Health Tips: ಥೈರಾಯ್ಡ್​​ನಿಂದ ತೂಕ ಹೆಚ್ಚುತ್ತಿದೆಯಾ?.. ನಿಯಂತ್ರಣಕ್ಕೆ ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ

ದೇಹದಲ್ಲಿ ಥೈರಾಯ್ಡ್​ ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಇರಬೇಕೆಂದರೆ ಉತ್ತಮ ಕೊಬ್ಬಿನ ಅಂಶವೂ ಸರಿಯಾದ ಪ್ರಮಾಣದಲ್ಲಿ ಇರಬೇಕು. ಅದರಲ್ಲೂ ದೇಹಕ್ಕೆ ಒಮೆಗಾ-3 ಕೊಬ್ಬಿನ ಆಮ್ಲಗಳ ಅಗತ್ಯ ಹೆಚ್ಚಾಗಿರುತ್ತದೆ.

Health Tips: ಥೈರಾಯ್ಡ್​​ನಿಂದ ತೂಕ ಹೆಚ್ಚುತ್ತಿದೆಯಾ?.. ನಿಯಂತ್ರಣಕ್ಕೆ ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ
ಮೊಟ್ಟೆ
Follow us
Lakshmi Hegde
|

Updated on:May 30, 2021 | 5:00 PM

ಥೈರಾಯ್ಡ್​ ಗ್ರಂಥಿ ಚಿಟ್ಟೆಯಾಕಾರದ ಪುಟ್ಟ ಗ್ರಂಥಿ. ಅದು ನಮ್ಮ ಚಯಾಪಚಯ ಕ್ರಿಯೆ, ಹಾರ್ಮೋನ್​​​ಗಳನ್ನು ನಿಯಂತ್ರಿಸುತ್ತದೆ. ದೇಹದ ಹಲವು ಅಂಗಗಳು, ವ್ಯವಸ್ಥೆಗಳು ಪರೋಕ್ಷವಾಗಿ ಇದೇ ಗ್ರಂಥಿಯ ಮೇಲೆ ಅವಲಂಬಿತವಾಗಿವೆ. ನಮ್ಮ ಹೃದಯ, ಜೀರ್ಣಕ್ರಿಯೆ, ಮಿದುಳು, ಎಲುಬುಗಳ ಆರೋಗ್ಯ, ಕಾರ್ಯಗಳು ಸಹ ಥೈರಾಯ್ಡ್​ ಗ್ರಂಥಿಯನ್ನು ಅವಲಂಬಿಸಿವೆ. ಈ ಥೈರಾಯ್ಡ್ ಗ್ರಂಥಿಯ ಆರೋಗ್ಯ ನಮ್ಮ ದೇಹಕ್ಕೆ ಪೂರೈಕೆಯಾಗುವ ಅಯೋಡಿನ್​ ಅಂಶದ ಮೇಲೆ ಅವಲಂಬಿತಗೊಂಡಿದೆ.

ಆದರೆ ಥೈರಾಯ್ಡ್​ ಗ್ರಂಥಿಯಲ್ಲಿ ಏನಾದರೂ ಅಸಮರ್ಪಕತೆ ಕಂಡು ಬಂದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ತೂಕನಷ್ಟ, ಕೂದಲು ಉದುರುವುದು, ತೂಕ ಹೆಚ್ಚುತ್ತ ಹೋಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ನಿರ್ಲಕ್ಷ್ಯ ಮಾಡಿದರೆ ಥೈರಾಯ್ಡ್ ಕ್ಯಾನ್ಸರ್ ಕೂಡ ಉಂಟಾಗಬಹುದು. ಥೈರಾಯ್ಡ್ ಅಸಮತೋಲನದಿಂದ ಪಾರಾಗಲು ಉತ್ತಮವಾದ ಆಹಾರ ವ್ಯವಸ್ಥೆ, ನಿದ್ದೆ, ಖನಿಜಾಂಶವುಳ್ಳ ಆಹಾರ ಸೇವನೆಗಳನ್ನು ಮಾಡಬೇಕು ಎನ್ನುತ್ತಾರೆ ಫಿಟ್‌ನೆಸ್ ಮತ್ತು ಪೌಷ್ಟಿಕಾಂಶ ತಜ್ಞ ರೋಹಿತ್​ ಶೇಲಟ್ಕರ್​. ಥೈರಾಯ್ಡ್​​ನಿಂದ ಉಂಟಾಗುವ ಹಾರ್ಮೋನುಗಳ ವ್ಯತ್ಯಾಸ, ಅತಿಯಾಗಿ ತೂಕ ಹೆಚ್ಚುತ್ತಿರುವವರು ಅಳವಡಿಸಿಕೊಳ್ಳಬಹುದಾದ ಆಹಾರಗಳ ಬಗ್ಗೆ ತಿಳಿಸಿದ್ದಾರೆ..

ಮೊಟ್ಟೆ: ಎಲ್ಲ ರೀತಿಯ ಹಾರ್ಮೋನುಗಳ ಉತ್ಪಾದನೆ, ಸಮತೋಲನಕ್ಕೆ ಪ್ರೋಟಿನ್​ ತುಂಬ ಮುಖ್ಯ. ಮೊಟ್ಟೆಯಲ್ಲಿ ಬರೀ ಪ್ರೋಟಿನ್​ ಅಲ್ಲದೆ, ಸೆಲೆನಿಯಮ್​, ಅಯೋಡಿನ್​, ವಿಟಮಿನ್ ಎ, ಬಿ ಗಳಿದ್ದು, ಥೈರಾಯ್ಡ್​ ಗ್ರಂಥಿಯ ಆರೋಗ್ಯಕ್ಕೆ ತುಂಬ ಒಳ್ಳೆಯದು. ಅಲ್ಲದೆ, ಥೈರಾಯ್ಡ್​ ನಿಯಂತ್ರಣಕ್ಕೆ ಅಗತ್ಯವಿರುವ 9 ಬಗೆಯ ಅಮೈನೋ ಆಮ್ಲಗಳು, ಕೊಲೀನ್​ ಮತ್ತು ಉತ್ಕರ್ಷಣ ನಿರೋಧಕಗಳನ್ನು ಮೊಟ್ಟೆ ಒಳಗೊಂಡಿದೆ.

ಆವಕಾಡೊ ಹಣ್ಣು: ದೇಹದಲ್ಲಿ ಥೈರಾಯ್ಡ್​ ಹಾರ್ಮೋನುಗಳು ಸೂಕ್ತ ಪ್ರಮಾಣದಲ್ಲಿ ಇರಬೇಕೆಂದರೆ ಉತ್ತಮ ಕೊಬ್ಬಿನ ಅಂಶವೂ ಸರಿಯಾದ ಪ್ರಮಾಣದಲ್ಲಿ ಇರಬೇಕು. ಅದರಲ್ಲೂ ದೇಹಕ್ಕೆ ಒಮೆಗಾ-3 ಕೊಬ್ಬಿನ ಆಮ್ಲಗಳ ಅಗತ್ಯ ಹೆಚ್ಚಾಗಿರುತ್ತದೆ. ಈ ಅಂಶ ಆವಕಾಡೊ ಹಣ್ಣುಗಳಲ್ಲಿ ಹೇರಳವಾಗಿರುತ್ತವೆ. ಇದರಲ್ಲಿರುವ ನಾರಿನ ಅಂಶ, ಪೋಷಕಾಂಶಗಳು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತವೆ. ಮ್ಯಾಗ್ನೀಷಿಯಂ, ಪೊಟ್ಯಾಷಿಯಂ, ವಿಟಾಮಿನ್​ ಸಿ, ಇ, ಕೆ ಮತ್ತು ಬಿಯನ್ನು ಹೊಂದಿದ್ದು, ಥೈರಾಯ್ಡ್ ಆರೋಗ್ಯಕ್ಕೆ ಉತ್ತಮ ಹಣ್ಣು ಆಗಿದೆ.

ಬೆರ್ರಿ ಹಣ್ಣುಗಳು: ಬೆರ್ರಿ ಜಾತಿಗೆ ಸೇರಿದ ಎಲ್ಲ ರೀತಿಯ ಹಣ್ಣುಗಳು ಥೈರಾಯ್ಡ್​ ನಿಯಂತ್ರಣಕ್ಕೆ ಸಹಕಾರಿ. ಇವುಗಳಲ್ಲಿ ವಿಟಮಿನ್​ ಸಿ, ಕೆ, ಮ್ಯಾಂಗನೀಸ್​, ಉತ್ಕರ್ಷಣ ನಿರೋಧಕಗಳು, ನಾರಿನಂಶಗಳು ಹೇರಳವಾಗಿರುತ್ತವೆ. ದೇಹದಲ್ಲಿ ಕೊಲೆಸ್ಟ್ರಾಲ್​ ಮಟ್ಟ ಕಡಿಮೆ ಮಾಡಲು, ರಕ್ತದ ಒತ್ತಡ ನಿಯಂತ್ರಕ್ಕೆ, ಕ್ಯಾನ್ಸರ್​​ ವಿರುದ್ಧ ಹೋರಾಡಲು ಮತ್ತು ಮಿದುಳಿನ ಆರೋಗ್ಯಕ್ಕೆ ಈ ಬೆರ್ರಿ ಹಣ್ಣುಗಳು ತುಂಬ ಅನುಕೂಲ. ಇನ್ನು ಬೆರ್ರಿಗಳು ಕರುಳು ಸ್ನೇಹಿಯಾಗಿದ್ದು, ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ.

ಮೊಸರು: ಯೋಗರ್ಟ್ ಅಥವಾ ಮೊಸರು ಅಯೋಡಿನ್​ನ ಮೂಲ ಅಂಶವಾಗಿದೆ. ಇದು ರೋಗನಿರೋಧಕ ಶಕ್ತಿಯ ಉತ್ತೇಜಕವೂ ಹೌದು. ಉರಿಯೂತ ನಿಯಂತ್ರಿಸುವ ಅಂಶಗಳು ಹೇರಳವಾಗಿರುತ್ತದೆ. ಇದು ಥೈರಾಯ್ಡ್​ನಿಂದ ದೇಹಕ್ಕೆ ಆಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಮೊಸರಿನಲ್ಲಿ ಇರುವ ವಿಟಮಿನ್​ ಡಿ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಉತ್ಪತ್ತಿಗೆ ಸಹಕಾರಿಯಾಗಿದೆ. ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳು ಥೈರಾಯ್ಡ್​ ಗ್ರಂಥಿಯಿಂದ ಉತ್ಪತ್ತಿಯಾಗುವ ಹೆಚ್ಚುವರಿ ಹಾರ್ಮೋನ್​ ರಸವನ್ನು ಹೊರಹಾಕುತ್ತವೆ.

(ಇವೆಲ್ಲ ಸಲಹೆ ರೂಪದಲ್ಲಿ ಸೂಚಿಸಲಾದ ಆಹಾರ ಆಗಿದ್ದು, ಥೈರಾಯ್ಡ್​ ಸಮಸ್ಯೆಗೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಸೂಕ್ತ ರೀತಿಯ ಔಷಧ, ಡಯಟ್​ಗಳನ್ನು ಅಳವಡಿಸಿಕೊಳ್ಳಬೇಕು)

ಇದನ್ನೂ ಓದಿ: ಸುದೀಪ್​ಗೆ ಅಚ್ಚರಿ ಮೂಡಿಸಿದ ‘ವಿಕ್ರಾಂತ್​ ರೋಣ’ ಪೋಸ್ಟರ್​; ಚಿತ್ರತಂಡಕ್ಕೂ ಇದಕ್ಕೂ ಸಂಬಂಧವಿಲ್ಲ

Published On - 4:59 pm, Sun, 30 May 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ