Health Tips: ದಿನಕ್ಕೆ ಎರಡು ಬಾರಿ ಬಾದಾಮಿ ಸೇವಿಸುವುದರಿಂದಾಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಬಾದಾಮಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಬಹುದು. ಜತೆಗೆ ಇದು ಮಧುಮೇಹದ ಬೆಳವಣಿಗೆಯನ್ನು ತಡೆಯಲು ಅಥವಾ ಅದರ ಪರಿಣಾಮವನ್ನು ಮೊಟಕುಗೊಳಿಸಲು ಸಹಾಯ ಮಾಡುತ್ತದೆ. ಹೃದಯದ ರಕ್ಷಣೆಗೆ ಬೇಕಾದ ಎಚ್​ಡಿಎಲ್​ ಕೊಲೆಸ್ಟ್ರಾಲ್​ ಅನ್ನು ಕಾಪಾಡಿಕೊಳ್ಳುವಲ್ಲಿಯೂ ಬಾದಾಮಿ ಪ್ರಮುಖ ಪಾತ್ರ ವಹಿಸುತ್ತದೆ.

Health Tips: ದಿನಕ್ಕೆ ಎರಡು ಬಾರಿ ಬಾದಾಮಿ ಸೇವಿಸುವುದರಿಂದಾಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Jul 09, 2021 | 9:17 AM

ದಿನಕ್ಕೆ ಎರಡು ಬಾರಿ ಬಾದಾಮಿ ತಿನ್ನುವುದರಿಂದ ಚಯಾಪಚಯದ ಪ್ರಕ್ರಿಯೆಯನ್ನು ಸುಧಾರಿಸಬಹುದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಬಾದಾಮಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಬಹುದು. ಜತೆಗೆ ಇದು ಮಧುಮೇಹದ ಬೆಳವಣಿಗೆಯನ್ನು ತಡೆಯಲು ಅಥವಾ ಅದರ ಪರಿಣಾಮವನ್ನು ಮೊಟಕುಗೊಳಿಸಲು ಸಹಾಯ ಮಾಡುತ್ತದೆ. ಹೃದಯದ ರಕ್ಷಣೆಗೆ ಬೇಕಾದ ಎಚ್​ಡಿಎಲ್​ ಕೊಲೆಸ್ಟ್ರಾಲ್​ ಅನ್ನು ಕಾಪಾಡಿಕೊಳ್ಳುವಲ್ಲಿಯೂ ಬಾದಾಮಿ ಪ್ರಮುಖ ಪಾತ್ರ ವಹಿಸುತ್ತದೆ.

ಒಂದು ಕಪ್​ ಬಾದಾಮಿಯಲ್ಲಿ ಅಂದರೆ ಸುಮಾರು 20 ಬಾದಾಮಿ ಬೀಜಗಳಲ್ಲಿ ಶೇ.16 ರಷ್ಟು ಫೈಬರ್​ ಅಂಶ, ವಿಟಮಿನ್ ಇ, ಶೇ.20ರಷ್ಟು ಮೆಗ್ನೀಶಿಯಂ ಹಾಗೂ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಷಿಯಮ್​ ಅಂಶಗಳನ್ನು ಒಳಗೊಂಡಿರುತ್ತದೆ.

ಹದಿಹರೆಯದ ಮತ್ತು ವಯಸ್ಕರಲ್ಲಿ ಪೌಷ್ಟಿಕಾಂಶ ಭರಿತ ಆಹಾರ ಮತ್ತು ವ್ಯಾಯಾಮ ಸೇರಿದಂತೆ ಜೀವನಶೈಲಿಯಲ್ಲಿ ಆಗುವ ಹಲವು ಬದಲಾವಣೆಗಳನ್ನು ಸುಧಾರಿಸಲು ಬಾದಾಮಿ ಪ್ರಮುಖ ಪಾತ್ರ ವಹಿಸುತ್ತದೆ. ಮಧುಮೇಹ ತಡೆಯುವಲ್ಲಿಯೂ ಬಾದಾಮಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಮುಂಬೈನ ಸರ್ ವಿಠಲ್​ಡ​ಸ್ ಠಾಕರ್ಸಿ ಕಾಲೇಜಿನ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲರಾದ ಜಗ್ಮೀತ್ ಮದನ್ ಹೇಳಿದ್ದಾರೆ.

ಬಾದಾಮಿ ಎಲ್​ಡಿಎಲ್​-ಕೊಲೆಸ್ಟ್ರಾಲ್ ಮಟ್ಟವನ್ನು ಹೇಗೆ ಸುಧಾರಿಸಿದೆ ಮತ್ತು ಕೇವಲ 12 ವಾರಗಳ ಕಾಲ ಬಾದಮಿ ಸೇವನೆಯಿಂದ ಹೆಚ್​ಬಿಎ 1 ಸಿ ಮಟ್ಟವನ್ನು ಹೇಗೆ ಕಡಿಮೆಗೊಳಿಸಬಹುದು ಎಂಬುದನ್ನು ತೋರಿಸುವಲ್ಲಿ ನಡೆಸಿದ ಅಧ್ಯಯನದ ಫಲಿತಾಂಶವು ಹೆಚ್ಚು ಭರವಸೆಯನ್ನು ನೀಡಿದೆ ಎಂದು ಮದನ್ ಹೇಳಿದರು.

ಈ ಅಧ್ಯಯನದ ಪ್ರಯೋಗವನ್ನು, 59 ಪುರುಷರು ಮತ್ತು 216 ಮಹಿಳೆಯರ ಮೇಲೆ ಮಾಡಲಾಗಿದೆ. ಆ ಪ್ರಕಾರ ಇವರಲ್ಲಿ 3 ಗುಂಪುಗಳನ್ನಾಗಿ ಮಾಡಿದ್ದು, ಒಂದು ಗುಂಪಿಗೆ ಬೇಯಿಸದ ಬಾದಾಮಿಯನ್ನು ಮತ್ತು ಇನ್ನಿತರ ಗುಂಪಿಗೆ ಗೋಧಿ ಹಿಟ್ಟು, ಕಡಲೆ ಹಿಟ್ಟು, ಉಪ್ಪು ಮತ್ತು ಭಾರತೀಯ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸಿದ ಖಾರದ ತಿಂಡಿ ಸೇವಿಸಲು ಸೂಚಿಸಲಾಯಿತು. ಬಾದಾಮಿ ಮತ್ತು ಖಾರದ ತಿಂಡಿಗಳನ್ನು ಸೇವಿಸಿದವರ ಒಟ್ಟು ಕ್ಯಾಲೊರಿ ಶೇಕಡಾ 20 ರಷ್ಟಿದೆ. ಬಾದಾಮಿ ಸೇವಿಸಿದವರಲ್ಲಿ ಇನ್ನಿತರ ಗುಂಪಿಗೆ ಹೋಲಿಸಿದರೆ ಮಧುಮೇಹ ಲಕ್ಷಣಗಳು ಕಡಿಮೆಯಾಗಿದೆ.

ಇದನ್ನೂ ಓದಿ: Health Benefits: ಚೀನಿಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ತಿಳಿದರೆ, ಇದನ್ನು ದಿನನಿತ್ಯ ತಿನ್ನುವ ಅಭ್ಯಾಸ ಮಾಡಿಕೊಳ್ಳುತ್ತೀರಿ

ನೆಲ್ಲಿಕಾಯಿಯ ಆರೋಗ್ಯಕರ ಗುಣಗಳ ಜತೆಗೆ, ನೆಲ್ಲಿಕಾಯಿಂದ ತಯಾರಿಸುವ ಚಟ್ನಿ, ಉಪ್ಪಿನಕಾಯಿ ಮತ್ತು ಜ್ಯೂಸ್​ ವಿಧಾನ ತಿಳಿಯಿರಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ