Health Tips: ಕಾಕಮಾಚಿ-ಕಾಗೆ ಸೊಪ್ಪಿನ ಗುಣಗಳನ್ನು ತಿಳಿದರೆ ಮನೆಯಲ್ಲೇ ಗಿಡ ಬೆಳೆಸುವುದಂತೂ ಸತ್ಯ

ಸಾಮಾನ್ಯವಾಗಿ ಕೆಂಪು ಅಥವಾ ಕಪ್ಪು ಬಣ್ಣಗಳಲ್ಲಿ ಕಾಕೆ ಹಣ್ಣುಗಳನ್ನು ಕಾಣಬಹುದು. ಈ ಹಣ್ಣು ಸಿಹಿ ಮತ್ತು ಹುಳಿಯಿಂದ ಕೂಡಿರುತ್ತದೆ. ಇವುಗಳಲ್ಲಿ ಕೆಂಪು ಹಣ್ಣು ಬಿಡುವ ಸಸ್ಯ ಔಷಧಿ ಸಸ್ಯವಾಗಿದೆ.

Health Tips: ಕಾಕಮಾಚಿ-ಕಾಗೆ ಸೊಪ್ಪಿನ ಗುಣಗಳನ್ನು ತಿಳಿದರೆ ಮನೆಯಲ್ಲೇ ಗಿಡ ಬೆಳೆಸುವುದಂತೂ ಸತ್ಯ
ಕಾಕಮಾಚಿ-ಕಾಗೆ ಗಿಡ
Follow us
shruti hegde
| Updated By: ಆಯೇಷಾ ಬಾನು

Updated on: May 31, 2021 | 6:52 AM

ಕಾಕಮಾಚಿ-ಕಾಗೆ ಸೊಪ್ಪು, ಅಥವಾ ಕಾಕಿ ಹಣ್ಣಿನ ಹೆಸರನ್ನು ಕೇಳಿಯೇ ಇರುತ್ತೀರಿ. ಚಿಕ್ಕ ಗಿಡ. ಗಿಡದ ತುಂಬ ಕಪ್ಪು ಬಣ್ಣದ ಹಣ್ಣುಗಳು. ಸಾಮಾನ್ಯವಾಗಿ ಮಲೆನಾಡಿನ ಕಡೆ ಹೆಚ್ಚು ಕಂಡುಬರುವ ಸಸ್ಯವಿದು. ಕೆಲವು ಕಡೆ ಸಾಮಾನ್ಯವಾಗಿ ಕಂಡು ಬಂದರೆ ಇನ್ನು ಕೆಲವೆಡೆ ಸಾಗುವಳಿಯಾಗಿ ಬೆಳೆಯುತ್ತಾರೆ. ಹಾಗಾದರೆ ಕಾಗೆ ಸೊಪ್ಪು ಅಥವಾ ಕಾಕಿ ಹಣ್ಣಿನ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಸಾಮಾನ್ಯವಾಗಿ ಕೆಂಪು ಅಥವಾ ಕಪ್ಪು ಬಣ್ಣಗಳಲ್ಲಿ ಕಾಕೆ ಹಣ್ಣುಗಳನ್ನು ಕಾಣಬಹುದು. ಈ ಹಣ್ಣು ಸಿಹಿ ಮತ್ತು ಹುಳಿಯಿಂದ ಕೂಡಿರುತ್ತದೆ. ಇವುಗಳಲ್ಲಿ ಕೆಂಪು ಹಣ್ಣು ಬಿಡುವ ಸಸ್ಯ ಔಷಧಿ ಸಸ್ಯವಾಗಿದೆ. ಈ ಸಸ್ಯದ ಎಲೆ ಮತ್ತು ಕಾಂಡವನ್ನು ಅಡುಗೆ ತಯಾರಿಸಲು ಬಳಸುತ್ತಾರೆ. ವಿಟಮಿನ್​ ಸಿ ಮತ್ತು ಬಿ ಅಂಶವನ್ನು ಹೊಂದಿರುವ ಈ ಸಸ್ಯ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯಕ.

ಕಫ ಕರಗಿಸುತ್ತದೆ ಶೀತ, ಕಫ, ಜ್ವರಗಳಂತಹ ಸಮಸ್ಯೆಗಳು ಕಾಡುವುದು ಸಾಮಾನ್ಯ. ಕಫವನ್ನು ಕರಗಿಸಲು ಈ ಸಸ್ಯ ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದಾಗ ಸಸ್ಯದ ಎಲೆಗಳಿಂದ ತಂಬುಳಿ ಮಾಡಿ ಊಟದ ಜತೆ ಸೇವಿಸಲಾಗುತ್ತದೆ. ಇದರಿಂದ ಸಾಮಾನ್ಯ ಶೀತ, ಜ್ವರ ಮತ್ತು ಕಫದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ದೇಹದ ಸದೃಢತೆಯನ್ನು ಹೆಚ್ಚಿಸಿಕೊಳ್ಳಬಹುದು.

ತುರಿಕೆಯಿದ ಮುಕ್ತಿ ತುರಿಕೆ ಎಲೆಯನ್ನು ತಾಗಿಸಿಕೊಂಡಾಗ ಅಥವಾ ದೇಹದಲ್ಲಿನ ಧೂಳು ಕಣಗಳಿಂದ ತುರಿಕೆ ಆಗುತ್ತಿರುತ್ತದೆ. ಕೆಲವರಿಗೆ ಅದು ಕಜ್ಜಿಯಾಗಿ ಪಡಿಣಮಿಸುತ್ತದೆ. ಕಾಗೆ ಸೊಪ್ಪಿನ ಎಲೆಗಳನ್ನು ಕೊಯ್ದು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕುದಿಸಿ. ಆ ಬಿಸಿ ಎಣ್ಣೆಯನ್ನು ತುರಿಕೆಯಾದ ಜಾಗದಲ್ಲಿ ಅಥವಾ ಕಜ್ಜಿಯಾದ ಜಾಗದಲ್ಲಿ ಹಚ್ಚಿದರೆ ಕೆಲವೇ ಸಮಯಗಳೊಳಗೆ ತುರಿಕೆ ನಾಶವಾಗುತ್ತದೆ. ದೇಹದಲ್ಲಿನ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.

ರಕ್ತಸ್ರಾವ ಕಡಿಯಾಗುತ್ತದೆ ದೇಹದ ಉಷ್ಟಾಂಶದ ತೀವ್ರತೆಯಿಂದಾಗಿ ಕೆಲವರಿಗೆ ಮೂಗಿನಲ್ಲಿ ಆಗಾಗ ರಕ್ತಸ್ರಾವ ಆಗುವುದನ್ನು ಕಾಣಬಹುದು. ಹೀಗಿರುವಾಗ ಕಾಕಿ ಸೊಪ್ಪಿನ ಸೇವನೆಯಿಂದ ಕಡಿಮೆ ಮಾಡಿಕೊಳ್ಳಬಹುದು. ಸೊಪ್ಪಿಗೆ ಜೇನುತುಪ್ಪ ಬೆರೆಸಿ ಸೇವನೆ ಮಾಡುವುದರಿಂದ ರಕ್ತದ್ರಾವ ಕಡಿಮೆಯಾಗುತ್ತದೆ. ಹಾಗೆಯೇ ಉರಿಮೂತ್ರ, ಮಲಬದ್ಧತೆ ಹಾಗೂ ಮೂಲವ್ಯಾಧಿಯಂತಹ ಸಮಸ್ಯೆಗೆ ಕಾಕಿ ಸೊಪ್ಪಿನ ಪಲ್ಯ ಮಾಡಿ ಸೇವನೆ ಮಾಡುತ್ತಾರೆ.

ಇದನ್ನೂ ಓದಿ: 

ಸಾವಯವ ಕೃಷಿ ಮೂಲಕ ಸೊಪ್ಪು ಬೆಳೆದು ಸ್ವಾವಲಂಬಿ ಬದುಕು ಕಟ್ಟಿಕೊಂಡ ದಾವಣಗೆರೆ ರೈತ; ಸುಡು ಬಿಸಿಲಿನಲ್ಲಿ ಸೊಪ್ಪಿನ ಸಂತೆ

Vegetable cultivation ಸೊಪ್ಪು ತರಕಾರಿ ಬೆಳೆಯಲ್ಲಿಯೇ ಯಶಸ್ಸು ಕಂಡು ಬದುಕು ಹಸನಾಗಿಸಿಕೊಂಡ ಬೀದರ್ ಜಿಲ್ಲೆಯ ರೈತರು

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ