ಕೇಂದ್ರದ CoWin ಆ್ಯಪ್ ಬೇಡ; ನಮ್ಮದೇ ಇರಲಿ ಎಂದು ಹೊಸ ಆ್ಯಪ್ ರಚನೆಗೆ ಮುಂದಾದ ಕರ್ನಾಟಕ ಸರ್ಕಾರ
ಹೊಸ ಆ್ಯಪ್ ನಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಆಯಾ ಪ್ರದೇಶದ ಜನ ತಮ್ಮ ಪ್ರದೇಶದಲ್ಲಿರುವ ಲಸಿಕಾ ಕೇಂದ್ರದಲ್ಲಿಯೇ ವ್ಯಾಕ್ಸಿನ್ ಚುಚ್ಚು ಮದ್ದು ಹಾಕಿಸಿಕೊಳ್ಳುವುದು ಕಡ್ಡಾಯವಾಗಲಿದೆ. ಪ್ರಸ್ತುತ ಜನರು ಲಸಿಕೆ ಸಿಗುತ್ತಿಲ್ಲ ಎಂಬ ಆತಂಕದಲ್ಲಿ ಗ್ರಾಮೀಣ ಭಾಗದತ್ತ ಅಥವಾ ಅಕ್ಕಪಕ್ಕದ ಪ್ರದೇಶಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಪರದಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಕಳೆದ ವರ್ಷ ರಚಿಸಿರುವ ಆರೋಗ್ಯ ಸೇತು ಆ್ಯಪ್ ಮತ್ತು ತದನಂತರದ ಕೊರೊನಾ ವ್ಯಾಕ್ಸಿನ್ ಚುಚ್ಚು ಮದ್ದು ನೀಡುವ ಮಾಹಿತಿಯನ್ನೊಳಗೊಂಡ ಕೋವಿನ್ (CoWin) ಆ್ಯಪ್ ಕೆಲವು ಲೋಪಗಳು ಅಥವಾ ಸೀಮಿತ ಪರಿಧಿಯನ್ನು ಹೊಂದಿದೆ. ಯಾವ ಲಸಿಕಾ ಕೇಂದ್ರದಲ್ಲಿ ತಾವು ಕ್ಯಾಕ್ಸಿನ್ ಹಾಕಿಸಿಕೊಳ್ಳಬೇಕು, ತಮ್ಮ ಆಯ್ಕೆಯ ಕೇಂದ್ರ ಯಾವುದು ಎಂಬುದನ್ನು ಅರಿಯಲು ಹೆಚ್ಚು ಅವಕಾಶ ಇಲ್ಲವಾಗಿದೆ. ಇದರಿಂದ ಲಸಿಕಾ ಕೇಂದ್ರಗಳಲ್ಲಿ ಜನಜಂಗುಳಿ ಹೆಚ್ಚಾಗುತ್ತಿತ್ತು.
ಇಂತಹ ಲೋಪಗಳನ್ನು ಮೆಟ್ಟಿನಿಟ್ಟಲು ಪ್ರತ್ಯೇಕ ಪೋರ್ಟಲ್ ಅಥವಾ ಆ್ಯಪ್ ಅನ್ನು ಕರ್ನಾಟಕ ರಾಜ್ಯ ಸರ್ಕಾರ ಸಿದ್ಧಪಡಿಸುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಇದು 18 ವರ್ಷದಿಂದ 44 ವರ್ಷ ವಯಸ್ಸಿನವರಿಗೆ ಲಸಿಕೆ ಕೊಡಲು ಆರಂಭಿಸುವ ವೇಳೆಗೆ ಸಿದ್ಧವಿರುವುದಾಗಿಯೂ ಅವರು ಹೇಳಿದ್ದಾರೆ. ಗಮನಾರ್ಹವೆಂದ್ರೆ ಕಳೆದ ವರ್ಷ ಭಾರತ ಸರ್ಕಾರದ ಆರೋಗ್ಯ ಸೇತು ಬರುವ ಮೊದಲೇ ಕರ್ನಾಟಕ ಸರ್ಕಾರ ಆ್ಯಪ್ ಮಾಡಿ ಪಾಸಿಟಿವ್ ರೋಗಿಗಳ ಮೇಲೆ ಗಮನ ಇಡಲು ಪ್ರಯತ್ನಿಸಿತ್ತು.
CoWin ಆ್ಯಪ್ ಕೆಲವು ಸೀಮಿತ ಅವಕಾಶಗಳನ್ನು ಹೊಂದಿವೆ. One Time Password ಕೋಡ್ ಜನರೇಶನ್ ಅಂತಹ ಟೆಕ್ನಿಕಲ್ ಸಮಸ್ಯೆಗಳು ಇವೆ. ಇದನ್ನು ಮೀರಲು ನಾವೇ ಹೊಸ ಆ್ಯಪ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಹೊಸ ಆ್ಯಪ್ ನಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಆಯಾ ಪ್ರದೇಶದ ಜನ ತಮ್ಮ ಪ್ರದೇಶದಲ್ಲಿರುವ ಲಸಿಕಾ ಕೇಂದ್ರದಲ್ಲಿಯೇ ವ್ಯಾಕ್ಸಿನ್ ಚುಚ್ಚು ಮದ್ದು ಹಾಕಿಸಿಕೊಳ್ಳುವುದು ಕಡ್ಡಾಯವಾಗಲಿದೆ. ಪ್ರಸ್ತುತ ಜನರು ಲಸಿಕೆ ಸಿಗುತ್ತಿಲ್ಲ ಎಂಬ ಆತಂಕದಲ್ಲಿ ಗ್ರಾಮೀಣ ಭಾಗದತ್ತ ಅಥವಾ ಅಕ್ಕಪಕ್ಕದ ಪ್ರದೇಶಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದರಿಂದ ಅನಗತ್ಯ ಜನದಟ್ಟಣೆ, ಸಂಚಾರವನ್ನು ತಡೆಗಟ್ಟುವುದು ಈ ಹೊಸ ಆ್ಯಪ್ ನ ಉದ್ದೇಶವಾಗಿದೆ.
(Karnataka to develop its own vaccination portal or app to overcome glitches in CoWin)