ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ತನ್ನಷ್ಟಕ್ಕೆ ನಡೆದುಹೋಗುತ್ತಿದ್ದ 11 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳು ಇದ್ದಕ್ಕಿದ್ದಂತೆ ದಾಳಿ ನಡೆಸಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಾರಾಷ್ಟ್ರದ ಪುಣೆ, ಮುಂಬೈ ಮತ್ತು ಥಾಣೆಯಲ್ಲಿ ಜನರ ಮೇಲೆ ಇದೇ ರೀತಿಯ ನಾಯಿಗಳ ದಾಳಿಗಳು ವರದಿಯಾಗಿವೆ. ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆಯು ರಾಜ್ಯಾದ್ಯಂತ ಗಂಭೀರ ಸಮಸ್ಯೆಯಾಗಿದೆ. ಇತ್ತೀಚೆಗೆ ವಾಕಿಂಗ್ ಹೋಗಿದ್ದ ಮಹಿಳೆ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿ ಆಕೆ ಮೃತಪಟ್ಟ ಘಟನೆ ನಡೆದಿತ್ತು.
ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಭೀಕರ ಘಟನೆಯೊಂದು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯ ಬಗ್ಗೆ ಆತಂಕ ಹೆಚ್ಚಿಸಿದೆ. ಶನಿವಾರ ಸಂಜೆ 11 ವರ್ಷದ ಬಾಲಕಿಯ ಮೇಲೆ ಬೀದಿನಾಯಿಗಳ ದಂಡು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದು, ಆಕೆಯನ್ನು ಎಳೆದಾಡಿ, ಕಚ್ಚಿವೆ. ಇದರಿಂದ ಆಕೆ ತೀವ್ರವಾಗಿ ಗಾಯಗೊಂಡಿದ್ದಾಳೆ. ಈ ದೃಶ್ಯವನ್ನು ಮನೆಯೊಂದರ ಬಾಲ್ಕನಿಯಿಂದ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಾರೆ. 1 ನಿಮಿಷ ಮತ್ತು 35 ಸೆಕೆಂಡ್‌ಗಳ ವೀಡಿಯೊವು 6ಕ್ಕೂ ಹೆಚ್ಚು ನಾಯಿಗಳಿಂದ ಸುತ್ತುವರೆದಿರುವ ಹುಡುಗಿಯ ಭಯಾನಕ ಸ್ಥಿತಿಯನ್ನು ತೋರಿಸುತ್ತಿದೆ. ಆಕೆಯನ್ನು ಎಳೆದಾಡಿ ಕೆಸರಿನಲ್ಲಿ ಬೀಳಿಸಿದ ನಾಯಿಗಳು ಬಳಿಕ ಅವಳ ಮೈತುಂಬ ಕಚ್ಚಿವೆ. ಅದೃಷ್ಟವಶಾತ್ ಅದೇ ಸಮಯಕ್ಕೆ ಒಂದಷ್ಟು ಹೆಂಗಸರು ಓಡಿಬಂದು ನಾಯಿಗಳನ್ನು ಓಡಿಸಿ ಆಕೆಯ ಜೀವ ಉಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos