ನಾನು, ಪರಮೇಶ್ವರ್ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿಲ್ಲ, ಮೀಟಿಂಗ್​ಗಳ ಬಗ್ಗೆ ಅನಗತ್ಯ ಗೊಂದಲ ಬೇಡ: ಮಹದೇವಪ್ಪ

ನಾನು, ಪರಮೇಶ್ವರ್ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿಲ್ಲ, ಮೀಟಿಂಗ್​ಗಳ ಬಗ್ಗೆ ಅನಗತ್ಯ ಗೊಂದಲ ಬೇಡ: ಮಹದೇವಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 07, 2025 | 7:44 PM

ಪಕ್ಷ ಸಂಘಟನೆಯ ಬಗ್ಗೆ ಮಾತಾಡಬೇಕಾದರೆ ಪಕ್ಷದ ಅಧ್ಯಕ್ಷರು ಇರಲೇಬೇಕು ಅವರ ಸಮಕ್ಷಮದಲ್ಲೇ ಸಂಘಟನೆ ಮಾತುಕತೆ ನಡೆಯಬೇಕು ಅಂತ ಅಜೆಂಡಾವೇನೂ ಇಲ್ಲ, ಪರಮೇಶ್ವರ್ ಅವರು ಕರೆದಿರುವ ಮೀಟಿಂಗ್ ನಲ್ಲಿ ದಲಿತರಿಗೆ ಉನ್ನತ ಸ್ಥಾನಗಳ ಬಗ್ಗೆ ಚರ್ಚೆ ನಡೆಯಲ್ಲ, ಆದರೆ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತದೆ ಎಂದು ಮಹಾದೇವಪ್ಪ ಹೇಳಿದರು

ಬೆಂಗಳೂರು: ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ಡಿನ್ನರ್ ಮೀಟಿಂಗ್ ಮತ್ತು ನಾಳೆ ಪರಮೇಶ್ವರ್ ಅವರು ಕರೆದಿರುವ ಮೀಟಿಂಗ್ ಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಹೇಳಿದರು. ಊಟಕ್ಕೆ ಅಂತ ಸೇರಿದರೆ ಸಿಎಂ ಸ್ಥಾನದ ಬಗ್ಗೆ ಚರ್ಚೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಅಂತ ಮಾಧ್ಯಮದವರೇ ಗೊಂದಲ ಸೃಷ್ಟಿಸುತ್ತಿದ್ದಾರೆ, ಸಿಎಂ ಸ್ಥಾನಕ್ಕೆ ಯಾವುದೇ ರೀತಿಯ ಸಂಚಕಾರವಿಲ್ಲ, ತಾನಾಗಲೀ ಪರಮೇಶ್ವರಾಗಲೀ ಪಕ್ಷಕ್ಕೆ ಹೊಸಬರಲ್ಲ, ತಾವೇನೂ ಸಿಎಂ ಹುದ್ದೆಯ ಮೇಲೆ ದೃಷ್ಟಿನೆಟ್ಟು ಕೂತಿಲ್ಲ ಎಂದು ಮಹದೇವಪ್ಪ ಹೇಳಿದರು. ದಲಿತ ಸಮುದಾಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ ಅವುಗಳ ಚರ್ಚೆಗೆ ಪರಮೇಶ್ವರ್ ಮೀಟಿಂಗ್ ಕರೆದಿದ್ದಾರೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಜೋರಾದ ಡಿನ್ನರ್ ಪೊಲಿಟಿಕ್ಸ್: ನಾಳಿನ ಪರಮೇಶ್ವರ್ ಡಿನ್ನರ್ ಸಭೆಗೆ ಹೈಕಮಾಂಡ್ ಬ್ರೇಕ್