X-Ray Setu: ಪಟ್ಟಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಲು ಬಂದಿದೆ ಎಕ್ಸ್ರೇ ಸೇತು: ಏನಿದರ ವಾಟ್ಸಾಪ್ ಸೇತುಬಂಧ?
X-Ray Setu COVID-19: ಸ್ಥಳೀಯ ವೈದ್ಯರು ಅಥವಾ ರೇಡಿಯಾಲಜಿಸ್ಟ್ ಸೋಂಕಿತರ ಎದೆಯ ಎಕ್ಸ್ರೇ ತೆಗೆದು, ಅದನ್ನು ವಾಟ್ಸಾಪ್ ಬಾಟ್ (Whatsapp bot) ಮೂಲಕ X-Ray setu ಗೆ ಅಪ್ಲೋಡ್ ಮಾಡಬೇಕು. ತದನಂತರ ಅದನ್ನು ಬ್ಯಾಕ್ ಎಂಡ್ನಲ್ಲಿ ತಪಾಸಣೆ ಮಾಡಿ, 10-15 ನಿಮಿಷದಲ್ಲಿ ರಿಪೋರ್ಟ್ ಸಲ್ಲಿಸುತ್ತದೆ.
ಆರೋಗ್ಯ ಸೇತು ನಂತರ ಇದೀಗ ಎಕ್ಸ್ರೇ ಸೇತು ವಾಟ್ಸಾಪ್ ಮೂಲಕ ಆರಂಭಗೊಂಡಿದೆ. ಕೊರೊನಾ ಸೋಂಕು ಪತ್ತೆಗೆ ಇದು ಸಹಕಾರಿಯಾಗಲಿದೆ. ಕೃತಕ ಬುದ್ಧಿಮತ್ತೆ (Artificial intelligence) ಮೂಲಕ ಎಕ್ಸ್ರೇ ಸೇತು (X-Ray Setu) ಕಾರ್ಯನಿರ್ವಹಿಸಲಿದೆ. COVID-19 ಪತ್ತೆ ಹಚ್ಚಲು ಆರ್ಟಿ-ಪಿಸಿಆರ್ ಟೆಸ್ಟ್ (RT-PCR test) ಮತ್ತು ಸಿಟಿ ಸ್ಕ್ಯಾನ್ (CT-scans) ಲಭ್ಯವಿಲ್ಲದ ಚಿಕ್ಕ ಚಿಕ್ಕ ಪಟ್ಟಣ, ನಗರಗಳಲ್ಲಿ ಸಾವಿರಾರು ವೈದ್ಯರಿಗೆ ಇದು ಸಹಾಯಕವಾಗಲಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ರೋಬೋಟಿಕ್ಸ್ ಸಂಸ್ಥೆಯಾದ ಆರ್ಟ್ ಪಾರ್ಕ್ನ (Artpark) ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ವಯಂ ಸೇವಾ ಸಂಸ್ಥೆಯಾದ ಆರ್ಟ್ ಪಾರ್ಕ್ನ ಸಿಇಒ ಉಮಾಕಾಂತ್ ಸೋನಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದಂತೆ ಸ್ಟಾರ್ಟ್ ಕಂಪನಿಯಾದ ನಿರ್ಮಾಯಿ (Niramai) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science -IISc) ಜೊತೆಗೂಡಿ ಎಕ್ಸ್ರೇ ಸೇತು ಆ್ಯಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.
ಪ್ರಸ್ತುತ ಕೊರೊನಾ ಸಂಕಷ್ಟ ಕಾಲದಲ್ಲಿ ಸೋಂಕಿತರಿಂದ ಯಾವುದೇ ಶುಲ್ಕ ಪಡೆಯದೆ ಸರಳವಾದ ಎಕ್ಸ್ರೇ ತೆಗೆದು, ಕೃತಕ ಬುದ್ಧಿಮತ್ತೆ ಮೂಲಕ ಕೊರೊನಾ ಸೋಂಕಿನ ಪ್ರಮಾಣವನ್ನು ಪತ್ತೆಹಚ್ಚಬಹುದು.
ಸ್ಥಳೀಯ ವೈದ್ಯರು ಅಥವಾ ರೇಡಿಯಾಲಜಿಸ್ಟ್ ಸೋಂಕಿತರ ಎದೆಯ ಎಕ್ಸ್ರೇ ತೆಗೆದು, ಅದನ್ನು ವಾಟ್ಸಾಪ್ ಬಾಟ್ (Whatsapp bot) ಮೂಲಕ X-Ray setu ಗೆ ಅಪ್ಲೋಡ್ ಮಾಡಬೇಕು. ತದನಂತರ ಅದನ್ನು ಬ್ಯಾಕ್ ಎಂಡ್ನಲ್ಲಿ ತಪಾಸಣೆ ಮಾಡಿ, 10-15 ನಿಮಿಷದಲ್ಲಿ ರಿಪೋರ್ಟ್ ಸಲ್ಲಿಸುತ್ತದೆ.
(Government launches X-Ray Setu on WhatsApp to detect COVID-19 case using AI and robotics)
ಕೇಂದ್ರದ CoWin ಆ್ಯಪ್ ಬೇಡ; ನಮ್ಮದೇ ಇರಲಿ ಎಂದು ಹೊಸ ಆ್ಯಪ್ ರಚನೆಗೆ ಮುಂದಾದ ಕರ್ನಾಟಕ ಸರ್ಕಾರ