- TV9 Kannada Kannada News Photos Cricket Photos Sourav Ganguly Enters ICC Hall of Fame on 54th Birthday: India's 12th Cricket Legend
ಜನ್ಮ ದಿನದಂದೇ ಸೌರವ್ ಗಂಗೂಲಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ
Sourav Ganguly Hall of Fame: ಸೌರವ್ ಗಂಗೂಲಿ ತಮ್ಮ 54ನೇ ಜನ್ಮದಿನದಂದು ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡಿದ್ದಾರೆ. ಭಾರತ ಕ್ರಿಕೆಟ್‌ನಲ್ಲಿ ಗಂಗೂಲಿಯವರ ಅಪ್ರತಿಮ ಕೊಡುಗೆ, ವಿಶೇಷವಾಗಿ ನಾಯಕರಾಗಿ ತಂಡವನ್ನು ಮುನ್ನಡೆಸಿ ಅನೇಕ ಪ್ರತಿಭೆಗಳನ್ನು ಬೆಳೆಸಿದ್ದು ಸ್ಮರಣೀಯ. ಈ ಗೌರವಕ್ಕೆ ಪಾತ್ರರಾದ 12ನೇ ಭಾರತೀಯ ಕ್ರಿಕೆಟಿಗ ಇವರಾಗಿದ್ದು, ಭಾರತೀಯ ಕ್ರಿಕೆಟ್‌ಗೆ ಮತ್ತೊಂದು ಗರಿ ಬಂದಿದೆ. ಇದು ಗಂಗೂಲಿಯವರ ನಾಯಕತ್ವ ಮತ್ತು ಆಟಗಾರನಾಗಿ ಅವರ ಅಗಾಧ ಸಾಧನೆಗೆ ಸಂದ ಗೌರವ.
Updated on: Jul 08, 2026 | 9:10 PM

ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಇಂದು ಅಂದರೆ ಜುಲೈ 8 ರಂದು ತಮ್ಮ 54ನೇ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ ಗಂಗೂಲಿ ಭಾರತ ಕ್ರಿಕೆಟ್‌ಗೆ ನೀಡಿದ ಕೊಡುಗೆಗಳು ಅಪಾರ. ಗಂಗೂಲಿ ನಾಯಕರಾಗಿದ್ದಾಗ ಟೀಂ ಇಂಡಿಯಾಕ್ಕೆ ಸೇರಿದ ಆಟಗಾರರು ತಂಡವನ್ನು ಹಲವು ಸ್ಮರಣೀಯ ಗೆಲುವಿನತ್ತ ಕೊಂಡೊಯ್ದರು. ಅವರಲ್ಲಿ ಧೋನಿ, ಯುವರಾಜ್, ಸೆಹ್ವಾಗ್, ಜಹೀರ್ ಖಾನ್ರಂತಹ ಶ್ರೇಷ್ಠ ಆಟಗಾರರಿದ್ದಾರೆ (PC-PTI).

ಇಂತಹ ಗಂಗೂಲಿಗೆ ಭಾರತ ಕ್ರಿಕೆಟ್‌ನಲ್ಲಿ ಅಪಾರ ಗೌರವ ಸಂದಿದೆ. ಇದೀಗ ಗಂಗೂಲಿಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದಲೂ ಸ್ಮರಣೀಯ ಕಾಣಿಕೆಯೊಂದು ಸಿಕ್ಕಿದೆ. ತನ್ನ ಹುಟುಹಬ್ಬದ ಸಂತಸದಲ್ಲಿರುವ ಗಂಗೂಲಿ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ (PC-PTI).

ಈ ವಿಚಾರವನ್ನು ಸ್ವತಃ ಗಂಗೂಲಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ‘ನನ್ನನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಿದ್ದಕ್ಕಾಗಿ ಐಸಿಸಿ ಮತ್ತು ಅಧ್ಯಕ್ಷ ಜಯ್ ಶಾ ಅವರಿಗೆ ಧನ್ಯವಾದಗಳು. ಇದು ಒಂದು ದೊಡ್ಡ ಗೌರವ. ಇಲ್ಲಿಯವರೆಗೆ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಕೇವಲ 10 ಭಾರತೀಯರಲ್ಲಿ ಒಬ್ಬರಾಗಿರುವುದು ಅದ್ಭುತವಾಗಿದೆ. ಕೆಲವು ಶ್ರೇಷ್ಠ ಹೆಸರುಗಳ ಭಾಗವಾಗುವುದು ಅದ್ಭುತವಾಗಿದೆ’ ಎಂದು ಬರೆದುಕೊಂಡಿದ್ದಾರೆ (PC-PTI).

ಸೌರವ್ ಗಂಗೂಲಿ ಅವರ ಸೇರ್ಪಡೆಯೊಂದಿಗೆ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಭಾರತೀಯ ಪುರುಷ ಕ್ರಿಕೆಟಿಗರ ಸಂಖ್ಯೆ 10 ಕ್ಕೇರಿದೆ. ಇವರ ಜೊತೆಗೆ ಇಬ್ಬರು ಭಾರತೀಯ ಮಹಿಳಾ ಕ್ರಿಕೆಟಿಗರು ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂದರೆ ಭಾರತ ಕ್ರಿಕೆಟ್ಬಿಂದ ಈ ಗೌರವಕ್ಕೆ ಭಾಜನರಾದ 12 ನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಗಂಗೂಲಿ ಪಾತ್ರರಾಗಿದ್ದಾರೆ (PC-PTI).

ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾದ ಭಾರತೀಯರಲ್ಲಿ, ಸುನಿಲ್ ಗವಾಸ್ಕರ್ (2009), ಬಿಶನ್ ಸಿಂಗ್ ಬೇಡಿ (2009), ಕಪಿಲ್ ದೇವ್ (2009), ಅನಿಲ್ ಕುಂಬ್ಳೆ (2015), ರಾಹುಲ್ ದ್ರಾವಿಡ್ (2018), ಸಚಿನ್ ತೆಂಡೂಲ್ಕರ್ (2019), ವಿನೂ ಮಂಕಡ್ (2021), ಡಯಾನಾ ಎಡುಲ್ಜಿ (2023), ವೀರೇಂದ್ರ ಸೆಹ್ವಾಗ್ (2023), ನೀತು ಡೇವಿಡ್ (2024), ಎಂಎಸ್ ಧೋನಿ (2025), ಸೌರವ್ ಗಂಗೂಲಿ (2026) (PC-PTI).

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



