ಮೈಸೂರು: ಮಗನ ಔಷಧಿಗೆ 280 ಕಿಲೋಮೀಟರ್ ಸೈಕಲ್ ತುಳಿದ ಅಪ್ಪ
ಗಾರೆ ಕೆಲಸ ಮಾಡುತ್ತಿರುವ ಜಿಲ್ಲೆಯ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ನಿವಾಸಿ ಆನಂದ್ ಎಂಬುವವರು ತನ್ನ ಮಗನಿಗೆ ಔಷಧಿ ತರಲು ಸೈಕಲ್ನಲ್ಲಿ ಸುಮಾರು 280 ಕಿಲೋಮೀಟರ್ ಹೋಗಿದ್ದಾರೆ. ಮಾನಸಿಕ ವಿಶೇಷ ಚೇತನ ಮಗನಿಗೆ 10 ವರ್ಷಗಳಿಂದ ಮಾತ್ರೆ ಕೊಡಿಸಲಾಗುತ್ತಿದೆ.
ಮೈಸೂರು: ಕೊರೊನಾ ನಿಯಂತ್ರಿಸಲು ಅನಿವಾರ್ಯವಾಗಿ ಸರ್ಕಾರ ಲಾಕ್ಡೌನ್ ವಿಧಿಸಿದೆ. ಈ ಲಾಕ್ಡೌನ್ ಜಾರಿಯಾದ ಕಾರಣ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಜನರು ಹಲವು ಕಾರಣಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪರದಾಡುತ್ತಿದ್ದಾರೆ. ಬಸ್ಗಳಿಲ್ಲದೆ ಅಗತ್ಯವಿರುವ ವಸ್ತುಗಳನ್ನು ತರಲು ಹರಸಾಹಸ ಪಡಬೇಕಾಗಿದೆ. ತನ್ನ ಮಗನಿಗೆ ಔಷಧಿ ತರಲು ಸುಮಾರು 280 ಕಿಲೋಮೀಟರ್ ವರೆಗೆ ಅಪ್ಪ ಸೈಕಲ್ ತುಳಿದಿದ್ದಾರೆ. ಈ ಮನ ಕಲಕುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಗಾರೆ ಕೆಲಸ ಮಾಡುತ್ತಿರುವ ಜಿಲ್ಲೆಯ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ನಿವಾಸಿ ಆನಂದ್ ಎಂಬುವವರು ತನ್ನ ಮಗನಿಗೆ ಔಷಧಿ ತರಲು ಸೈಕಲ್ನಲ್ಲಿ ಸುಮಾರು 280 ಕಿಲೋಮೀಟರ್ ಹೋಗಿದ್ದಾರೆ. ಮಾನಸಿಕ ವಿಶೇಷ ಚೇತನ ಮಗನಿಗೆ 10 ವರ್ಷಗಳಿಂದ ಮಾತ್ರೆ ಕೊಡಿಸಲಾಗುತ್ತಿದೆ. ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಮ್ಮೆ ಮಾತ್ರೆ ತಪ್ಪಿದರೆ 18 ವರ್ಷ ಮತ್ತೆ ಮಾತ್ರೆ ನೀಡಬೇಕಾಗುತ್ತದೆ ಎಂಬ ಆತಂಕದಲ್ಲಿ ಸೈಕಲ್ನಲ್ಲಿ ನೂರಾರು ಕಿಲೋಮೀಟರ್ ಹೋಗಿ ಔಷಧಿ ತಂದಿದ್ದಾರೆ.
ಬೈಕ್, ಆಟೋ ಹಾಗೂ ವಾಹನ ಸೌಲಭ್ಯ ಸಿಗದ ಹಿನ್ನೆಲೆ ತಂದೆ ತನ್ನ ಸೈಕಲ್ ತುಳಿದು ಮಗನಿಗೆ ಮಾತ್ರೆ ತಂದುಕೊಟ್ಟಿದ್ದಾರೆ. ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ನಂತರ ಅಲ್ಲಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಾತ್ರೆ ತಂದಿದ್ದಾರೆ. ಯಾರೂ ಬೈಕ್ ಕೊಡಲಿಲ್ಲ. ಒಂದು ದಿನ ಮಗನಿಗೆ ಮಾತ್ರೆ ತಪ್ಪಿಸಿದರೆ ತೊಂದರೆ ಆಗುತ್ತಿತ್ತು. ಮಗನಿಗೆ ಬೇಕಾದ ಮಾತ್ರೆ ಬೇರೆಲ್ಲೂ ಸಿಗುತ್ತಿರಲಿಲ್ಲ. ಹೀಗಾಗಿ ಸೈಕಲ್ನಲ್ಲಿಯೇ ಹೋಗಿ ಬಂದೆ ಎಂದು ಆನಂದ್ ಹೇಳಿದರು.
ಇದನ್ನೂ ಓದಿ
ವೃದ್ಧಾಪ್ಯ ವೇತನ ಪಡೆಯುವುದಕ್ಕೆ ಗದಗದಲ್ಲಿ ಅಜ್ಜಿ ಪರದಾಟ; ವಾಪಸ್ ಊರಿಗೆ ಕಳುಹಿಸಿದ ಪೊಲೀಸರು
Viral Video: ಗಿಳಿಯ ಹಾಡಿಗೆ ಸೋಲದವರಿದ್ದಾರೆಯೇ? ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು; ವಿಡಿಯೋ ವೈರಲ್
(Dad went on bicycle for up to 280 kilometers to bring medicine to his son in mysuru)
Published On - 12:15 pm, Mon, 31 May 21