Mace Spice: ಈ ಮಸಾಲೆ ಪದಾರ್ಥದ ಸೇವನೆಯನ್ನು ನೀವು ಮಾಡಲೇಬೇಕು!
ಜಾಯಿಕಾಯಿಯನ್ನು ಸಾಂಬಾರು ಪದಾರ್ಥವಾಗಿ ಬಳಸುವುದು ರೂಢಿ. ಅದಲ್ಲದೆ ಇದರ ಎಣ್ಣೆಯನ್ನು ಸಹ ಸುಗಂಧ ದ್ರವ್ಯಗಳನ್ನು ತಯಾರಿಸುವಲ್ಲಿ ಜೊತೆಗೆ ಔಷಧಗಳಲ್ಲಿ ಬಳಸಲಾಗುತ್ತದೆ. ಈ ಮಸಾಲೆ ಪದಾರ್ಥದಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದನ್ನು ದಿನನಿತ್ಯ ಬಳಕೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಮಸಾಲೆ ಪದಾರ್ಥಗಳ ಆ ಘಮವೇ ಬೇರೆ, ಯಾವ ಭಕ್ಷಕ್ಕೆ ಆಗಲಿ ತನ್ನದೇ ಆದ ಪರಿಮಳ ಸೇರಿಸುವ ಗುಣ ಇವುಗಳಿಗಿರುತ್ತದೆ. ಅದರಲ್ಲಿಯೂ ಬಿರಿಯಾನಿ ಇಷ್ಟ ಪಟ್ಟು ತಿನ್ನುವವರಿಗೆ ಈ ಮಸಾಲೆ ಪದಾರ್ಥಗಳ ಬಗ್ಗೆ ಹೆಚ್ಚಾಗಿ ತಿಳಿದಿರುತ್ತದೆ. ಅದರಲ್ಲಿಯೂ ಬಿರಿಯಾನಿಯ ರುಚಿಗೆ ಕಾರಣವೆಂದರೆ ಅದರಲ್ಲಿ ಬಳಸುವ ಜಾಪತ್ರೆ ಅಥವಾ ಜಪತ್ರಿ. ಇದು ಮಸಾಲೆಗಳಲ್ಲಿ ಒಂದಾಗಿದೆ. ಈ ಜಾಪತ್ರೆ ಅಥವಾ ಜಾಯಿಕಾಯಿ ಆಗ್ನೇಯ ಏಷ್ಯಾ ಖಂಡದಲ್ಲಿ ಸಾಮಾನ್ಯವಾಗಿ ಬೆಳೆಯುವ ಸದಾ ಹಸಿರಾಗಿರುವ ಮರಗಳಲ್ಲೊಂದಾಗಿದೆ. ಇದರಲ್ಲಿ ಬೆಳೆಯುವ, ಚಿನ್ನದ ಗುಣಗಳಿರುವ ಜಾಯಿಕಾಯಿಯನ್ನು ಸಾಂಬಾರು ಪದಾರ್ಥವಾಗಿ ಬಳಸುವುದು ರೂಢಿ. ಅದಲ್ಲದೆ ಇದರ ಎಣ್ಣೆಯನ್ನು ಸಹ ಸುಗಂಧ ದ್ರವ್ಯಗಳನ್ನು ತಯಾರಿಸುವಲ್ಲಿ ಜೊತೆಗೆ ಔಷಧಗಳಲ್ಲಿ ಬಳಸಲಾಗುತ್ತದೆ. ಈ ಮಸಾಲೆ ಪದಾರ್ಥದಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದನ್ನು ದಿನನಿತ್ಯ ಬಳಕೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
- ಜೀರ್ಣಕಾರಿ ಸಮಸ್ಯೆಗೆ ರಾಮಬಾಣ: ಜಾಪತ್ರೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಜೀರ್ಣಕಾರಿ ಗುಣಗಳನ್ನು ಹೊಂದಿದೆ. ಕೆಲವೊಮ್ಮೆ ಅಜೀರ್ಣ ಮತ್ತು ಹೊಟ್ಟೆಯುಬ್ಬರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ. ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
- ಕಿಡ್ನಿ ಕಲ್ಲುಗಳನ್ನು ಕರಗಿಸುತ್ತದೆ: ಮೂತ್ರಪಿಂಡಗಳಲ್ಲಿನ ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯವೂ ಜಾಪತ್ರೆಗೆ ಇದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
- ಸಂಧಿವಾತದಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ: ಜಾಪತ್ರೆಯಲ್ಲಿರುವ ಮಧುಮೇಹ ವಿರೋಧಿ ಗುಣಲಕ್ಷಣಗಳು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅದಲ್ಲದೆ ಇದು ಉರಿಯೂತ ನಿವಾರಕ ಗುಣಗಳು ಸಂಧಿವಾತದಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿಯಾಗಿದೆ.
- ತೂಕ ಕಡಿಮೆ ಮಾಡಲು ಸಹಕಾರಿ: ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ನೀವು ಆಹಾರದಲ್ಲಿ ಜಾಪತ್ರೆಯನ್ನು ಸೇರಿಸಿಕೊಳ್ಳುವುದರಿಂದ, ಹಸಿವು ಕ್ರಮೇಣ ಕಡಿಮೆಯಾಗುತ್ತದೆ. ಹಾಗಾಗಿ ತೂಕ ಹೆಚ್ಚಾಗುವ ಭಯವಿರುವುದಿಲ್ಲ.
- ಚರ್ಮದ ಕಾಂತಿಗೆ ಸಹಕಾರಿ: ಜಾಪತ್ರೆಯ ನಿಯಮಿತ ಸೇವನೆಯು ಆರೋಗ್ಯಕರ ಚರ್ಮದ ಹೊಳಪನ್ನು ಪಡೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಕಾಂತಿ ದೀರ್ಘಕಾಲದ ವರೆಗೆ ಇರುವಂತೆ ಮಾಡುತ್ತದೆ. ಜೊತೆಗೆ ಜಾಪತ್ರೆಯಲ್ಲಿರುವ ಮಸಿಲಿಗ್ನಾನ್ ನಮ್ಮ ಚರ್ಮವನ್ನು ಅಲ್ಟ್ರಾ- ವೈಲೆಟ್ ರೇಸ್ ನಿಂದ ರಕ್ಷಿಸುತ್ತದೆ.
- ಹೃದಯವನ್ನು ಆರೋಗ್ಯವಾಗಿಡುತ್ತದೆ: ಜಾಪತ್ರೆಯಲ್ಲಿ ಇರುವ ಉತ್ಕರ್ಷಣ ನಿರೋಧಕಗಳು, ರೋಗ ಮತ್ತು ಸೋಂಕುಗಳ ವಿರುದ್ಧ ಹೋರಾಡುತ್ತವೆ. ಜೊತೆಗೆ ಹೃದಯ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
- ಉರಿಯೂತವನ್ನು ಕಡಿಮೆ ಮಾಡುತ್ತದೆ: ಇದು ಹೊಟ್ಟೆ ನೋವು ಮತ್ತು ಅಸ್ವಸ್ಥತೆಯನ್ನು ಸಹ ಕಡಿಮೆ ಮಾಡುತ್ತದೆ. ಕರುಳಿನಲ್ಲಿ ಕಂಡು ಬರುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
(ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Wed, 8 January 25