‘ನಾನು ಮಾತನಾಡಿದರೆ ವಿವಾದ ಆಗುತ್ತಿದೆ’; ಬೇಸರ ಹೊರಹಾಕಿದ ನೀನಾಸಂ ಸತೀಶ್
ನಟ ಸತೀಶ್ ನಿನಾಸಂ ಅಯೋಗ್ಯ 2 ಚಿತ್ರದ ಕುರಿತು ಮಾತನಾಡಿದ್ದಾರೆ. ತಾನು ವಿವಾದಿತ ವ್ಯಕ್ತಿಯಲ್ಲದಿದ್ದರೂ, ತನ್ನ ಮಾತುಗಳು ವಿವಾದಗಳನ್ನು ಸೃಷ್ಟಿಸುತ್ತಿವೆ ಎಂದಿದ್ದಾರೆ. ‘ಅಯೋಗ್’ ಹೋರಾಟದ ದಿನಗಳನ್ನು ನೆನೆದು, ಅಯೋಗ್ಯ 2 ಚಿತ್ರದ ದೊಡ್ಡ ಬಜೆಟ್ ನಿರ್ವಹಿಸಿದ ನಿರ್ಮಾಪಕ ಮುನಿಗೌಡ್ರಿಗೆ ಧನ್ಯವಾದ ಅರ್ಪಿಸಿದ್ದಾರೆ.
ನಟ ನಿನಾಸಂ ಸತೀಶ್ (Ninasam Sathish) ‘ಅಯೋಗ್ಯ 2’ (Ayogya 2) ಚಿತ್ರದಲ್ಲಿ ರಚಿತಾ ರಾಮ್ (Rachita Ram) ಜೊತೆ ನಟಿಸಿದ್ದಾರೆ. ತಮ್ಮ ಮುಂಬರುವ ‘ಅಯೋಗ್ಯ 2’ ಕುರಿತು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅಯೋಗ್ಯ 2 ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಾನು ಕಾಂಟ್ರವರ್ಸಿ ಮನುಷ್ಯನಲ್ಲ, ಆದರೆ ನಾನು ಮಾತನಾಡಿದರೆ ವಿವಾದಗಳು ಆಗುತ್ತಿವೆ’ ಎಂದು ಬೇಸರ ಹೊರಹಾಕಿದ್ದಾರೆ. ಇತ್ತೀಚೆಗೆ ಅವರು ನಿರ್ಮಾಪಕರ ಬಗ್ಗೆ ಮಾತನಾಡಿದ್ದು ಚರ್ಚೆಗೆ ಕಾರಣ ಆಗಿತ್ತು.
ಅಯೋಗ್ಯ ಚಿತ್ರದ ಮೊದಲ ಭಾಗದ ನಿರ್ಮಾಣದ ಸಮಯದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನೆದ ಸತೀಶ್, ‘ಅಯೋಗ್ಯ 2 ನನ್ನ ಪಾಲಿಗೆ ಮತ್ತೊಂದು ಭಾವನಾತ್ಮಕ ಕ್ಷಣ. ಚಿತ್ರದ ನಿರ್ಮಾಪಕ ಮುನಿಗೌಡ್ರಿಗೆ ವಿಶೇಷ ಧನ್ಯವಾದ. ಇಷ್ಟು ದೊಡ್ಡ ಬಜೆಟ್‌ನ ಚಿತ್ರವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ’ ಎಂದು ಶ್ಲಾಘಿಸಿದರು. ರಚಿತಾ ರಾಮ್, ರವಿಶಂಕರ್, ಸಾಧು ಕೋಕಿಲ, ಗಿರಿ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಇರುವ ಅಯೋಗ್ಯ 2 ಚಿತ್ರದ ನಿರ್ವಹಣೆ ಕಷ್ಟಕರ ಎಂದು ವಿವರಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

