Jamun Side Effect: ನಿಮಗಿಷ್ಟದ ನೇರಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಎಷ್ಟೆಲ್ಲಾ ಹಾನಿ ಎಂಬುದು ತಿಳಿದಿದೆಯೇ?
ನೇರಳೆ ಹಣ್ಣು: ನೇರಳೆ ಹಣ್ಣಿನ ಅತಿಯಾದ ಸೇವನೆ ಆರೋಗ್ಯಕ್ಕೆ ಎಷ್ಟೆಲ್ಲಾ ಹಾನಿಯುಂಟು ಮಾಡಬಹುದು ಜತೆಗೆ ಯಾವ ಯಾವ ಸಮಸ್ಯೆಗೆ ಕಾರಣವಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.
ನೇರಳೆ ಹಣ್ಣು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಯ ಜತೆಗೆ ತಿಂದಾಕ್ಷಣ ನಾಲಿಗೆ ನೇರಳೆ ಬಣ್ಣಕ್ಕೆ ತಿರುಗುವುದನ್ನು ನೋಡುವುದೇ ಕುತೂಹಲ. ಚಿಕ್ಕ ವಯಸ್ಸಿನಲ್ಲೆಲ್ಲಾ ನೇರಳೆ ಹಣ್ಣು ತಿಂದು ಯಾರ ನಾಲಿಗೆ ಎಷ್ಟು ಬಣ್ಣ ಬದಲಾಯಿಸಿತು ಎಂಬುದೇ ಒಂದು ಆಟವಾಗಿತ್ತು. ಜತೆಗೆ ನೇರಳೆ ಹಣ್ಣಿನ ಆರೋಗ್ಯಕರ ದೃಷ್ಟಿಯಿಂದಲೂ ಸಹ ಒಳ್ಳೆಯದು ಎಂಬ ಭಾವನೆ ಎಲ್ಲರಲ್ಲೂ ಇದೆ. ಕೇವಲ ಹಣ್ಣು ಮಾತ್ರವಲ್ಲ! ನೇರಳೆ ಹಣ್ಣಿನ ಬೀಜವನ್ನು ಸಹ ಪುಡಿ ಮಾಡಿ ಆರೋಗ್ಯ ಸುಧಾರಿಸಿಕೊಳ್ಳಲು ಉಪಯೋಗಿಸುತ್ತಾರೆ.
ಆದರೆ ಯಾವುದೇ ಆಹಾರವನ್ನು ಅತಿಯಾಗಿ ಬಳಸಿದರೆ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ. ಹಾಗಿರುವಾಗ ನೇರಳೆ ಹಣ್ಣಿನ ಅತಿಯಾದ ಸೇವನೆ ಆರೋಗ್ಯಕ್ಕೆ ಎಷ್ಟೆಲ್ಲಾ ಹಾನಿಯುಂಟು ಮಾಡಬಹುದು ಜತೆಗೆ ಯಾವ ಯಾವ ಸಮಸ್ಯೆಗೆ ಕಾರಣವಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.
ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಅಧಿಕ ರಕ್ತದೊತ್ತಡ ಸಮಸ್ಯೆಗೆ ಮುಖ್ಯವಾಗಿ ನೇರಳೆ ಹಣ್ಣಿನ ಅತಿಯಾದ ಸೇವನೆ ಕಾರಣವಾಗಬಹುದು. ಆಯುರ್ವೇದದ ಪ್ರಕಾರ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೇರಳೆ ಹಣ್ಣನ್ನು ಸೇವಿಸುತ್ತಾರೆ. ಆದರೆ ಹೆಚ್ಚಿನ ಜನರು ಅತಿಯಾಗಿ ಹಣ್ಣನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
ಮಲಬದ್ಧತೆ ಸಮಸ್ಯೆ ನೇರಳೆ ಹಣ್ಣು ವಿಟಮಿನ್ ಸಿ ಅಂಶದಿಂದ ಸಮೃದ್ಧವಾಗಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿ ಉತ್ತಮವಾದ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಆದರೆ ಇದನ್ನು ಹೆಚ್ಚಾಗಿ ಸೇವಿಸುವುದು ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಜತೆಗೆ ಮಲಬ್ಧತೆ ಸಮಸ್ಯೆಗೆ ಕಾರಣವಾಗುತ್ತದೆ.
ಮೊಡವೆ ಎಣ್ಣೆಯುಕ್ತ ಚರ್ಮ ನಿಮ್ಮದಾಗಿದ್ದರೆ ಅಥವಾ ಮೊಡವೆಯನ್ನು ಹೊಂದಿದ್ದರೆ ನೇರಳೆ ಹಣ್ಣಿನ ಸೇವನೆಯನ್ನು ಆದಷ್ಟು ತಪ್ಪಿಸಿ. ಹಣ್ಣನ್ನು ಸೇವಿಸುವುದು ಮೊಡವೆಗಳ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ನೇರಳೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ.
ವಾಂತಿ ಸಮಸ್ಯೆ ಸಾಮಾನ್ಯವಾಗಿ 2 ರಿಂದ 3 ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು. ಹಸಿದ ಹೊಟ್ಟೆಯಲ್ಲಿ ನೇರಳೆ ಹಣ್ಣುಗಳನ್ನು ತಿಂದರೆ ಅದು ವಾಂತಿ ಸಮಸ್ಯೆಗೆ ಕಾರಣವಾಗುತ್ತದೆ. ಜೀರ್ಣವಾಗದ ಆಹಾರವು ವಾಂತಿ ಮತ್ತು ಮಲಬದ್ಧತೆ ಸಮಸ್ಯೆಯನ್ನು ಉಂಟು ಮಾಡುತ್ತದೆ.
ರಕ್ತ ಹೆಪ್ಪುಗಟ್ಟುವಿಕೆ ಅತಿಯಾದ ನೇರಳೆ ಹಣ್ಣಿನ ಸೇವನೆ ರಕ್ತದೊತ್ತಡ, ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗೆ ಕಾರಣವಾಗುತ್ತದೆ. ನೀವು ಈಗಾಗಲೇ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಆದಷ್ಟು ನೇರಳೆ ಹಣ್ಣಿನ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು. ಇನ್ನಷ್ಟು ಹೆಚ್ಚಿನ ಸಮಸ್ಯೆಗೆ ದಾರಿ ಮಾಡಿಕೊಡಬಹುದು. ಹಾಗಿರುವಾಗ ನಿಮ್ಮ ಆಹಾರ ಸೇವನೆಯ ಬಗೆಗೆ ನಿಮಗೆ ಹೆಚ್ಚು ಗಮನವಿರಲಿ. ರುಚಿಯಾಗಿದೆ ಎಂಬ ಮಾತ್ರಕ್ಕೆ ಆಹಾರವನ್ನು ಅತಿಯಾಗಿ ಸೇವಿಸುವುದು ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು.
ಇದನ್ನೂ ಓದಿ:
Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
’Jamun Health Benefits: ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ನೇರಳೆ ಹಣ್ಣನ್ನು ಸೇವಿಸಿ