AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಕೊರೊನಾ ಸೋಂಕಿಗೆ ಬಲಿ

42 ವರ್ಷದ ಪ್ರಾಂಶುಪಾಲ ಲೋಕೇಶ್ ಜ್ವರ, ಕಫ ಮತ್ತು ಉಸಿರಾಟದ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಾಂಶುಪಾಲ ಲೋಕೇಶ್ ತುರುವೇಕೆರೆ ತಾಲೂಕಿನ ಕರಿಗೊಂಡನಹಳ್ಳಿ ಗ್ರಾಮದ ನಿವಾಸಿ ಎನ್ನಲಾಗಿದೆ.

ತುಮಕೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಕೊರೊನಾ ಸೋಂಕಿಗೆ ಬಲಿ
ಪ್ರಾಂಶುಪಾಲ ಲೋಕೇಶ್
Follow us
sandhya thejappa
|

Updated on: May 15, 2021 | 1:26 PM

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಅರೆಮಲ್ಲೇಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 42 ವರ್ಷದ ಪ್ರಾಂಶುಪಾಲ ಲೋಕೇಶ್ ಜ್ವರ, ಕಫ ಮತ್ತು ಉಸಿರಾಟದ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಾಂಶುಪಾಲ ಲೋಕೇಶ್ ತುರುವೇಕೆರೆ ತಾಲೂಕಿನ ಕರಿಗೊಂಡನಹಳ್ಳಿ ಗ್ರಾಮದ ನಿವಾಸಿ ಎನ್ನಲಾಗಿದೆ.

ಕೋವಿಡ್​ಗೆ ಮುಖ್ಯ ಶಿಕ್ಷಕ ಬಲಿ ಬಾಗಲಕೋಟೆ: ತಾಲೂಕಿನ ದೇವನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮೃತ ಮುಖ್ಯ ಶಿಕ್ಷಕ ಬಿ.ಹೆಚ್.ಬಾಲರೆಡ್ಡಿ (52) ಎಂದು ತಿಳಿದುಬಂದಿದೆ. ತುಳಸಿಗೇರಿ ಗ್ರಾಮದ ನಿವಾಸಿಯಾದ ಮುಖ್ಯ ಶಿಕ್ಷಕ ಕಳೆದ ಮೂರು ದಿನಗಳಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮೇ 1ರಿಂದ 10ರ ವರೆಗೆ 10 ಶಿಕ್ಷಕರು ಬಲಿ ಜಿಲ್ಲೆಯಲ್ಲಿ ಮೇ 1ರಿಂದ 10ರ ವರೆಗೆ ಕೊರೊನಾಗೆ 10 ಶಿಕ್ಷಕರು ಬಲಿಯಾಗಿದ್ದಾರೆಂದು ಬಾಗಲಕೋಟೆ ಡಿಡಿಪಿಐ ಶ್ರೀಶೈಲ ಬಿರಾದಾರ ಮಾಹಿತಿ ನೀಡಿದ್ದಾರೆ. ಜಮಖಂಡಿ ತಾಲೂಕಿನಲ್ಲಿ ಮೂವರು, ಮುಧೋಳ, ಹುನಗುಂದ ತಾಲೂಕಿನಲ್ಲಿ ತಲಾ ಇಬ್ಬರು, ಬಾಗಲಕೋಟೆ, ಬೀಳಗಿ, ಬಾದಾಮಿ ತಾಲೂಕಿನಲ್ಲಿ ತಲಾ ಒಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಬಾಗಲಕೋಟೆ ತಾಲೂಕಿನಲ್ಲಿ ಒಬ್ಬರು ಬೋಧಕೇತರ ಸಿಬ್ಬಂದಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ

ಲಾಕ್​ಡೌನ್​ ಎಫೆಕ್ಟ್: ಸೂಕ್ತ ಬೆಲೆ ಸಿಗದೆ 20 ಎಕರೆಯಲ್ಲಿದ್ದ ನುಗ್ಗೆಕಾಯಿಯನ್ನು ನಾಶ ಮಾಡಿದ ವಿಜಯಪುರ ರೈತ

ದಯವಿಟ್ಟು ನನ್ನ ಕೊರೊನಾ ವರದಿಯ ಬಗ್ಗೆ ಯಾವುದೇ ವದಂತಿಗಳನ್ನು ಹರಡಬೇಡಿ; ವೃದ್ಧಿಮಾನ್ ಸಹಾ

(Principal of kittur rani chennamma residential school died due to corona in tumkur)