AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Bicycle Day 2021: ಇಂದು ವಿಶ್ವ ಸೈಕಲ್ ದಿನ, ತೂಕ ಇಳಿಕೆ ಸದೃಢ ಆರೋಗ್ಯಕ್ಕೆ ಸಾಥ್​ ಕೊಟ್ಟ ಸಂಗಾತಿಯನ್ನು ನೆನೆಯುವ ದಿನ

ವಿಶ್ವ ಸೈಕಲ್ ದಿನ 2021: ದೇಹದ ಆರೋಗ್ಯವನ್ನೂ, ಮಾನಸಿಕ ಸದೃಢತೆಯ ಜತೆಗೆ ಸುತ್ತಮುತ್ತಲಿನ ವಾತಾವಣಕ್ಕೂ ಯಾವುದೇ ಹಾನಿ ಮಾಡದೇ ಸುರಕ್ತಿತವಾಗಿ ಪ್ರಯಾಣ ಕೈಗೊಳ್ಳಬಹುದಾದ ಸಾಧನವೇ ಸೈಕಲ್​.

World Bicycle Day 2021: ಇಂದು ವಿಶ್ವ ಸೈಕಲ್ ದಿನ, ತೂಕ ಇಳಿಕೆ ಸದೃಢ ಆರೋಗ್ಯಕ್ಕೆ ಸಾಥ್​ ಕೊಟ್ಟ ಸಂಗಾತಿಯನ್ನು ನೆನೆಯುವ ದಿನ
TV9 Web
| Updated By: shruti hegde|

Updated on:Jun 03, 2021 | 8:55 AM

Share

ಇಂದು (ಜೂನ್​ 3) ತಾರೀಕು ವಿಶ್ವ ಸೈಕಲ್ ಅಥವಾ ಬೈಸಿಕಲ್​ ದಿನವನ್ನು ಆಚರಿಸಲಾಗುತ್ತಿದೆ. ಸೈಕಲ್​ ತುಳಿಯುವುದರಿಂದ ಎಲ್ಲಾ ವಯಸ್ಸಿನವರ ಆರೋಗ್ಯ ವೃದ್ಧಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ವಿಶ್ವ ಸಂಸ್ಥೆ ಗೊತ್ತುಪಡಿಸಿದ ಈ ದಿನವನ್ನು ವಿಶ್ವ ಸೈಕಲ್​ ದಿನ ಎಂದು ಆಚರಿಸಲಾಗುತ್ತದೆ. ಕಡಿಮೆ ಖರ್ಚಿನಲ್ಲಿ ಪ್ರಯಾಣದ ಜತೆ ನಮ್ಮ ಉತ್ತಮ ಆರೋಗ್ಯವನ್ನು ಪಡೆಯಲು ಇರುವ ಒಂದೇ ಒಂದು ವಾಹನವಿದು.

ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಎಲ್ಲರೂ ಮನೆಯಲ್ಲಿಯೇ ಸಿಲುಕಿಕೊಂಡಿರುವ ಪರಿಸ್ಥಿತಿ ಎದುರಾಯಿತು. ಹೀಗಿರುವಾಗ ಜನರು ಮಾನಸಿಕ ಸಮಸ್ಯೆ, ಕೀಲು ನೋವು, ಬೊಜ್ಜು ಉಂತಾದ ಸಮಸ್ಯೆಗಳಿಗೆ ಒಳಗಾಗಿರಬಹುದು. ದೇಹದ ತೂಕವೂ ಹೆಚ್ಚಾಗಿರಬಹುದು. ಹೀಗಿರುವಾಗ ಇನ್ನೇಕೆ ತಡ? ನಿಮ್ಮ ಮನೆಯ ಅಂಗಳದಲ್ಲಿಯೇ ಸೈಕಲ್​ ತುಳಿದರೂ ಸಾಕು. ಅದೆಷ್ಟೋ ಆರೋಗ್ಯ ಸಮಸ್ಯೆಗಳಿಂದ ಹೊರಬರಬಹುದು.

ವಿಶ್ವ ಸೈಕಲ್​ ದಿನವನ್ನು ಏಕೆ ಆಚರಿಸಲಾಗುತ್ತದೆ? ಕಡಿಮೆ ಪರಿಸರ ಮಾಲಿನ್ಯ ಸೈಕಲ್​ ಯಾವುದೇ ವಿಷಕಾರಕ ಅನಿಲವನ್ನು ಹೊರಸೂಸುವುದಿಲ್ಲ. ಸೈಕಲ್​ ಪರಿಸರ ಸ್ನೇಹಿ. ದೇಹದ ಆರೋಗ್ಯವನ್ನೂ, ಮಾನಸಿಕ ಸದೃಢತೆಯ ಜತೆಗೆ ಸುತ್ತಮುತ್ತಲಿನ ವಾತಾವಣಕ್ಕೂ ಯಾವುದೇ ಹಾನಿ ಮಾಡದೇ ಸುರಕ್ತಿತವಾಗಿ ಪ್ರಯಾಣ ಕೈಗೊಳ್ಳಬಹುದಾದ ಸಾಧನವೇ ಸೈಕಲ್​.

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ ಸೈಕಲ್​ ತುಳಿಯುವುದರಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ದೇಹದ ಎಲ್ಲಾ ಸ್ನಾಯುಗಳ ಸದೃಢತೆಗೆ ಉತ್ತ ಮಾರ್ಗವೆಂದರೆ ವಾಕಿಂಗ್​ ಮತ್ತು ಸೈಕಲಿಂಗ್​. ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿ ಮಾನಸಿಕ ಒತ್ತಡಕ್ಕೆ ಸಿಲುಕಿರುತ್ತೀರಿ ಎಂದಾದರೆ ಒಮ್ಮೆ ಸೈಕ್ಲಿಂಗ್​ ಮಾಡಿ, ಮಾನಸಿಕ ನೆಮ್ಮದಿ ಪಡೆಯಲು ಸೈಕ್ಲಿಂಗನ್​ನಷ್ಟು ಒಳ್ಳೆಯ ಮಾರ್ಗ ಮತ್ತೊಂದಿಲ್ಲ.

ಹಣವನ್ನು ಉಳಿಸುತ್ತದೆ ಸೈಕ್ಲಿಂಗ್​, ಉಚಿತ ಹಾಗೂ ಒತ್ತಡ ರಹಿತ ಪ್ರಯಾಣವಾಗಿದೆ. ಸೈಕಲ್​ ಖರೀದಿಸುವ ಖರ್ಚು ಬಿಟ್ಟರೆ ಇನ್ನಿತರ ದೊಡ್ಡ ಖರ್ಚು ಯಾವುದೂ ಇಲ್ಲ. ಯಾವುದೇ ಇಂಧನದ ಬಳಕೆ ಇಲ್ಲದಿರುವುದರಿಂದ ಅದಕ್ಕೊಂದಿಷ್ಟು ಹಣ ಸುರಿಯುವ ಜಂಜಾಟವಿರುವುದಿಲ್ಲ. ದಿನವಿಡೀ ಚಟುವಟಿಕೆಯಿಂದಿರಲು ಹಾಗೂ ಮಾನಸಿಕ ಸದೃಢತೆಯ ಜತೆ ನೆಮ್ಮದಿ ಕಂಡುಕೊಳ್ಳಲು ಸೈಕಲಿಂಗ್​ ಅತ್ಯತ್ತಮ ಮಾರ್ಗವಾಗಿದೆ.

ಕೇವಲ ಇವಿಷ್ಟೇ ಅಲ್ಲದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೈಕಲ್​ ಮಹತ್ವದ್ದಾಗಿದೆ. ಹೀಗಿರುವಾಗ ಸೈಕಲಿಂಗ್​ನಿಂದ ಏನೇನು ಪ್ರಯೋಜನಗಳು ಎಂಬ ಕುರಿತಾಗಿ ತಿಳಿಯೋಣ.

* ತೂಕ ನಿರ್ವಹಣೆಗೆ ಸಹಾಯಕಾರಿ * ಸ್ನಾಯುಗಳ ಬಲ ಹೆಚ್ಚಿಸಿಕೊಳ್ಳಬಹುದು * ದೇಹದ ಕೊಬ್ಬು ಕರಗಿಸುತ್ತದೆ * ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು * ದಿನವಿಡೀ ಚೈತನ್ಯದಿಂದಿರಲು ಸಹಾಯಕ

ಇದನ್ನೂ ಓದಿ: 

ಮೈಸೂರು: ಮಗನ ಔಷಧಿಗೆ 280 ಕಿಲೋಮೀಟರ್ ಸೈಕಲ್ ತುಳಿದ ಅಪ್ಪ

Published On - 8:38 am, Thu, 3 June 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!