ್ನಾಡುತ್ತಿದ್ದಾರೆ. ಇದೀಗ ಈ ಬಗ್ಗೆ ಮಾತನಾಡಿರುವ ವೈದ್ಯ ಹಾಗೂ ಸ್ಟಂಡ್‌ಅಪ್ ಕಾಮಿಡಿಯನ್ ಜಗದೀಶ್ ಚತುರ್ವೇದಿ ʼಕೊರೊನಾ ಹಾಗೂ ಹೆಚ್‌ಎಂಪಿವಿ ವೈರಸ್‌ಗೆ ಯಾವುದೇ ಸಂಬಂಧವಿಲ್ಲ. ಇದು ಡೇಂಜರ್ ಕೂಡಾ ಅಲ್ಲ, ಈ ಬಗ್ಗೆ ಸುಮ್ಮನೆ ನ್ಯೂಸೆನ್ಸ್ ಕ್ರಿಯೇಟ್ ಮಾಡ್ಬೇಡಿ ಎಂದು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇಎನ್‌ಟಿ ಸರ್ಜನ್ ಹಾಗೂ ಸ್ಟಾಂಡ್‌ಅಪ್ ಕಾಮಿಡಿಯನ್ ಆಗಿರುವಂತಹ ಡಾ. ಜಗದೀಶ್ ಚತುರ್ವೇದಿ ಹೆಚ್.ಎಂ.ಪಿ ವೈರಸ್ ಅಂದ್ರೇನು? ಅದು ಅಪಾಯಕಾರಿಯೇ ಎಂಬ ಬಗ್ಗೆ ಬಹಳ ಸರಳವಾಗಿ, ತಮಾಷೆಯಾಗಿಯೇ ವಿವರಣೆಯನ್ನು ನೀಡಿದ್ದಾರೆ. “ನಾವು ಹೆಚ್‌ಎಂಪಿವಿ ವೈರಸ್. ಹೌದು ನಾವು ಎರಡು ಮಕ್ಕಳಿಗೆ ಸೋಂಕನ್ನು ಹರಡಿದ್ದೇವೆ. ಈ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯನ್ನು ಕೂಡಾ ನೀವು ಮಾಡಿದ್ದೀರಿ. ಆದ್ರೆ ನಾವು ಚಳಿಗಾಲದಲ್ಲಿ ಮಾತ್ರ ಬರೋದು. ನಮ್ಮನ್ನು ಸುಮ್ನೆ ಕೋವಿಡ್ ಜೊತೆ ಹೋಲಿಕೆ ಮಾಡಬೇಡಿ, ನಾವೇನು ಅವರಷ್ಟು ಡೇಂಜರ್ ಅಲ್ಲ, 5 ವರ್ಷದ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತೇವೆ. ಸ್ವಲ್ಪ ಉಸಿರಾಟದ ತೊಂದರೆ, ಗಂಟಲು ನೋವು, ಕೆಮ್ಮನ್ನು ಕೊಟ್ಟು ವಾಪಸ್ ಹೋಗ್ತೇವೆ. ನೀವು ಇದಕ್ಕೆ ಮೆಡಿಕೇಷನ್ ಮಾಡುವ ಮೊದಲೇ ದೊಡ್ಡ ನಮಸ್ಕಾರ ಎಂದು ನಾವು ಹೊರಟು ಹೋಗ್ತೇವೆ. ನಮ್ಮ ಬಗ್ಗೆ ಪ್ಯಾನಿಕ್ ಆಗುವಂತಹ ಅವಶ್ಯಕತೆಯಿಲ್ಲ ಆದ್ರೆ ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಹೀಗೆ ಮಾಡುವ ಮೂಲಕ ಸ್ವಲ್ಪ ಜಾಗ್ರತೆಯಿಂದ ಇರಿ. ಜೊತೆಗೆ ನ್ಯೂಸ್ ಮಾಡಿ ಆದ್ರೆ ಸುಮ್ನೆ ನ್ಯೂಸೆನ್ಸ್ ಕೂಡಾ ಕ್ರಿಯೇಟ್ ಮಾಡ್ಬೇಡಿ” ಎಂದು ಬಹಳ ಸರಳವಾಗಿ ಹೆಚ್‌ಎಂಪಿವಿ ವೈರಸ್ ಬಗ್ಗೆ ವಿವರಣೆ ನೀಡಿದ್ದಾರೆ.
ಹೆಚ್‌ಎಂಪಿವಿ (ಹ್ಯೂಮನ್ ಮೆಟಾ ನ್ಯೂಮೋ ವಿರಿಡಿಯಾ) ಕೊರೋನಾ ವೈರಸ್ ತರಹ ಅಲ್ಲ, ಇದು ವಿಭಿನ್ನ ಕುಟುಂಬಕ್ಕೆ ಸೇರಿದೆ. ಇದು ಮುಖ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಯಾವುದೇ ವಿದೇಶಿ ವೈರಾಣು ಅಲ್ಲ. ನಮ್ಮ ದೇಶದ 5 ವರ್ಷದೊಳಗಿನ ಬಹುತೇಕ ಎಲ್ಲಾ ಮಕ್ಕಳು ಈ ಒಂದು ಸಮಸ್ಯೆಯನ್ನು ಎದುರಿಸಿರುತ್ತಾರೆ. ಈ ಸೋಂಕು ತಗುಲಿದಾಗ ಮೂಗುಗಟ್ಟುವುದು, ಗಂಟಲು ನೋವು, ಉಸಿರಾಟದ ತೊಂದರೆ, ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮತ್ತು ರೋಗಿಯು ಒಂದು ವಾರದಿಂದ 10 ದಿನಗಳ ಒಳಗೆ ಚೇತರಿಸಿಕೊಳ್ಳುತ್ತಾನೆ ಎಂಬುದನ್ನೂ ಹೇಳಿದ್ದಾರೆ.
ಇದನ್ನೂ ಓದಿ: ಪತಿ ಹಾಗೂ ತನ್ನ ಆರು ಮಂದಿ ಮಕ್ಕಳನ್ನು ತೊರೆದು ಭಿಕ್ಷುಕನ ಜೊತೆ ಓಡಿ ಹೋದ ಮಹಿಳೆ
drjagadishchatur ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 1.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತುಂಬಾ ಅದ್ಭುತವಾಗಿ ವಿವರಣೆಯನ್ನು ನೀಡಿದ್ದೀರಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಕ್ಕೆ ಧನ್ಯವಾದಗಳುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 am, Wed, 8 January 25