AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹ ಆಟಗಾರನ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದ ಅಫ್ಘಾನ್ ಆಟಗಾರರು!

Shapoor Zadran: ಅಫ್ಘಾನಿಸ್ತಾನ ಕ್ರಿಕೆಟ್ ಇತಿಹಾಸದ ಸುವರ್ಣ ಯುಗದ ಆರಂಭಕ್ಕೆ ಕಾರಣರಾಗಿದ್ದ, ದೇಶದ ಮೊಟ್ಟಮೊದಲ ಸ್ಟಾರ್ ವೇಗದ ಬೌಲರ್ ಶಪೂರ್ ಝದ್ರಾನ್ ಅವರ ಅಕಾಲಿಕ ನಿಧನವು ಜಾಗತಿಕ ಕ್ರಿಕೆಟ್ ಲೋಕವನ್ನು ತೀವ್ರ ಆಘಾತಕ್ಕೆ ತಳ್ಳಿದೆ. ಅಪರೂಪದ ಅನಾರೋಗ್ಯದ ವಿರುದ್ಧ ದೀರ್ಘಕಾಲ ಹೋರಾಡಿದ ಅವರು ತಮ್ಮ ಜನ್ಮದಿನಗಿಂತ ಒಂದು ದಿನ ಮುಂಚಿತವಾಗಿ ಇಹಲೋಕ ತ್ಯಜಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Jul 09, 2026 | 8:54 AM

Share
ಅಫ್ಘಾನಿಸ್ತಾನ್ ಕ್ರಿಕೆಟ್​ನ ವೇಗದ ಬೌಲರ್ ಶಾಪೂರ್ ಝದ್ರಾನ್ (38) ಅವರು ಜುಲೈ 7, 2026 ರಂದು ಭಾರತದ ನವ ದೆಹಲಿಯಲ್ಲಿ ನಿಧನರಾಗಿದ್ದರು. ಕಳೆದ ಕೆಲವು ಸಮಯದಿಂದ ‘ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್’ (HLH) ಎಂಬ ಅಪರೂಪದ ರೋಗನಿರೋಧಕ ಶಕ್ತಿಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಳಗವಾರ ಕೊನೆಯುಸಿರೆಳೆದಿದ್ದರು. (PC: ACB)

1 / 6
ಜುಲೈ 8, 2026ರ ಬುಧವಾರದಂದು ಸಂಜೆ 4:00 ಗಂಟೆಗೆ ಕಾಮ್ ಏರ್ ವಿಮಾನದ ಮೂಲಕ ಶಾಪೂರ್ ಅವರ ಪಾರ್ಥಿವ ಶರೀರವನ್ನು ಭಾರತದಿಂದ ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅತ್ಯಂತ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿತ್ತು. (PC: ACB)

2 / 6
ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ (ACB) ಅಧಿಕಾರಿಗಳು, ಸ್ಟಾರ್ ಆಟಗಾರರಾದ ಇಬ್ರಾಹಿಂ ಝದ್ರಾನ್, ರಶೀದ್ ಖಾನ್, ಮೊಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಝ್ ಸೇರಿದಂತೆ ಹಾಲಿ ಮತ್ತು ಮಾಜಿ ಸಹ ಆಟಗಾರರು ಹಾಗೂ ಸರ್ಕಾರಿ ಗಣ್ಯರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಣ್ಣೀರಿನ ವಿದಾಯ ಹೇಳಿದರು. (PC: ACB)

3 / 6
ಅಫ್ಘನಿಸ್ತಾನ್ ಆಟಗಾರರು ಹೆಗಲು ಕೊಟ್ಟು ಶಾಪೂರ್ ಝದ್ರಾನ್ ಅವರ ಶವಪೆಟ್ಟಿಗೆಯನ್ನು ಸಾಗಿಸಿದರು. ಅಲ್ಲಿಂದ ಪಾರ್ಥಿವ ಶರೀರವನ್ನು ಬಗ್ರಾಮಿ ಜಿಲ್ಲೆಯ ಸದ್ರ್-ಎ-ಅಜಮ್ ಟೌನ್‌ಶಿಪ್‌ನಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅಫ್ಘಾನ್ ಕ್ರಿಕೆಟ್ ಮಂಡಳಿಯ ಮಾಹಿತಿ ಪ್ರಕಾರ, ಇಂದು (ಜುಲೈ 9, 2026, ಗುರುವಾರ) ಶಾಪೂರ್ ಜದ್ರಾನ್ ಅವರ ಅಂತ್ಯಕ್ರಿಯೆ ನೆರವೇರಲಿದೆ. (PC: ACB)

4 / 6
ಅಫ್ಘಾನಿಸ್ತಾನದ ಹೆಮ್ಮೆಯ ಕ್ರಿಕೆಟಿಗನ ಗೌರವಾರ್ಥವಾಗಿ, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ‘ಶ್ಪಗೀಜಾ ಕ್ರಿಕೆಟ್ ಲೀಗ್’ ಪಂದ್ಯಾವಳಿಗಳನ್ನು ಜುಲೈ 8 ಮತ್ತು 9 ರಂದು ಸಂಪೂರ್ಣವಾಗಿ ಮುಂದೂಡಲಾಗಿದೆ ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್​ ಪ್ರಕಟಿಸಿದೆ. (PC: ACB)

5 / 6
ಶಾಪೂರ್ ಝದ್ರಾನ್ ಕೇವಲ ಬೌಲರ್ ಆಗಿರಲಿಲ್ಲ, ಅಫ್ಘಾನ್ ಕ್ರಿಕೆಟ್‌ನ ಭದ್ರ ಬುನಾದಿಯಾಗಿದ್ದರು. ದೇಶದ ಪರ 80 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 80 ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ 2015ರ ಏಕದಿನ ವಿಶ್ವಕಪ್‌ನಲ್ಲಿ ಸ್ಕಾಟ್‌ಲ್ಯಾಂಡ್ ವಿರುದ್ಧ ವಿನ್ನಿಂಗ್ ರನ್ ಬಾರಿಸಿ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದರು. ಅವರ ಸುದೀರ್ಘ ರನ್ನಿಂಗ್ ಮತ್ತು ಅದ್ಭುತ ಬೌಲಿಂಗ್ ಶೈಲಿಯನ್ನು ಕ್ರಿಕೆಟ್ ಲೋಕ ಎಂದಿಗೂ ಮರೆಯುವುದಿಲ್ಲ. (PC: ACB)

6 / 6
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್

ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ

ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ

ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು

ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ

ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ

ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್

ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ

ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ

ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು