43 ಕೆಜಿ ತೂಕ ಇಳಿಸಿ ತಮ್ಮ ಜೀವನದ ಸ್ಪೂರ್ತಿದಾಯಕ ಕಥೆ ಹಂಚಿಕೊಂಡ ಐಪಿಎಸ್ ಅಧಿಕಾರಿ
ಕೊರೊನಾ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳವುದು ಎಲ್ಲರ ಪರಮ ಗುರಿಯಾಗಿದೆ. ಆದರೆ ದಢೂತಿ ದೇಹದವರಿಗೆ ತೂಕ ಹೇಗೆ ಇಳಿಸಿಕೊಳ್ಳುವುದು ಎಂಬುದೇ ದೊಡ್ಡ ಪ್ರಶ್ನೆ. ಅಂಥವರಿಗೆ ಇದಕ್ಕಿಂತ ಸ್ಪೂರ್ತಿದಾಯಕ ಕತೆ ಮತ್ತೊಂದು ಇರಲಾರದು. ಒಮ್ಮೆ ಓದಿ ನೋಡಿ..
ಕೆಲವರು ತೂಕ ಹೆಚ್ಚಾಗಿದೆ ಎಂದು ಕೊರಗುತ್ತಿರುತ್ತಾರೆ. ತೂಕವನ್ನು ಇಳಿಸಲು ಅದೆಷ್ಟೋ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ತಿರುಗದ ಆಸ್ಪತ್ರೆಗಳಿಲ್ಲ, ತಿನ್ನದ ಔಷಧಗಳಿಲ್ಲ ಎಂಬ ಚಿಂತೆ. ಆದರೆ ಐಪಿಎಸ್ ಅಧಿಕಾರಿಯೋರ್ವರು ತಮ್ಮ ತೂಕವನ್ನು ಇಳಿಸಿಕೊಂಡ ರೀತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ನಿಜಕ್ಕೂ ಅಶ್ಚರ್ಯವೆನಿಸುತ್ತದೆ. ಮನಸ್ಸಿದ್ದರೆ ಮಾರ್ಗ ಎಂಬ ಮಾತಿಗೆ ಇವರೇ ಸಾಕ್ಷಿ ಎಂಬಂತಿದೆ.
ಕೊರೊನಾ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳವುದು ಎಲ್ಲರ ಪರಮ ಗುರಿಯಾಗಿದೆ. ಆದರೆ ದಢೂತಿ ದೇಹದವರಿಗೆ ತೂಕ ಹೇಗೆ ಇಳಿಸಿಕೊಳ್ಳುವುದು ಎಂಬುದೇ ದೊಡ್ಡ ಪ್ರಶ್ನೆ. ಅಂಥವರಿಗೆ ಇದಕ್ಕಿಂತ ಸ್ಪೂರ್ತಿದಾಯಕ ಕತೆ ಮತ್ತೊಂದು ಇರಲಾರದು. ಒಮ್ಮೆ ಓದಿ ನೋಡಿ..
ಐಪಿಎಸ್ ಅಧಿಕಾರಿ ವಿವೇಕ್ ರಾಜ್ ಸಿಂಗ್ ಅವರು 8ನೇ ತರಗತಿಗೆ ಹೋಗುತ್ತಿರುವಾಗಲೇ 88 ಕೆಜಿ ತೂಕ ಹೊಂದಿದ್ದರಂತೆ. ನಂತರ ದಿನಗಳಲ್ಲಿ ನ್ಯಾಷನಲ್ ಪೊಲೀಸ್ ಅಕಾಡೆಮಿ(ಎನ್ಪಿಎ) ಸೇರಿದಾಗ ಅವರ ದೇಹದ ತೂಕ 134 ಕೆಜಿ ಏರಿಕೆ ಆಗಿತ್ತು. ಎನ್ಪಿಎಗೆ ತರಬೇತಿಗೆಂದು ಸೇರಿ ಕಠಿಣ ಪರಿಶ್ರಮದಿಂದಾಗಿ 46 ವಾರಗಳಲ್ಲಿ 104 ಕೆಜಿಗೆ ಇಳಿದು ತರಬೇತಿ ಮುಗಿಸಿ ಹೊರಬಂದಿದ್ದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಎನ್ಪಿಎನಲ್ಲಿ ತೂಕವನ್ನು ಕಳೆದುಕೊಂಡಿದ್ದು ಒಂದು ದೊಡ್ಡ ಸಾಧನೆಯೇ ಸರಿ. ಚಿಕ್ಕವರಿದ್ದಾಗ ದುಂಡುಮುಖದ ಮುದ್ದಾದ ಹುಡುಗ ಎಂದು ಗುರುತಿಸುತ್ತಿದ್ದರು ಎಂದು ಅವರ ಬಾಲ್ಯದ ಜೀವನವನ್ನು ನೆನೆದಿದ್ದಾರೆ. ಅತಿಯಾಗಿ ತಿನ್ನುವುದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದ ತೂಕವನ್ನೂ ಹೆಚ್ಚಿಸುತ್ತದೆ ಎಂಬುದನ್ನು ನಾನು ಅರಿತುಕೊಂಡೆ. ನನ್ನ ದೇಹದ ಅತಿಯಾದ ತೂಕ ರಕ್ತದೊತ್ತಡ ಸಮಸ್ಯೆಗೆ ಕಾರಣವಾಯಿತು. ಇದರಿಂದ ಹೊರಬರುಲು ಅದೆಷ್ಟೋ ಔಷಧಿಗಳನ್ನು ಸೇವಿಸಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
ತರಬೇತಿ ಮುಗಿದ ತಕ್ಷಣ ನಾನು ಪೊಲೀಸ್ ಕೆಲಸಕ್ಕೆ ಸೇರಿದೆ. ಬಳಿಕ ಮತ್ತೆ ನನ್ನ ತೂಕ ಹೆಚ್ಚಾಗಲು ಆರಂಭಿಸಿತು. 138 ಕೆಜಿ ಹೆಚ್ಚಾಯಿತು. ಕಾರಣವೇನೆಂದರೆ ನಾನು ಅತಿಯಾಗಿ ಆಹಾರವನ್ನು ಸೇವಿಸುತ್ತಿದ್ದೆ. ಆಹಾರವನ್ನು ಎಂದೂ ಎಸೆಯಬಾರದು ಎಂಬುದು ನನ್ನ ಧ್ಯೇಯವಾಕ್ಯವಾಗಿತ್ತು. ನನ್ನ ಹೊಟ್ಟೆ ತುಂಬಿರುವಾಗಲೂ, ನನ್ನ ತೂಕ ಹೆಚ್ಚಿರುವಾಗಲೂ ಮನಸ್ಸೋ ಇಚ್ಛೆ ಅತಿಯಾಗಿ ತಿಂದ ಅಪರಾಧಿ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.
ಸುಮಾರು ಎಂಟರಿಂದ ಒಂಭತ್ತು ವರ್ಷಗಳ ಕಾಲ 130 ಕೆಜಿ ತೂಕವನ್ನು ಉಳಿಸಿಕೊಂಡಿದ್ದೆ. ನನ್ನ ತೂಕವನ್ನು ಕಡಿಮೆ ಮಾಡಿಕೊಳ್ಳಲೇ ಬೇಕು ಎಂಬ ಛಲವಿತ್ತು. ಹಾಗಾಗಿ ನಾನು ಹೆಚ್ಚು ನಡೆಯಲು ಪ್ರಾರಂಭಿಸಿದೆ. ವಾಕಿಂಗ್ ಜೀವನದ ಒಂದು ಭಾಗವಾಯಿತು. ಈ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬದನ್ನು ಅರಿತುಕೊಂಡೆ. ಇದರಿಂದ ತೂಕ ಮತ್ತಷ್ಟು ಇಳಿಕೆ ಕಂಡಿತು ಎಂದು ಹೇಳಿದ್ದಾರೆ.
ವಾಕಿಂಗ್ ಜೊತೆಗೆ ನನ್ನ ಆಹಾರ ಕ್ರಮವನ್ನು ಬದಲಾಯಿಸಿಕೊಂಡೆ. ನಿಯಮಿತವಾಗಿ ಆಹಾರ ಸೇವಿಸುತ್ತಿದ್ದೆ. ಇದರಿಂದಾಗಿ 43 ಕೆಜಿಯನ್ನು ಇಳಿಸಿಕೊಂಡೆ. ಇದೀಗ ಆರೋಗ್ಯವೂ ಸುಧಾರಿಸಿದೆ ಎಂಬ ತಮ್ಮ ಜೀವನದ ಸ್ಪೂರ್ತಿದಾಯಕ ವಿಷಯವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Published On - 11:14 am, Sun, 30 May 21