AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಂತ್ರಿಕ ಸಮಸ್ಯೆಯಿಂದ ವಿಮಾನದ ಮೂಲಕ ಸ್ಯಾನಿಟೈಸ್ ಮಾಡುವುದಕ್ಕೆ ಬ್ರೇಕ್: ಗೌರವ್ ಗುಪ್ತಾ ಮಾಹಿತಿ

ಎರಡನೇ ಡೋಸ್ ಕೋವ್ಯಾಕ್ಸಿನ್ ನೀಡಿಕೆ ಬಗ್ಗೆ ಪತ್ರಿಕ್ರಿಯಿಸಿದ ಗೌರವ್ ಗುಪ್ತಾ, ಎರಡನೇ ಡೋಸ್ ಪಡೆಯುವರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರವಾರು ಒಂದೊಂದು ಸೆಂಟರ್ ಆರಂಭಿಸಿದ್ದೇವೆ. ಪ್ರತಿ ಸೆಂಟರ್​ಗೂ ಕನಿಷ್ಟ 8 ರಿಂದ 10 ಸಾವಿರ ಫಲಾನುಭವಿಗಳಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ವಿಮಾನದ ಮೂಲಕ ಸ್ಯಾನಿಟೈಸ್ ಮಾಡುವುದಕ್ಕೆ ಬ್ರೇಕ್: ಗೌರವ್ ಗುಪ್ತಾ ಮಾಹಿತಿ
ವಿಮಾನದ ಮೂಲಕ ಸ್ಯಾನಿಟೈಸರ್ ಸ್ಪ್ರೇ
sandhya thejappa
|

Updated on: May 31, 2021 | 12:45 PM

Share

ಬೆಂಗಳೂರು: ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯದ ರಾಜಧಾನಿಯಲ್ಲಿ ವಿಮಾನದ ಮೂಲಕ ಸ್ಯಾನಿಟೈಸ್ ಮಾಡುವುದಕ್ಕೆ ನಿನ್ನೆ (ಮೇ 29) ಚಾಲನೆ ನೀಡಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ವಿಮಾನದ ಮೂಲಕ ಸ್ಯಾನಿಟೈಸ್ ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು. ಕೆಲವು ತಾಂತ್ರಿಕ ಸಮಸ್ಯೆಗಳು ಇದ್ದವು. ಹೀಗಾಗಿ ಇಂದಿನಿಂದ ಆಗಬೇಕಿದ್ದ ಸ್ಪ್ರೇ ಸ್ಥಗಿತವಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಿಕೊಂಡು ತೀರ್ಮಾನ ಮಾಡಲಾಗುವುದು ಎಂದು ಗೌರವ್ ಗುಪ್ತಾ ಹೇಳಿದ್ದಾರೆ.

ಎರಡನೇ ಡೋಸ್ ಕೋವ್ಯಾಕ್ಸಿನ್ ನೀಡಿಕೆ ಬಗ್ಗೆ ಪತ್ರಿಕ್ರಿಯಿಸಿದ ಗೌರವ್ ಗುಪ್ತಾ, ಎರಡನೇ ಡೋಸ್ ಪಡೆಯುವರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರವಾರು ಒಂದೊಂದು ಸೆಂಟರ್ ಆರಂಭಿಸಿದ್ದೇವೆ. ಪ್ರತಿ ಸೆಂಟರ್​ಗೂ ಕನಿಷ್ಟ 8 ರಿಂದ 10 ಸಾವಿರ ಫಲಾನುಭವಿಗಳಿದ್ದಾರೆ. ಒಂದೊಂದು ಸೆಂಟರ್​ನಲ್ಲಿ ಇಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಮತ್ತಷ್ಟು ಸೆಂಟರ್ ಹೆಚ್ಚಳ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ವ್ಯಾಕ್ಸಿನ್ ನೀಡುವ ಕಾರ್ಯಕ್ರಮ ನಡೀತಾ ಇದೆ. 45 ವರ್ಷ ಮೇಲ್ಪಟ್ಟವರಿಗೆ ಈಗ ಕೊಡುತ್ತಿದ್ದೇವೆ. 198 ವಾರ್ಡ್ ಗಳಲ್ಲಿ ವ್ಯಾಕ್ಸಿನ್ ಕ್ಯಾಂಪ್ ನಡಿಯುತ್ತಿದೆ. ಪ್ರತಿ ಕ್ಯಾಂಪ್​ನಲ್ಲೂ 100 ರಿಂದ 150 ಲಸಿಕೆ ನೀಡಲಾಗುತ್ತಿದೆ. ಇನ್ನಷ್ಟು ವ್ಯಾಕ್ಸಿನ್ ಬಂದರೆ ಲಸಿಕೆ ನೀಡುವುದನ್ನು ಚುರುಕುಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತಿಳಿಸಿದರು.

ಇದನ್ನೂ ಓದಿ

ವಿಮಾನದ ಮೂಲಕ ಸ್ಯಾನಿಟೈಸ್ ಕಾರ್ಯಕ್ಕೆ ಚಾಲನೆ; ನಾಳೆಯಿಂದ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಸ್ಯಾನಿಟೈಸೇಷನ್

ಕೊವಿಡ್ ಪುನರ್ ಚೇತನ ಅಭಿಯಾನ; ಸೋಂಕಿನಿಂದ ಗುಣಮುಖರಾದವರ ಆತ್ಮಸ್ಥೈರ್ಯ ಹೆಚ್ಚಿಸಲು ಜಿಲ್ಲಾಡಳಿತದಿಂದ ವಿನೂತನ ಪ್ರಯೋಗ

(gaurav gupta said work on sanitizing through Aeroplane was halted due to a technical problem)