Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಮನಸ್ಸು ನಮ್ಮನ್ನಾಡಿಸುವಂತೆ ಆಗಬಾರದು! ಯುವತಿಯರ ಮಾನಸಿಕ ಆರೋಗ್ಯಕ್ಕೆ ತಜ್ಞರ ಸಲಹೆ

ಈಗಿನ ಯುವತಿಯರು ಮನಸ್ಸಿನ ಹಿಡಿತವಿಲ್ಲದೇ ಚೂರು ನೋವಾದರೂ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಜೀವನವನ್ನು ಹೇಗೆ ನಿಭಾಯಿಸಬೇಕು ಎಂಬ ಶಕ್ತಿ ಅವರಿಗಿಲ್ಲ. ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಮಾನಸಿಕ ಸ್ಥಿತಿ ಮತ್ತು ಮನಸ್ಸಿನ ನಿಯಂತ್ರಣದ ಕೊರತೆ ಎಂದು ತಜ್ಙರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Women Health: ಮನಸ್ಸು ನಮ್ಮನ್ನಾಡಿಸುವಂತೆ ಆಗಬಾರದು! ಯುವತಿಯರ ಮಾನಸಿಕ ಆರೋಗ್ಯಕ್ಕೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us
shruti hegde
| Updated By: ganapathi bhat

Updated on: Jul 07, 2021 | 8:31 PM

ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಪ್ರತಿಯೊಬ್ಬರೂ ಕೂಡಾ ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿದರೆ ಮಾತ್ರ ತಮ್ಮ ಯಶಸ್ಸಿನತ್ತ ಗಮನ ಹರಿಸಲು ಸಾಧ್ಯ. ದಿನಕಳೆಯುತ್ತಿದ್ದಂತೆಯೇ ಜನರ ಜೀವನ ಶೈಲಿ ಕೂಡಾ ಬದಲಾಗುತ್ತಿದೆ. ಹಾಗಿರುವಾಗ ಮಾನವರು ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ತಮ್ಮ ಮಾನಸಿಕ ಸ್ಥಿತಿಯನ್ನು ಹೊಂದಿಸಿಕೊಳ್ಳುವುದು ಮುಖ್ಯ. ಅದರಲ್ಲಿಯೂ ಮಹಿಳೆಯರು ಅಥವಾ ಯುವತಿಯರು ಮುಖ್ಯವಾಗಿ ಈ ಕುರಿತು ಯೋಚಿಸಲೇ ಬೇಕು. ಮನಸ್ಸಿನ ನಿಯಂತ್ರಣ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ನಾವು ಹೇಳಿದಂತೆ ಮನಸ್ಸು ಕೇಳುವಂತೆ ಇರಬೇಕು ಹೊರತಾಗಿ ಮನಸ್ಸು ನಮ್ಮನ್ನಾಡಿಸುವಂತೆ ಆಗಬಾರದು ಎಂದು ನ್ಯೂಟ್ರೀಷಿಯನಿಸ್ಟ್​​ ತಜ್ಞರಾದ ವೀಣಾ ಭಟ್​ ಟಿವಿ9 ಡಿಜಿಟಲ್ ಜತೆ ಮಾತು ಪ್ರಾರಂಭಿಸಿದರು. 

ಈಗಿನ ಯುವತಿಯರು ಹೆಚ್ಚಾಗಿ ಮಾನಸಿಕ ತೊಂದರೆಯ ಕಾರಣದಿಂದ ನಮ್ಮಲ್ಲಿ ಬರುತ್ತಾರೆ. ಮನಸ್ಸಿನ ನಿಯಂತ್ರಣ ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡುತ್ತಾರೆ. ಈ ಎಲ್ಲಾ ಸಮಸ್ಯೆಗೆ ಪರಿಹಾರ ವ್ಯಾಯಾಮ ಮತ್ತು ಏಕಾಗ್ರತೆ. ಹೀಗಿರುವಾಗಲೂ ಸಹ ಏಕಾಗ್ರತೆಯಿಂದ ಇರಲೇ ಸಾಧ್ಯವಾಗುತ್ತಿಲ್ಲ.. ಎಂದೂ ಕೆಲವರ ಚಿಂತೆ! ಭಯ ಪಡಬೇಕಾದದ್ದಿಲ್ಲ.. ಚಿಂತಿಸಬೇಕಾದದ್ದೂ ಇಲ್ಲ, ನೀವು ಧ್ಯಾನಕ್ಕೆ ಕುಳಿತಾಗ ನಿಮ್ಮ ಉಸಿರಾಟ ಪ್ರಕ್ರಿಯೆಯನ್ನೇ ಗಮನಿಸಿ, ಉಸಿರಾಟದ ಹಾದಿ ಹೇಗಿದೆ ಎಂಬುದು ನಿಮ್ಮ ಗಮನದಲ್ಲಿರಲಿ, ದೇಹದ  ಎಲ್ಲಾ ಅಂಗಗಳನ್ನು ಸಡಿಲವಾಗಿ ಬಿಡಿ, ಜತೆಗೆ ಉಸಿರಾಟ ಪ್ರಕ್ರಿಯನ್ನು ಆನಂದಿಸಿ. ಆಗಲೇ ನಿಮ್ಮ ಮನಸ್ಸು  ಏಕಾಗ್ರತೆ ಹೊಂದುವುದು ಎಂದು ಸಲಹೆ ನೀಡಿದ್ದಾರೆ.

ಮಾನಸಿಕ ಸ್ಥಿತಿ ಪ್ರತಿಯೊಬ್ಬ ಹೆಣ್ಣು ಮಗಳು ತನ್ನ ಬಗ್ಗೆ ತಾನು ಅರಿಯಬೇಕು. ಅವಳ ಅಂತರಾತ್ಮ ಶುದ್ಧವಾಗಿರಬೇಕು. ಪ್ರತಿ ಹೆಜ್ಜೆ ಇಡುವಾಗಲೂ ಯೋಚಿಸಬೇಕು. ಆದರೆ ಈಗಿ ಯುವತಿಯರು ತಂತ್ರಜ್ಞಾನಕ್ಕೆ ಅತಿರೇಕವಾಗಿ ಹೊಂದಿಕೊಂಡಿದ್ದಾರೆ. ಮೊಬೈಲ್​ ಅತಿಯಾದ​ ಬಳಕೆಯಿಂದ ತಮಗೆಲ್ಲಾ ತಿಳಿದಿದೆ ಎಂಬ ಭಾವನೆ. ಪ್ರತಿಯೊಂದಕ್ಕೂ ಸಿಟ್ಟು, ಸಿಡುಕು. ತಾಳ್ಮೆಯ ಕೊರತೆಯಿಂದ  ಯೋಚಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ.

ಆಧ್ಯಾತ್ಮಿಕ ನೆಲೆ ಆಧ್ಯಾತ್ಮಿಕ ನೆಲೆ ಅಂದರೆ ಯಾವುದೇ ಭಾಷೆ, ಜನಾಂಗ, ಧರ್ಮಕ್ಕೆ ಸಂಬಂಧಿಸಿದ್ದು ಅಂಥಲ್ಲ! ಪ್ರತಿಯೊಬ್ಬ ಹೆಣ್ಣುಮಗಳಿಗೆ ತಾನು ಹುಟ್ಟಿದ ಮನೆ, ಪರಂಪರೆ ಮತ್ತು ನಡೆದು ಬಂದ ಹಾದಿಯ ಕುರಿತಾದ ತಿಳುವಳಿಕೆ ಬೇಕು. ಅಜ್ಜ-ಮುತ್ತಜ್ಜರ ಕಾಲದಿಂದ ಹಿಡಿದು ಅಪ್ಪ-ಅಮ್ಮನ ಪೀಳಿಗೆಯವರೆಗೆ ನಮ್ಮ ಕುಟುಂಬ ಹೇಗೆ ನಡೆದು ಬಂದಿದೆ ಎಂಬ ಜ್ಞಾನವನ್ನು ಹೊಂದಿರಲೇ ಬೇಕು. ಆಗ ಮಾತ್ರ ಅವರಲ್ಲಿ ತಿಳಿವಳಿಕೆ ಎಂಬ ಶಕ್ತಿ ಮನೆಮಾಡುತ್ತದೆ. ಹಾಗಿದ್ದಾಗ ಆಕೆ ಸಮಸ್ಯೆಯ ಕುರಿತಾಗಿ ಯೋಚಿಸುತ್ತಾಳೆ. ಇದು ಅವಳ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಪ್ರತಿ ಹೆಜ್ಜೆ ಇಡುವಾಗಲೂ ಒಮ್ಮೆ ಯೋಚಿಸುವ ಪರಿಕಲ್ಪನೆ ಅವರಲ್ಲಿ ಮೂಡುತ್ತದೆ. ಈ ಕುರಿತಂತೆ ಪೋಷಕರೂ ಸಹ ಗಮನವಹಿಸಬೇಕಾಗಿದೆ ಎಂದು ತಜ್ಞರು ಹೇಳುತ್ತಾರೆ.

ಪೋಷಕರಿಗಾಗಿ ಕಿವಿಮಾತು ಪೋಷಕರು ಅರಿಯಬೇಕಾದ ಒಂದು ಮುಖ್ಯ ವಿಷಯ ಎಂದರೆ ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಮಕ್ಕಳಿಗೆ ತಮ್ಮ ಪರಂಪರೆಯ ಬಗ್ಗೆ ತಿಳಿ ಹೇಳುವುದು. ಕಷ್ಟದ ಅರಿವು ಮೂಡಿಸುವುದು. ಜತೆಗೆ ಬದುಕು ಮತ್ತು ಜೀವನದ ಮೌಲ್ಯಗಳ ಬಗೆಯ ಜ್ಞಾನವನ್ನು ತುಂಬುವುದು. ಇದು ಸಣ್ಣ ವಯಸ್ಸಿನಿಂದಲೇ ಮಾನಸಿಕ ಸ್ಥಿತಿಯ ನಿಯಂತ್ರಣದ ಜತೆ ಸ್ಥಿರವಾದ ಯೋಚನೆಗೆ ದಾರಿ ಮಾಡಿಕೊಡುತ್ತವೆ.

ಈಗಿನ ಯುವತಿಯರು ಮನಸ್ಸಿನ ಹಿಡಿತವಿಲ್ಲದೇ ಚೂರು ನೋವಾದರೂ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಜೀವನವನ್ನು ಹೇಗೆ ನಿಭಾಯಿಸಬೇಕು ಎಂಬ ಶಕ್ತಿ ಅವರಿಗಿಲ್ಲ. ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಮಾನಸಿಕ ಸ್ಥಿತಿ ಮತ್ತು ಮನಸ್ಸಿನ ನಿಯಂತ್ರಣದ ಕೊರತೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Health Tips: ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು

Women Health: ‘ಬದುಕಲು ಕಲಿಯಿರಿ’- 25 ವರ್ಷದೊಳಗಿನ ಯುವತಿಯರ ಮಾನಸಿಕ ಸ್ಥಿತಿ ಮತ್ತು ಸಮಸ್ಯೆಯ ಬಗ್ಗೆ ತಜ್ಞರ ಮಾತು

ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್