AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಪತ್ನಿಯ ಕೊಂದು, ಶವದ ಪೋಟೊವನ್ನು ಭಾರತದಲ್ಲಿರುವ ಪ್ರೇಯಸಿಗೆ ಕಳುಹಿಸಿ ಸಿಕ್ಕಿಬಿದ್ದ ಟೆಕ್ಕಿ

ಅಮೆರಿಕದಲ್ಲಿ ಭಾರತೀಯ ಟೆಕ್ಕಿ ಅವಿನಾಶ್ ನಾರ್ನೆ ತನ್ನ ಪತ್ನಿ ರಾಜಿತಾ ಸಬ್ಬಿನೇನಿಯನ್ನು ಕೊಲೆಗೈದು ಶವದ ಫೋಟೋವನ್ನು ಭಾರತದಲ್ಲಿರುವ ಪ್ರೇಯಸಿಗೆ ವಾಟ್ಸಾಪ್ ಮಾಡಿದ್ದ. ಆರಂಭದಲ್ಲಿ ಆತ್ಮಹತ್ಯೆಯೆಂದು ಬಿಂಬಿಸಲು ಯತ್ನಿಸಿದ್ದ, ಆದರೆ 9 ತಿಂಗಳ ತನಿಖೆಯ ನಂತರ ಬಂಧಿತನಾಗಿದ್ದಾನೆ. ಪತ್ನಿಯ ಪಾನೀಯದಲ್ಲಿ ವಿಷ ಬೆರೆಸಿದ್ದ ಶಂಕೆಯೂ ಇದೆ. ಈ ಕರಾಳ ಕೃತ್ಯಕ್ಕೆ ಆತನಿಗೆ ಜೀವಾವಧಿ ಶಿಕ್ಷೆ ಎದುರಾಗುವ ಸಾಧ್ಯತೆಯಿದೆ.

ಅಮೆರಿಕದಲ್ಲಿ ಪತ್ನಿಯ ಕೊಂದು, ಶವದ ಪೋಟೊವನ್ನು ಭಾರತದಲ್ಲಿರುವ ಪ್ರೇಯಸಿಗೆ ಕಳುಹಿಸಿ ಸಿಕ್ಕಿಬಿದ್ದ ಟೆಕ್ಕಿ
ಆರೋಪಿ
ನಯನಾ ರಾಜೀವ್
|

Updated on: Jul 09, 2026 | 1:25 PM

Share

ವಾಷಿಂಗ್ಟನ್, ಜುಲೈ 09: ಅಮೆರಿಕದ ವಾಷಿಂಗ್ಟನ್ ರಾಜ್ಯದ ಬೆಲ್ಲೆವ್ಯೂ ನಗರದಲ್ಲಿ ಮೈ ನಡುಗಿಸುವಂತಹ ಕೊಲೆ ಬೆಳಕಿಗೆ ಬಂದಿದೆ. ಭಾರತ ಮೂಲದ 30 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಅವಿನಾಶ್ ನಾರ್ನೆ, ತನ್ನ 27 ವರ್ಷದ ಪತ್ನಿ ರಾಜಿತಾ ಸಬ್ಬಿನೇನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಹೆಂಡತಿಯ ಮೃತದೇಹದ ಫೋಟೋವನ್ನು ಭಾರತದಲ್ಲಿದ್ದ ತನ್ನ ಪ್ರೇಯಸಿಗೆ ವಾಟ್ಸಾಪ್ ಮಾಡಿದ್ದಾನೆ.

ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಈ ಕೊಲೆಯನ್ನು ಆತ ಆತ್ಮಹತ್ಯೆ ಅಥವಾ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ. ಆದರೆ ಸುದೀರ್ಘ 9 ತಿಂಗಳ ತನಿಖೆಯ ನಂತರ ಅಮೆರಿಕ ಪೊಲೀಸರು ಆತನ ಅಸಲಿ ಮುಖವಾಡವನ್ನು ಬಯಲು ಮಾಡಿ ಜುಲೈ 5 ರಂದು ಕೊಲೆ ಆರೋಪದಡಿ ಬಂಧಿಸಿದ್ದಾರೆ.

2025ರ ಅಕ್ಟೋಬರ್ 27 ರಂದು ಅವಿನಾಶ್ ಪೊಲೀಸರಿಗೆ ಕರೆ ಮಾಡಿ, ತನ್ನ ಪತ್ನಿ  ಬಾತ್​ರೂಮ್​ಗೆ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ, ಎಷ್ಟು ಕರೆದರೂ ಹೊರಗೆ ಬರುತ್ತಿಲ್ಲ ಎಂದು ನಾಟಕವಾಡಿದ್ದ. ಪೊಲೀಸರು ಬಂದು ಬಾಗಿಲು ಮುರಿದು ನೋಡಿದಾಗ ರಾಜಿತಾ ಶವವಾಗಿ ಬಿದ್ದಿದ್ದರು.

ಮತ್ತಷ್ಟು ಓದಿ: ಬರುಯಿಪುರ್ ಅತ್ಯಾಚಾರ-ಕೊಲೆ ಕೇಸ್: ಆರೋಪಿಯ ಎನ್​ಕೌಂಟರ್, ಆತ ಸತ್ತಿದ್ದೇ ಒಳ್ಳೆಯದಾಯಿತು ಎಂದ ತಾಯಿ

ತಾನು ಹೊರಗೆ ಹೋಗಿ 40 ನಿಮಿಷಗಳಲ್ಲಿ ವಾಪಸ್ ಬರುವಷ್ಟರಲ್ಲಿ ಈ ಘಟನೆ ನಡೆದಿದೆ ಎಂದು ಅವಿನಾಶ್ ಕಥೆ ಕಟ್ಟಿದ್ದ. ಆದರೆ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ಸಮಯದಲ್ಲಿ ಆ ಮನೆಯೊಳಗೆ ಬೇರೆ ಯಾರೂ ಪ್ರವೇಶಿಸಿರಲಿಲ್ಲ ಎಂಬುದು ಸಾಬೀತಾಯಿತು. ಮರುದಿನ ವೈದ್ಯಕೀಯ ಪರೀಕ್ಷೆಯಲ್ಲಿ ರಾಜಿತಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವರದಿಯಲ್ಲಿ ಬಂದಿತ್ತು. ಅನುಮಾನ ಪತಿ ಅವಿನಾಶ್ ಮೇಲೆ ತಿರುಗಿತ್ತು.

ಅವರಿಬ್ಬರ ಮದುವೆಗೂ ಬಂದಿದ್ದ ಪ್ರೇಯಸಿ

ತನಿಖೆ ಮುಂದುವರೆದಂತೆ ಅವಿನಾಶ್‌ನ ಕರಾಳ ರಹಸ್ಯಗಳು ಹೊರಬಂದವು. ಅವಿನಾಶ್ ಭಾರತದಲ್ಲಿ ಒಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಜೂನ್ 5, 2025 ರಂದು ರಾಜಿತಾ ಅವರನ್ನು ವಿವಾಹವಾಗಿದ್ದ. ಆಘಾತಕಾರಿ ವಿಷಯವೆಂದರೆ, ಈ ಮದುವೆಗೆ ಅವಿನಾಶ್‌ನ ಆ ರಹಸ್ಯ ಗೆಳತಿಯೂ ಬಂದಿದ್ದಳು.

ಮದುವೆಯಾಗಿ ಅಮೆರಿಕಕ್ಕೆ ಬಂದ ಮೇಲೂ ಅವಿನಾಶ್ ತನ್ನ ಪ್ರೇಯಸಿಯೊಂದಿಗೆ ಸಂಪರ್ಕದಲ್ಲಿದ್ದ. ಕೊಲೆ ನಡೆದ ದಿನದಂದು ಪೊಲೀಸರಿಗೆ ಕರೆ ಮಾಡುವ ಮುನ್ನ ಅವಿನಾಶ್ ತನ್ನ ಪ್ರೇಯಸಿಗೆ ನಾಲ್ಕು ಬಾರಿ ಕರೆ ಮಾಡಿದ್ದ ಹಾಗೂ ಬಾತ್‌ರೂಮ್‌ನಲ್ಲಿ ಬಿದ್ದಿದ್ದ ಹೆಂಡತಿಯ ಹೆಣದ ಫೋಟೋವನ್ನು ಕಳುಹಿಸಿದ್ದ ಎಂದು ಡಿಜಿಟಲ್ ಸಾಕ್ಷ್ಯಗಳು ಹೇಳಿವೆ.

ನೀನು ಕೊಟ್ಟ ಜ್ಯೂಸ್ ಕಹಿಯಾಗಿದೆ, ರಾಜಿತಾ ಕಳುಹಿಸಿದ್ದ ಕೊನೆ ಸಂದೇಶ

ರಾಜಿತಾ ಅವರ ಮೊಬೈಲ್ ಫೋನ್ ಪರಿಶೀಲಿಸಿದಾಗ ಮತ್ತೊಂದು ಆಘಾತಕಾರಿ ಸಾಕ್ಷ್ಯ ಲಭ್ಯವಾಗಿದೆ. ಅವಿನಾಶ್ ತನಗೆ ಕೊಟ್ಟ ಜ್ಯೂಸ್ ತುಂಬಾ ಕಹಿಯಾಗಿರುತ್ತಿದ್ದವು ಎಂದು ರಾಜಿತಾ ಪತಿಗೆ ಮೆಸೇಜ್ ಮಾಡಿದ್ದರು.

ತಾನು ಸಾವನ್ನಪ್ಪುವ ಕೆಲವೇ ಗಂಟೆಗಳ ಮುನ್ನವೂ ರಾಜಿತಾ ಪತಿಗೆ ವಾಟ್ಸಾಪ್ ಮಾಡಿ, ನೀನು ಮಾಡಿಕೊಟ್ಟ ಸ್ಮೂಥಿ ತೀರಾ ಕಹಿಯಾಗಿದ್ದು, ಕೆಮ್ಮಿನ ಸಿರಪ್​ನಂತಿತ್ತು ಎಂದು ಬರೆದಿದ್ದರು. ಇದರಿಂದಾಗಿ ಅವಿನಾಶ್ ಮೊದಲು ಆಕೆಗೆ ಪಾನೀಯದಲ್ಲಿ ವಿಷ ಅಥವಾ ಅಮಲು ಪದಾರ್ಥ ನೀಡಿ, ಆಕೆ ಪ್ರಜ್ಞೆ ತಪ್ಪಿದ ನಂತರ ಕತ್ತು ಹಿಸುಕಿ ಕೊಂದಿದ್ದಾನೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ಜೀವಾವಧಿ ಶಿಕ್ಷೆ

ಅಮೆರಿಕದ ಕಿಂಗ್ ಕೌಂಟಿ ನ್ಯಾಯಾಲಯವು ಆರೋಪಿ ಅವಿನಾಶ್ ನಾರ್ನೆಗೆ ಸದ್ಯಕ್ಕೆ ಯಾವುದೇ ಕಾರಣಕ್ಕೂ ದೇಶ ಬಿಟ್ಟು ಓಡಿಹೋಗದಂತೆ ಬರೋಬ್ಬರಿ 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂಪಾಯಿ) ಭಾರಿ ಮೊತ್ತದ ಜಾಮೀನು ರಹಿತ ಬಾಂಡ್ ವಿಧಿಸಿ ಜೈಲಿಗಟ್ಟಿದೆ.

ಅಪರಾಧ ಸಾಬೀತಾದರೆ ಆರೋಪಿಗೆ ಯಾವುದೇ ಪೆರೋಲ್ ಇಲ್ಲದೆ ಕಡ್ಡಾಯ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸುವ ಅವಕಾಶವಿದೆ. ಭಾರತದಲ್ಲಿರುವ ಆತನ ಪ್ರೇಯಸಿಯನ್ನೂ ಈ ಕೊಲೆಯ ಸಂಚಿನ ಭಾಗವಾಗಿ ಪರಿಗಣಿಸಿ ಅಮೆರಿಕ ತನಿಖಾ ಸಂಸ್ಥೆಗಳು ಆಕೆಯನ್ನು ಪ್ರಶ್ನಿಸಲು ಭಾರತೀಯ ರಾಯಭಾರ ಕಚೇರಿಯ ಸಹಾಯ ಕೋರುವ ಸಾಧ್ಯತೆಯಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ದಸರಾ ರಜೆ: ಕ್ರಿಶ್ಚಿಯನ್ ಶಾಲೆಗಳಿಗೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆ, ಮೂಳೆ ಬಳಕೆ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್​​ನಲ್ಲಿ ಗಾಂಜಾ ಘಮಲು!
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ
ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಭಾರಿ ಮಳೆ