ನೆಲ್ಲಿಕಾಯಿಯ ಆರೋಗ್ಯಕರ ಗುಣಗಳ ಜತೆಗೆ, ನೆಲ್ಲಿಕಾಯಿಂದ ತಯಾರಿಸುವ ಚಟ್ನಿ, ಉಪ್ಪಿನಕಾಯಿ ಮತ್ತು ಜ್ಯೂಸ್​ ವಿಧಾನ ತಿಳಿಯಿರಿ

ನೆಲ್ಲಿಕಾಯಿಯ ಆರೋಗ್ಯಕರ ಗುಣಗಳ ಜತೆಗೆ, ನೆಲ್ಲಿಕಾಯಿಂದ ತಯಾರಿಸುವ ಚಟ್ನಿ, ಉಪ್ಪಿನಕಾಯಿ ಮತ್ತು ಜ್ಯೂಸ್​ ವಿಧಾನ ತಿಳಿಯಿರಿ
ನೆಲ್ಲಿಕಾಯಿ

ವಯಸ್ಸಾದ ಮೇಲೆ ನಾನಾ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ, ಇವುಗಳಿಂದ ದೂರ ಇರಲು ಪ್ರತಿದಿನ ನೆಲ್ಲಿಕಾಯಿಯನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ನೆಲ್ಲಿಕಾಯಿಯನ್ನು ಹಾಗೆ ತಿನ್ನಲು ಹಿಂಜರಿಯುವವರು ಜ್ಯೂಸ್​, ಚಟ್ನಿ ಮತ್ತು ಇನ್ನಿತರ ರೂಪದಲ್ಲಿ ಕೂಡ ಸೇವಿಸಬಹುದಾಗಿದೆ.

TV9kannada Web Team

| Edited By: Ayesha Banu

Jul 08, 2021 | 7:34 AM

ನೆಲ್ಲಿಕಾಯಿ ದೇಹಕ್ಕೆ ತುಂಬಾ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಕ್ಯಾರೋಟಿನ್ ಮತ್ತು ವಿಟಮಿನ್ ಬಿ ಸಮೃದ್ಧವಾಗಿದೆ. ಇದಲ್ಲದೆ ನೆಲ್ಲಿಕಾಯಿಯಲ್ಲಿ ಆರೋಗ್ಯಕರ ಉತ್ಕರ್ಷಣ ನಿರೋಧಕ ಗುಣಗಳು ಅಧಿಕವಾಗಿದೆ. ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ನೆಲ್ಲಿಕಾಯಿಯನ್ನು ಸೇರಿಸುವುದರಿಂದ ನಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿರಿಸುವುದಲ್ಲದೆ ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕಬಹುದು. ವಯಸ್ಸಾದ ಮೇಲೆ ನಾನಾ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ, ಇವುಗಳಿಂದ ದೂರ ಇರಲು ಪ್ರತಿದಿನ ನೆಲ್ಲಿಕಾಯಿಯನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ನೆಲ್ಲಿಕಾಯಿಯನ್ನು ಹಾಗೆ ತಿನ್ನಲು ಹಿಂಜರಿಯುವವರು ಜ್ಯೂಸ್​, ಚಟ್ನಿ ಮತ್ತು ಇನ್ನಿತರ ರೂಪದಲ್ಲಿ ಕೂಡ ಸೇವಿಸಬಹುದಾಗಿದೆ.

ನೆಲ್ಲಿಕಾಯಿ ಜ್ಯೂಸ್ ನೆಲ್ಲಿಕಾಯಿಯನ್ನು ಪ್ರತಿದಿನವೂ ನೇರವಾಗಿ ತೆಗೆದುಕೊಳ್ಳುವುದು ಕಷ್ಟ. ಹೀಗಾಗಿ ನೆಲ್ಲಿಕಾಯಿಯ ರಸ ತೆಗೆದು ಜ್ಯೂಸ್​ ರೂಪದಲ್ಲಿ ತೆಗೆದುಕೊಳ್ಳಬಹುದು. ನೆಲ್ಲಿಕಾಯಿ ಹುಳಿ ಇರುವ ಕಾರಣಕ್ಕೆ ಕೆಲವರು ನೇರವಾಗಿ ಇದನ್ನು ಕುಡಿಯಲು ಇಷ್ಟಪಡುವುದಿಲ್ಲ. ಅಂತವರು ಕ್ಯಾರೆಟ್, ಶುಂಠಿ, ಬೀಟ್​ರೂಟ್​ ಮತ್ತು ಪುದೀವನ್ನು ಸೇರಿಸಿ ಕುಡಿಯಬಹುದು.

ನೆಲ್ಲಿಕಾಯಿ ಉಪ್ಪಿನಕಾಯಿ ಹೆಚ್ಚಿನ ಜನರು ಉಪ್ಪಿನಕಾಯಿ ತಿನ್ನಲು ಬಯಸುತ್ತಾರೆ. ಪ್ರತಿದಿನವೂ ತಮ್ಮ ಆಹಾರದಲ್ಲಿ ಉಪ್ಪಿನಕಾಯಿ ಸೇವಿಸುವವರು ನೆಲ್ಲಿಕಾಯಿ ಉಪ್ಪಿನಕಾಯಿಯನ್ನು ಬಳಸಿ. ನೆಲ್ಲಿಕಾಯಿ ಬೀಜವನ್ನು ತೆಗೆದು ಉಪ್ಪಿನಲ್ಲಿ ನೆನಸಿ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ, ಮೆಣಸಿನಕಾಯಿ, ಅರಿಶಿಣ ಮತ್ತು ಉಪ್ಪು ಸೇರಿಸಿ ಹುರಿದು. ಬಳಿಕ ರುಬ್ಬಿಕೊಳ್ಳಿ. ನಂತರ ಅದನ್ನು ತುಂಡು ಮಾಡಿದ ನೆಲ್ಲಿಕಾಯಿ ಜತೆ ಸೇರಿಸಿ. ಬಳಿಕ ಸಾಸಿವೆ ಒಗ್ಗರಣೆ ಕೊಡಿ. ಇದನ್ನು ಒಂದು ಭರಣಿಯಲ್ಲಿ ಹಾಕಿ ದಿನ ಊಟ ಮಾಡುವಾಗ ಸೇವಿಸಬಹುದು.

ನೆಲ್ಲಿಕಾಯಿ ಚಟ್ನಿ ನೆಲ್ಲಿಕಾಯಿ ಚಟ್ನಿಯನ್ನು ಬೆಳಿಗ್ಗೆ ಬ್ರೆಡ್‌ನೊಂದಿಗೆ ಸೇವಿಸುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ರುಚಿಗೆ ಬೇಕಾದಷ್ಟು ನೆಲ್ಲಿಕಾಯಿ ಪುದೀನ, ಕೊತ್ತಂಬರಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಬೆಳಿಗ್ಗೆ ಉಪಹಾರದ ಸಮಯದಲ್ಲಿ ಇದನ್ನು ತೆಗೆದುಕೊಳ್ಳುವುದು ಒಳ್ಳೆಯ ಅಭ್ಯಾಸ.;

ಇದನ್ನೂ ಓದಿ: Health Benefits: ಚೀನಿಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ತಿಳಿದರೆ, ಇದನ್ನು ದಿನನಿತ್ಯ ತಿನ್ನುವ ಅಭ್ಯಾಸ ಮಾಡಿಕೊಳ್ಳುತ್ತೀರಿ

Health Tips: ಹಾಲು ಕುಡಿಯುವ ಅಭ್ಯಾಸ ಒಳ್ಳೆಯದು, ಆದರೆ ಹಾಲಿನೊಂದಿಗೆ ಈ ಐದು ಪದಾರ್ಥಗಳನ್ನು ಸೇವಿಸುವುದು ಅಪಾಯಕಾರಿ

Follow us on

Related Stories

Most Read Stories

Click on your DTH Provider to Add TV9 Kannada