AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ-ಅಮ್ಮ ಮನೆಯಲ್ಲಿ ಬೆಕ್ಕು ಸಾಕುವಂತಿಲ್ಲ ಎಂದಿದ್ದಕ್ಕೆ ವೈದ್ಯೆ ಆತ್ಮಹತ್ಯೆ

ಕೆಲವೊಮ್ಮೆ ತೀರಾ ಕ್ಷುಲ್ಲಕ ಕಾರಣಕ್ಕೆ ಕೆಲವರು ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಬದುಕಬೇಕೆಂದು ಎಷ್ಟೇ ಆಸೆಯಿದ್ದರೂ ಅವರ ಆಯಸ್ಸು ಗಟ್ಟಿಯಾಗಿರುವುದಿಲ್ಲ, ವಿಧಿಯಾಟಕ್ಕೆ ಬಲಿಯಾಗಬೇಕಾಗುತ್ತದೆ. ಇತ್ತೀಚೆಗೆ ಈ ಆತ್ಮಹತ್ಯೆಯ ಮನೋಭಾವ ಜನರಲ್ಲಿ ಹೆಚ್ಚಾಗುತ್ತಿದೆ. ಇದು ಒಂದು ರೀತಿಯ ಮಾನಸಿಕ ಸಮಸ್ಯೆಯೂ ಹೌದು. ಖಿನ್ನತೆ, ಆತ್ಮಹತ್ಯೆಯ ಯೋಚನೆ ಪದೇಪದೆ ಮರುಕಳಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕೆಂಬುದು ನಿಜ. ಆದರೆ, ಇಲ್ಲೊಬ್ಬರು ವೈದ್ಯೆಯೇ ತೀರಾ ಸಣ್ಣ ಕಾರಣಕ್ಕೆ ತಮ್ಮ ಜೀವ ತೆಗೆದುಕೊಂಡಿದ್ದಾರೆ.

ಅಪ್ಪ-ಅಮ್ಮ ಮನೆಯಲ್ಲಿ ಬೆಕ್ಕು ಸಾಕುವಂತಿಲ್ಲ ಎಂದಿದ್ದಕ್ಕೆ ವೈದ್ಯೆ ಆತ್ಮಹತ್ಯೆ
Pet Cat
ಸುಷ್ಮಾ ಚಕ್ರೆ
|

Updated on: Mar 21, 2026 | 3:45 PM

Share

ಹೈದರಾಬಾದ್, ಮಾರ್ಚ್ 21: ಯುವ ವೈದ್ಯೆಯೊಬ್ಬರು ತನ್ನ ತಂದೆ-ತಾಯಿ ಮನೆಯಲ್ಲಿ ಬೆಕ್ಕನ್ನು (Pet Cat) ಸಾಕುವಂತಿಲ್ಲ ಎಂದು ಹೇಳಿದರೆಂಬ ಒಂದೇ ಒಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರವಾದ ಮತ್ತು ಆಘಾತಕಾರಿ ಘಟನೆ ನಡೆದಿದೆ. ಸಾಕು ಬೆಕ್ಕನ್ನು ಸಾಕಲು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ ನಂತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಂಬಿಬಿಎಸ್ ಮುಗಿಸಿದ 23 ವರ್ಷದ ಮಹಿಳೆಯೊಬ್ಬರು ಮನೆಯಲ್ಲಿ ಸಾಕು ಬೆಕ್ಕನ್ನು ಸಾಕಲು ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ವಾಲ್ ನಿವಾಸಿಯಾಗಿರುವ ವೈದ್ಯೆ ಶುಕ್ರವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ಬಲಿ: ತನಿಖೆಗೆ ಸಚಿವರ ಆದೇಶ

ಎಂಬಿಬಿಎಸ್ ನಂತರ ಹೆಚ್ಚಿನ ಅಧ್ಯಯನಕ್ಕೆ ತಯಾರಿ ನಡೆಸುತ್ತಿದ್ದ ಆಕೆ ಕಳೆದ 3 ತಿಂಗಳಿನಿಂದ ಸಾಕು ಬೆಕ್ಕನ್ನು ಸಾಕುತ್ತಿದ್ದರು. ಆದರೆ, ಆಕೆಯ ಪೋಷಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅವರು ಸಾಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿ ಮಾರ್ಚ್ 18ರಂದು, ಮೀರ್‌ಪೇಟ್‌ನಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಸಾಕು ಬೆಕ್ಕಿನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ರೀತಿಯ ಸಣ್ಣಪುಟ್ಟ ಕಾರಣಗಳಿಗೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
3 ಜೀವದಾನಗಳ ಲಾಭ ಪಡೆದು ಅರ್ಧಶತಕ ಬಾರಿಸಿದ ಅಭಿಷೇಕ್
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್