Skin Care: ಮೊಣಕೈ ಮತ್ತು ಮೊಣಕಾಲುಗಳ ಮೇಲೆ ಇರುವ ಕಪ್ಪು ಚರ್ಮದ ನಿವಾರಣೆಗೆ ಇಲ್ಲಿದೆ ಸರಳ ಮಾರ್ಗ
ಮೊಣಕೈ ಮತ್ತು ಮೊಣಕಾಲುಗಳಲ್ಲಿನ ಚರ್ಮವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಚಿಂತಿಸುವ ಅಗತ್ಯವಿಲ್ಲ ಹೀಗೆ ಕಪ್ಪಾದ ಚರ್ಮಕ್ಕೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಪ್ರತಿದಿನ ಸ್ನಾನ ಮಾಡುವ ಮೂಲಕ ನಾವು ನಮ್ಮ ಚರ್ಮವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ನಮ್ಮ ದೇಹ ಹೇಗೆ ಸ್ವಚ್ಛವಾಗಿರುತ್ತದೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ. ಆದರೆ ಕೆಲವೊಮ್ಮೆ ನಾವು ನಮ್ಮ ದೇಹವನ್ನು ಸ್ವಚ್ಛವಾಗಿರಿಸಿದ್ದರು ಕೆಲವೊಂದು ಭಾಗದಲ್ಲಿ ಕಪ್ಪಾದ ಚರ್ಮ ಕಂಡುಬರುತ್ತದೆ. ಅದರಲ್ಲೂ ಮುಖ್ಯವಾಗಿ ಮೊಣಕೈ ಮತ್ತು ಮೊಣಕಾಲುಗಳಲ್ಲಿನ ಚರ್ಮವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಚಿಂತಿಸುವ ಅಗತ್ಯವಿಲ್ಲ ಹೀಗೆ ಕಪ್ಪಾದ ಚರ್ಮಕ್ಕೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
1. ನಿಂಬೆ ಹಣ್ಣು ನಿಂಬೆ ಹಣ್ಣು ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದೆ. ಇವು ಚರ್ಮದ ಹೊಳಪಿಗೆ ಸಹಾಯ ಮಾಡುತ್ತದೆ. ಕಪ್ಪಾದ ಪ್ರದೇಶಗಳಲ್ಲಿ ನೀವು ನಿಂಬೆ ರಸವನ್ನು ಹಾಕಿ ಉಜ್ಜುವುದರಿಂದ ಕಪ್ಪಾದ ಚರ್ಮ ದೂರವಾಗುತ್ತದೆ. ನಿಂಬೆ ರಸವನ್ನು ಮೊಣಕಾಲು ಮತ್ತ ಮೊಣಕೈಯ ಭಾಗದಲ್ಲಿ ಹಾಕಿ ನಿಧಾನವಾಗಿ ಮಸಾಜ್ ಮಾಡಿ ಬಳಿಕ 10 ನಿಮಿಷ ಬಿಟ್ಟು ತಂಪಾದ ನೀರಿನಲ್ಲಿ ತೊಳೆಯಿರಿ. ಹೀಗೆ ಒಂದು ವಾರ ಮಾಡುವುದರಿಂದ ಚರ್ಮದ ಬಣ್ಣ ನಿಧಾನವಾಗಿ ಬಿಳಿಯಾಗುತ್ತದೆ.
2. ಮೊಸರು ಮೊಸರನ್ನು ಮಾಯಿಶ್ಚರೈಸರ್ ಎಂದು ಕರೆಯಲಾಗುತ್ತದೆ. ಚರ್ಮದ ಹೊಳಪನ್ನು ಹೆಚ್ಚಿಸಲು ಮೊಸರು ಸಹ ಸಹಾಯ ಮಾಡುತ್ತದೆ. ಮೊಸರಿಗೆ ಒಂದು ಚಮಚ ವಿನೆಗರ್ ಮತ್ತು ಕಡಲೆ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ. ನಂತರ ಇದನ್ನು ಮೊಣಕೈ ಮತ್ತು ಮೊಣಕಾಲುಗಳಿಗೆ ಹಚ್ಚಿ. 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಮೊಣಕೈ ಮತ್ತು ಮೊಣಕಾಲುಗಳನ್ನು ಸ್ವಚ್ಛಗೊಳಿಸಿ ಬಣ್ಣ ಹೆಚ್ಚಾಗಲು ಸಹಾಯ ಮಾಡುತ್ತದೆ.
3. ಅಡಿಗೆ ಸೋಡಾ ಹಾಲಿನಲ್ಲಿ ಅಡಿಗೆ ಸೋಡಾವನ್ನು ಬೆರೆಸಿ ದಪ್ಪ ಪೇಸ್ಟ್ ರೀತಿ ಮಾಡಿ. ನಂತರ ಅದನ್ನು ಮೊಣಕೈ ಮತ್ತು ಮೊಣಕಾಲುಗಳ ಮೇಲೆ ಹಚ್ಚಿ ಮತ್ತು ಐದು ನಿಮಿಷಗಳ ನಂತರ ತೊಳೆಯಿರಿ. ಎರಡು ತಿಂಗಳವರೆಗೆ ವಾರಕ್ಕೊಮ್ಮೆ ಇದನ್ನು ಮಾಡುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ.
4. ಅಲೋ ವೆರಾ ಅಲೋವೆರಾ ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ. ಒರಟಾದ ಚರ್ಮದ ಮೇಲೆ ಅಲೋವೆರಾ ಪೇಸ್ಟ್ ಅನ್ನು ಹಚ್ಚಿ, ಸುಮಾರು 20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದು ನೈಸರ್ಗಿಕವಾಗಿ ಚರ್ಮದ ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತದೆ.
5. ತೆಂಗಿನ ಎಣ್ಣೆ ಒಣ ಚರ್ಮವನ್ನು ಮೃದುಗೊಳಿಸಲು ಮೊಣಕೈ ಮತ್ತು ಮೊಣಕಾಲುಗಳ ಮೇಲೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ಸ್ನಾನದ ನಂತರ ನೀವು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಬಹುದು. ಇದನ್ನು 10 ರಿಂದ 15 ನಿಮಿಷಗಳ ಕಾಲ ಮಾಡಿ. ತೆಂಗಿನ ಎಣ್ಣೆಗೆ ನಿಂಬೆ ರಸವನ್ನೂ ಸೇರಿಸಬಹುದು. ಇದಲ್ಲದೆ ನೀವು ಆಕ್ರೋಡು ಪುಡಿಯನ್ನು ಕೂಡ ಇದಕ್ಕೆ ಸೇರಿಸಬಹುದು.
6. ಆಲಿವ್ ಎಣ್ಣೆ ಆಲಿವ್ ಎಣ್ಣೆಗೆ ಒಂದು ಚಮಚ ಸಕ್ಕರೆ ಹಾಕಿ ಸ್ಕ್ರಬ್ ಮಾದರಿಯಲ್ಲಿ ಬಳಸಬಹದು. ಸಕ್ಕರೆ ನೈಸರ್ಗಿಕ ಎಫ್ಫೋಲಿಯಂಟ್ ಆಗಿದ್ದು, ಅದು ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಆಲಿವ್ ಎಣ್ಣೆ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
Omega-3: ರೋಗನಿರೋಧಕ ಶಕ್ತಿ ಹೆಚ್ಚಿಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಒಮೆಗಾ-3 ಆಹಾರಗಳ ಬಗ್ಗೆ ತಿಳಿಯಿರಿ
ರಾತ್ರಿ ಊಟ ಮಾಡಿದ ಬಳಿಕ ಸ್ನಾನ ಮಾಡುವ ಅಭ್ಯಾಸ ಇದೆಯೇ? ಹಾಗಿದ್ದರೆ ಅದರಿಂದ ಉಂಟಾಗುವ ಸಮಸ್ಯೆ ಬಗ್ಗೆ ಗಮನಿಸಿ