Women Health: ಮುಟ್ಟೆಂದರೆ ಮುಜುಗರದ ಪ್ರಶ್ನೆಯೇ ಇಲ್ಲ! ಆರೋಗ್ಯದ ಸಮಸ್ಯೆಗಳನ್ನು ವೈದ್ಯರಲ್ಲಿ ಮನಬಿಚ್ಚಿ ಹೇಳಲು ಕಲಿಯಬೇಕಾಗಿದೆ ಯುವತಿಯರು
ಋತುಸ್ರಾವದ ಅಂದರೆ ಮುಜುಗರದ ಪ್ರಶ್ನೆಯೇ ಇಲ್ಲ. ಇದೊಂದು ಸಹಜ ಪ್ರಕ್ರಿಯೆ. ಮುಜುಗರಕ್ಕೊಳಗಾಗಿ ಸಂಕಟವನ್ನು ಹೇಳಿಕೊಳ್ಳದೆ ಅದೆಷ್ಟೋ ನೋವುಗಳನ್ನು ಅನುಭವಿಸುವ ಬದಲಾಗಿ ವೈದ್ಯರಲ್ಲಿ ಮನಬಿಚ್ಚಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವಂತೆ ಬದಲಾಗಬೇಕಿದೆ ಯುವತಿಯರ ಮನಸ್ಸು.
ಋತು ಚಕ್ರ ಸ್ತ್ರೀತನದ ಪ್ರತೀಕ. ಅದೆಷ್ಟೋ ಹೆಣ್ಣುಮಕ್ಕಳು ಈ ದಿನ ನೋವು, ಸಂಕಟಗಳನ್ನು ಅನುಭವಿಸುತ್ತಾರೆ. ಬೇರೆಯವರಲ್ಲಿ ಹೇಳಿಕೊಳ್ಳುವಂತೆಯೂ ಇಲ್ಲ.. ನೋವನ್ನು ಅನುಭವಿಸಲೂ ಸಾಧ್ಯವಿಲ್ಲದ ಪರಿಸ್ಥಿತಿ. ಹಳ್ಳಿಗಳಲ್ಲಿರುವ ಕಟ್ಟು ಪಾಡುಗಳನ್ನು ಮೆಟ್ಟಿನಿಂತು ಹೊರಬರುವ ಪರಿಸ್ಥಿತಿ ಕೆಲವು ಬಾರಿ ಎದುರಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಮಾತ್ರ. ತಿಂಗಳಲ್ಲಿ ಅನುಭವಿಸುವ ಋತುಸ್ರಾವದ 4 ದಿನಗಳ ಕಾಲ ಆಗುವ ಸಂಕಟವನ್ನು ಜನರೆದುರು ಹೇಳಿಕೊಳ್ಳಲು ಹೆಣ್ಣುಮಕ್ಕಳು ಮುಜುಗರ ಪಡುತ್ತಿದ್ದಾರೆ. ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ವೈದ್ಯರಲ್ಲಿ ಮನಬಿಚ್ಚಿ ತಮಗಾಗುವ ತೊಂದರೆಗಳನ್ನು ಹೇಳಿಕೊಳ್ಳಲೇಬೇಕಿದೆ ಯುವತಿಯರು..
ಋತುಸ್ರಾವ ಅಂದರೆ ಮುಜುಗರದ ಪ್ರಶ್ನೆಯೇ ಇಲ್ಲ. ಇದೊಂದು ಸಹಜ ಪ್ರಕ್ರಿಯೆ. ಮುಜುಗರಕ್ಕೊಳಗಾಗಿ ಸಂಕಟವನ್ನು ಹೇಳಿಕೊಳ್ಳದೆ ಅದೆಷ್ಟೋ ನೋವುಗಳನ್ನು ಅನುಭವಿಸುವ ಬದಲಾಗಿ ವೈದ್ಯರಲ್ಲಿ ಮನಬಿಚ್ಚಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವಂತೆ ಬದಲಾಗಬೇಕಿದೆ ಯುವತಿಯರ ಮನಸ್ಸು. ಋತುಸ್ರಾವದ ಅಥವಾ ಮುಟ್ಟಿನ ಸಮಯದಲ್ಲಿ ಆಗುವ ಅನಾರೋಗ್ಯ ತೊಂದರೆಗಳನ್ನು ವೈದ್ಯರಲ್ಲಿ ಮುಚ್ಚಿಡದೇ ಮನಬಿಚ್ಚಿ ಹೇಳಲು ಕಲಿಯಬೇಕಾಗಿದೆ.
ಯುವತಿಯರ ಆರೋಗ್ಯಕ್ಕೆ ಸಲಹೆಗಳು ತಾಳ್ಮೆ ತಿಂಗಳಿನಲ್ಲಿ 4 ದಿನ ಅದೆಷ್ಟೋ ಹೆಣ್ಣುಮಕ್ಕಳು ಸಂಕಟ, ನೋವುಗಳನ್ನು ಅನುಭವಿಸುತ್ತಾರೆ. ದೈಹಿಕ ಮತ್ತು ಮಾನಸಿಕ ಸ್ಥಿತಿಯ ಏರು-ಪೇರಾಗುತ್ತದೆ. ಈ ಸಂದರ್ಭದಲ್ಲಿ ಎಷ್ಟು ತಾಳ್ಮೆಯಿಂದ ಇರುತ್ತಿರೋ ಅಷ್ಟು ಒಳ್ಳೆಯದು. ದೇಹಕ್ಕೆ ಸುಸ್ತು, ಆಯಾಸವಾದಾಗ ಮಾನಸಿಕ ಒತ್ತಡ ಸಹಜ. ಕೆಲವು ಬಾರಿ ಮಾತಿನಲ್ಲಿ ಹಿಡಿತವಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಸುಮ್ಮನಿರುವುದು ಉತ್ತಮ. ಎಷ್ಟು ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿರೋ ಅಷ್ಟು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
ಸಿಟ್ಟು, ಸಿಡುಕು ಮಾಡದಿರಿ ಮುಟ್ಟಿನ ಸಮಯದಲ್ಲಿ ಮನಸ್ಸು ನಾವು ಹೇಳುವಂತೆಯೇ ಕೇಳುತ್ತಿರುವುದಿಲ್ಲ. ದೈಹಿಕ ತೊಂದರೆ ನಮ್ಮನ್ನು ಒತ್ತಡಕ್ಕೆ ಸಿಲುಕಿಸುತ್ತದೆ. ಅದೇನೋ ಒಂದು ರೀತಿಯ ಸಂಕಟ, ದುಗುಡ. ಆದರೆ ಪ್ರತಿಯೊಂದು ವಿಷಯಕ್ಕೂ ಸಿಟ್ಟು, ಸಿಡುಕು ತೋರುವುದು ನಿಮ್ಮ ಮನಸ್ಥಿತಿಗೆ ಪೆಟ್ಟು ನೀಡುತ್ತದೆ. ಕೆಲವು ಹೆಣ್ಣುಮಕ್ಕಳು ಅತಿಯಾದ ಚಿಂತೆ ಮತ್ತು ಒತ್ತಡದಿಂದ ಮನಸ್ಸಿಗೆ ಆಘಾತ ಉಂಟಾಗುವ ಪರಿಸ್ಥಿತಿಯನ್ನೂ ತಂದೊಡ್ಡಬಹುದು.
ವ್ಯಾಯಾಮ ಮಾಡಿ (ಮುಟ್ಟಿನ ದಿನಗಳನ್ನು ಹೊರತುಪಡಿಸಿ) ಮುಟ್ಟಿನ ದಿನಗಳಲ್ಲಿ ದೇಹಕ್ಕೆ ಸುಸ್ತು, ಒತ್ತಡವನ್ನು ನೀಡುವ ಯಾವುದೇ ಕೆಲಸಗಳನ್ನು ಮಾಡದಿರುವುದು ಒಳ್ಳೆಯದು. ಭಾರವಾದ ವಸ್ತುವನ್ನು ಎತ್ತುವುದು, ಅಥವಾ ದೇಹಕ್ಕೆ ಹೆಚ್ಚು ಆಯಾಸವಾಗುವ ಕೆಲಸಗಳು ನಿಮ್ಮ ಗರ್ಭಕೋಶಕ್ಕೆ ತೊಂದರೆಯನ್ನು ಉಂಟು ಮಾಡಬಹುದು. ಹಾಗಾಗಿ ಮುಟ್ಟಿನ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ವ್ಯಾಯಾಮ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದು ಮುಟ್ಟಿನ ದಿನಗಳಲ್ಲಾಗುವ ಸಂಕಟವನ್ನು ಕಡಿಮೆ ಮಾಡುತ್ತದೆ. ಮತ್ತು ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುವ ಸಮಸ್ಯೆಯನ್ನು ನಿವಾರಿಸುತ್ತದೆ.
ಮನಸ್ಸಿನ ನಿಯಂತ್ರಣ ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಅಥವಾ ಯುವತಿಯರಿಗೆ ಮನಸ್ಸಿನ ನಿಯಂತ್ರಣ ತುಂಬಾ ಅವಶ್ಯಕ. ಮನಸ್ಸು ನಾವು ಹೇಳುವಂತೆ ಕೇಳಬೇಕು ವಿನಃ ನಮ್ಮನ್ನು ಮನಸ್ಸು ಆಡಿವಂತಾಗಬಾರದು. ಆಗಲೇ ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಈ ಸಮಯದಲ್ಲಿ ಮನಸ್ಸು ಚಂಚಲವಾಗುವುದರಿಂದ ಯಾವುದೇ ಒಂದು ಮುಖ್ಯ ನಿರ್ಧಾರ ಕೈಗೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಮನಸ್ಸನ್ನು ಏಕಾಗ್ರತೆಯಲ್ಲಿಟ್ಟುಕೊಳ್ಳಿ. ಒಳ್ಳೆಯ ವಿಚಾರಗಳನ್ನೇ ಯೋಚಿಸಿ. ಜತೆಗೆ ಯಾವುದೇ ಕೆಟ್ಟ ಪದಗಳನ್ನು ಮತ್ತು ಸಿಟ್ಟಿನಿಂದ ವರ್ತಿಸುವುದನ್ನು ಆದಷ್ಟು ತಪ್ಪಿಸಿ.
ಉಡುಗೆ ನಿಮ್ಮ ಉಡುಗೆಯೂ ಸಹ ಅನಾರೋಗ್ಯಕ್ಕೆ ಕಾರಣವನ್ನುಂಟು ಮಾಡುತ್ತವೆ. ಈಗಿನ ಯುವತಿಯರೆಲ್ಲಾ ಟೈಟ್ ಡ್ರೆಸ್ಗಳಾದ ಜೀನ್ಸ್, ಲೆಗ್ಗಿನ್ಸ್ಗಳನ್ನು ಹೆಚ್ಚು ಇಷ್ಟಪಟ್ಟು ಧರಿಸುತ್ತಾರೆ. ಆದರೆ ದೇಹಕ್ಕೆ ಬಿಗಿಯಾಗಿ ಅಂಟಿಕೊಳ್ಳುವ ಉಡುಗೆ ನಮ್ಮ ದೇಹದ ಮನಸ್ಥಿತಿಯನ್ನು ಬದಲಾಯಿಸುತ್ತದೆ. ದೇಹದಲ್ಲಿ ಉಂಟಾಗುವ ಕೆಲವು ಬದಲಾವಣೆಗಳು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಆದಷ್ಟು ಸಡಿಲ ಉಡುಗೆಗಳನ್ನು ಧರಿಸುವುದು ಆರೋಗ್ಯ ದೃಷ್ಟಿಯಿಂದ ಒಳಿತು.