AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್​​​​ನ್ನ ಸಿಎಂ ಮಾಡಿ ಎಂದ ಸ್ವಾಮೀಜಿಗಳಿಗೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ: ಪ್ರಣವಾನಂದಶ್ರೀ

ಡಿಕೆ ಶಿವಕುಮಾರ್​​​​ನ್ನ ಸಿಎಂ ಮಾಡಿ ಎಂದ ಸ್ವಾಮೀಜಿಗಳಿಗೆ ಬಜೆಟ್​​ನಲ್ಲಿ 1 ರೂ ನೀಡಿಲ್ಲ: ಪ್ರಣವಾನಂದಶ್ರೀ

ಗಂಗಾಧರ​ ಬ. ಸಾಬೋಜಿ
|

Updated on:Mar 21, 2026 | 2:52 PM

Share

ಪ್ರಣವಾನಂದ ಸ್ವಾಮೀಜಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಆಗ್ರಹಿಸಿದ್ದಾರೆ. ಕಾಂಗ್ರೆಸ್‌ಗೆ ಡಿ.ಕೆ. ಶಿವಕುಮಾರ್‌ರ ಕೊಡುಗೆಯನ್ನು ಉಲ್ಲೇಖಿಸಿ, ಅವರಿಗೆ ಸಿಎಂ ಸ್ಥಾನ ನೀಡಲು ಪಕ್ಷ ವಿಳಂಬ ಮಾಡುತ್ತಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. 15 ಮಠಾಧೀಶರು ಈ ಸಂಬಂಧ ಎಐಸಿಸಿ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿದ್ದಾರೆ.

ಬೆಂಗಳೂರು, ಮಾರ್ಚ್​ 21: ಮೇ ತಿಂಗಳಲ್ಲಿ ಅರಮನೆ ಮೈದಾನದಲ್ಲಿ ಬೃಹತ್ ಮಠಾಧೀಶ್ವರ ಮಹಾಸಭೆ ವಿಚಾರವಾಗಿ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಡಿಸಿಎಂ ಡಿಕೆ ಶಿವಕುಮಾರ್​​ನ್ನ ಇಂದು ಸದಾಶಿವ ನಗರದ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಡಿಕೆ ಶಿವಕುಮಾರ್​ ಪರ ಮಾತಾಡಿದ ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಬಜೆಟ್​ನಲ್ಲಿ ಸ್ವಾಮೀಜಿಗಳಿಗೆ ಒಂದು ರೂಪಾಯಿ ಕೂಡ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಿಎಂ ಪರವಾಗಿ ಮಾತನಾಡಿದ ಸ್ವಾಮೀಜಿಗಳಿಗೆ ಭೂಮಿ ಕೊಟ್ಟಿದ್ದಾರೆ. ಬಡ ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಯಾಕೆ ಅನುದಾನ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಬೇಕು. ಡಿಕೆ ಶಿವಕುಮಾರ್​​​ನ್ನ ಸಿಎಂ ಮಾಡಬೇಕು ಎಂದು ವರಿಷ್ಠರಿಗೆ ಮನವಿ ಮಾಡ್ತೇವೆ ಎಂದಿದ್ದಾರೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Mar 21, 2026 02:48 PM
Follow Us