Women Health: ‘ಬದುಕಲು ಕಲಿಯಿರಿ’- 25 ವರ್ಷದೊಳಗಿನ ಯುವತಿಯರ ಮಾನಸಿಕ ಸ್ಥಿತಿ ಮತ್ತು ಸಮಸ್ಯೆಯ ಬಗ್ಗೆ ತಜ್ಞರ ಮಾತು

ಮಹಿಳೆಯರ ಆರೋಗ್ಯ: ಸಮಸ್ಯೆ ಎಂಬುದು ಸರ್ವೇಸಾಮಾನ್ಯ. ಅದನ್ನು ನಿಭಾಯಿಸುವತ್ತ ದಾರಿ ಹುಡುಕಬೇಕೇ ವಿನಃ ಚಿಂತೆಗೀಡಾದರೆ ಯಾರಿಗೆ ತೊಂದರೆ ಹೇಳಿ? ಅವರಿಗೆ ತಾನೆ! ಮಾನಸಿಕವಾಗಿ ಸದೃಢರಾದರೆ ಮಾತ್ರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

Women Health: 'ಬದುಕಲು ಕಲಿಯಿರಿ'- 25 ವರ್ಷದೊಳಗಿನ ಯುವತಿಯರ ಮಾನಸಿಕ ಸ್ಥಿತಿ ಮತ್ತು ಸಮಸ್ಯೆಯ ಬಗ್ಗೆ ತಜ್ಞರ ಮಾತು
ಸಾಂದರ್ಭಿಕ ಚಿತ್ರ
shruti hegde

| Edited By: ganapathi bhat

Jul 06, 2021 | 8:47 PM

ಆರೋಗ್ಯ ಪ್ರತಿಯೊಬ್ಬರ ಜೀವನದಲ್ಲೂ ಅತ್ಯವಶ್ಯಕ.‌ ಆರೋಗ್ಯವಾಗಿದ್ದರೆ ಮಾತ್ರ ಅಂದುಕೊಂಡ ಸಾಧನೆಯತ್ತ ತಲುಪಲು ಸಾಧ್ಯ.‌ ಆಹಾರ ಮತ್ತು ಜೀವನ ಶೈಲಿಯ ಕೆಲವು ಬದಲಾವಣೆಗಳು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬ ಮಾನವರೂ ಕೂಡಾ ಮನಸ್ಸಿನಲ್ಲಿ ಹುಟ್ಟಿಕೊಳ್ಳುವ ಯೋಚನೆ-ಅಲೋಚನೆಗೆ ತಕ್ಕಂತೆ ವರ್ತಿಸುತ್ತಾನೆ. ಅದರಲ್ಲಿಯೂ ಮುಖ್ಯವಾಗಿ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಬದಲಾವಣೆಗಳು ಮಾನವನ ಮೇಲೆ ಪರಿಣಾಮ ಬೀರಬಲ್ಲದು. ಹಾಗಿರುವಾಗ ಅವುಗಳನ್ನೆಲ್ಲಾ ಮೆಟ್ಟಿ ನಿಂತು ಸದೃಢವಾದ ಆರೋಗ್ಯದೊಂದಿಗೆ ಮುನ್ನುಗ್ಗುವ ಬಗ್ಗೆ ಯೋಚಿಸಲೇಬೇಕಿದೆ.

ದೈಹಿಕ ಆರೋಗ್ಯ ಮತ್ತು ಮಾನಸಿಕ ಸ್ಥಿತಿ ನಡುವೆ ಒಂದಕ್ಕೊಂದು ಸಂಬಂಧವಿದೆ. ಮಾನಸಿಕ ಆರೋಗ್ಯದ್ದಲ್ಲಿನ ಏರು-ಪೇರು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು.‌ ಅದೇ ರೀತಿ ಮಾನಸಿಕ ಸದೃಢತೆ ಅದೆಷ್ಟೋ ದೈಹಿಕ ಆರೋಗ್ಯವನ್ನು ಸುಧಾರಿಸಬಲ್ಲದು. ಅದರಲ್ಲಿಯೂ ಮುಖ್ಯವಾಗಿ ಸರಿಸುಮಾರು 25 ವರ್ಷದ ಒಳಗಿನ ಯುವತಿಯರು ಹೆಚ್ಚು ಮಾನಸಿಕ ದುರ್ಬಲತೆಗೆ ಒಳಗಾಗುತ್ತಿದ್ದಾರೆ.

ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಹೊಂದಿಕೊಳ್ಳುವುದು ಹೇಗೆ? ಮತ್ತು ಜೀವನದ ಸುಖ, ಸಂತೋಷ ಮತ್ತು ಮುಖ್ಯವಾಗಿ ತಾಳ್ಮೆಯನ್ನು ಕಂಡುಕೊಳ್ಳುವ ಪರಿಯೇ ಇನ್ನೂ ಅರ್ಥವಾಗುತ್ತಿಲ್ಲ ಅವರಿಗೆ.. ಶೇ. 80ರಷ್ಟು ಯುವತಿಯರು ಅತಿಯಾದ ಸಿಟ್ಟು, ಮುಂಗೋಪ, ಆರೋಗ್ಯ ತೊಂದರೆಯ ಜತೆಗೆ ಮಾನಸಿಕ ಸ್ಥಿತಿಯ ಕುರಿತಾಗಿ ತೊಂದರೆಗೊಳಗಾಗಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಯ ನಿಯಂತ್ರಣಕ್ಕಾಗಿಯೇ ನನ್ನ ಬಳಿ ಅರಸಿ ಬಂದವರು ಹೆಚ್ಚು ಎಂದು ತಜ್ಞರು, ನ್ಯೂಟ್ರೀಷಿಯನ್ ಆದ ವೀಣಾ.‌ಭಟ್ ಶಿರಸಿ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಸಂವಾದ ಪ್ರಾರಂಭಿಸಿದರು.

ಮೊದಲು ಬದುಕಲು ಕಲಿಯಿರಿ! ಸಮಸ್ಯೆ ಎಂಬುದು ಸರ್ವೇಸಾಮಾನ್ಯ. ಅದನ್ನು ನಿಭಾಯಿಸುವತ್ತ ದಾರಿ ಹುಡುಕಬೇಕೇ ವಿನಃ ಚಿಂತೆಗೀಡಾದರೆ ಯಾರಿಗೆ ತೊಂದರೆ ಹೇಳಿ? ಅವರಿಗೆ ತಾನೆ! ಮಾನಸಿಕವಾಗಿ ಸದೃಢರಾದರೆ ಮಾತ್ರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮಾನಸಿಕ ಪರಿಸ್ಥಿತಿ ಹದಗೆಡುವುದರಿಂದ ದೈಹಿಕ ಖಾಯಿಲೆಗಳಾದ ಥೈರಾಯಿಡ್, ಶುಗರ್, ಬಿಪಿ ಈ ರೀತಿಯ ಸಮಸ್ಯೆಗಳು ಕಾಡುತ್ತವೆ. ಚಿಕ್ಕ ವಯಸ್ಸಿನ ಮಕ್ಕಳೂ ಸಹ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವುದು ದುಗುಡವೇ ಸರಿ! ಹಾಗಿರುವಾಗ ಜೀವನದಲ್ಲಿ ಬದಲಾಗುತ್ತಿರುವ ಬದಲಾವಣೆಗಳನ್ನು ಅರಿತು ಮುನ್ನಡೆಯಬೇಕಿದೆ. ಈಗಿನ ಯುವತಿಯರಂತೂ ಮಾನಸಿಕ ಸ್ಥಿತಿ ಕುರಿತಾಗಿ ಹೆಚ್ಚು ಅನಾರೋಗ್ಯಕ್ಕೆ ಒಳಗಾಗಿತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

20 ವರ್ಷದ ಒಳಗಿನ ಯುವತಿಯರ ಜೀವನ ಶೈಲಿ ಬದಲಾವಣೆ ಈಗಿನ ದಿನಮಾನದ ಯುವತಿಯರೆಲ್ಲ ಮೊಬೈಲ್, ಕಂಪ್ಯೂಟರ್​ನಲ್ಲಿಯೇ ಮುಳುಗಿದ್ದಾರೆ. ಹುಡುಕುವ ವಿಷಯಗಳು ಹೆಚ್ಚು. ತಂತ್ರಜ್ಞಾನದ ಅಭಿವೃದ್ಧಿಯ ಜತೆಗೆ ತಮಗೆ ಬೇಕಾದದ್ದು.. ಬೇಡವಾದದ್ದು.. ಎಲ್ಲವನ್ನೂ ಹುಡುಕಿ ತಿಳಿಯುವ ಹಂಬಲ ಹೆಚ್ಚಾಗುತ್ತಿದೆ. ಯುವತಿಯರ ವಯಸ್ಸಿಗೆ ತಕ್ಕಂತೆ ಹಾಗೂ ಅವರು ಯೋಚಿಸುವ ಕೆಲವು ವಿಷಯಗಳಿಗೆ ತಕ್ಕಂತೆ ಅವರು ಹೆಚ್ಚು ಹುಡುಕಲು ಪ್ರಾರಂಭಿಸುತ್ತಾರೆ. ಇದು ಯುವತಿಯರ ಮಾನಸಿಕ ಸ್ಥಿತಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಒತ್ತಡ ಈಗಿನ ಯುವತಿಯರಿಗೆ ಸಿಟ್ಟು-ಮುನಿಸು ಹೆಚ್ಚು. ಯುವತಿಯರ ವಯಸ್ಸಿನ ಮೇರೆಗೆ ಸಹಜವಾಗಿಯೇ ಕೆಲವು ಬದಲಾವಣೆಗಳು ಸಹಜ.‌ ಇದರಿಂದ ತಾಳ್ಮೆ ಕಳೆದುಕೊಂಡರೆ ಅವರ ಜೀವನ ಶೈಲಿಯ ಮೇಲೆ ಇದು ಪರಿಣಾಮ ಬೀರುತ್ತದೆ. ಜತೆಗೆ ಋತುಚಕ್ರದ ಸಮಸ್ಯೆಯೂ ಸಹ ಆರೋಗ್ಯದಲ್ಲಿ ಏರು ಪೇರು ಉಂಟಾಗುತ್ತದೆ. ಈಗಿನ ಯುವತಿಯರು ಒಳಾಂಗಣ ಆಟದಲ್ಲೇ ಹೆಚ್ಚು ಇರುತ್ತಾರೆ.‌ ಮೊಬೈಲ್ ಬಿಟ್ಟರೆ ಪಂಪ್ಯೂಟರ್ ಇಲ್ಲದಿದ್ದರೆ ಟಿವಿ.‌ ಇಷ್ಟೇ ಅವರ ಪ್ರಪಂಚವಾಗಿಬಿಟ್ಟಿದೆ. ಹೊರಾಂಗಣ ಕ್ರೀಡೆ ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಅವರನ್ನು ಸದೃಢಗೊಳಿಸುತ್ತದೆ.

ತಾಳ್ಮೆ ಕೊರತೆ ಆರೋಗ್ಯದ ಏರು ಪೇರಾಗಲೀ ಅಥವಾ ಮಾನಸಿಕ ಸ್ಥಿತಿಗತಿಯ ಆಧಾರದಲ್ಲಿ ತಾಳ್ಮೆ ಕೊರತೆ ಹೆಚ್ಚು ಕಾಡುತ್ತಿರುವ ಸಮಸ್ಯೆ. ಮನೆಯಲ್ಲಿ ಹಿರಿಯರು ಏನಾದರೂ ವಿರುದ್ಧವಾಗಿ ಮಾತನಾಡಿದರೆ ಸಹಸಿಕೊಳ್ಳುವ ಶಕ್ತಿ ಇಲ್ಲ. ನಾನು ಹೇಳಿದ್ದೇ ಸರಿ! ನಾನು ಹೇಳಿದ್ದೇ ನಡೀಬೇಕು ಎಂಬ ಹಠ..‌ ಇದು ಮಾನಸಿಕ ದುರ್ಬಲತೆಯನ್ನು ಹೆಚ್ಚಿಸುತ್ತಿದೆ.

ಸಂವಹನದ ಕೊರತೆ ತಮಗಾದ ನೋವು, ತೊಂದರೆಯನ್ನು ಹೇಳಿಕೊಳ್ಳದಿದ್ದರೆ ಅದು ಚಿಂತೆಯಾಗಿ ಪರಿಣಮಿಸುತ್ತದೆ. ಯಾವುದೇ ಒಂದು ಯೋಚನೆ ಚಿಂತೆಯಾದಾಗಾ ಮನಸ್ಸು ಕಲ್ಮಷಗೊಳ್ಳುತ್ತದೆ. ಮನೆಯ ಸದಸ್ಯರೊಡನೆ ಖುಷಿಯಿಂದ ಮಾತನಾಡುವುದು, ಮನೆಗೆ ಬಂದ ಅಥಿತಿಗಳೊಂದಿಗೆ ಬೆರೆಯುವ ನಡವಳಿಕೆ ಈಗಿನ ಯುವತಿಯರಿಗಿಲ್ಲ. ಇದು ಆರೋಗ್ಯದ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವಂಥದ್ದು.

ಇಷ್ಟೆಲ್ಲಾ ಸಮಸ್ಯೆಯಿರುವಾಗ ಯುವತಿಯರು ಎಚ್ಚೆತ್ತುಕೊಳ್ಳಲೇಬೇಕು. ತಮ್ಮ ಆರೋಗ್ಯ ಮತ್ತು ಮನಸ್ಸಿ ನಿಯಂತ್ರಣ ಅವರ ಆರೋಗ್ಯವನ್ನು ಸುಧಾರಿಸುತ್ತದೆ. ಪ್ರತಿನಿತ್ಯ ವ್ಯಾಯಾಮ, ಧ್ಯಾನ ಅವರ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಸಣ್ಣ-ಪುಟ್ಟ ಆಸೆಗೆ ಹಠ, ಮುನಿಸು-ಕೋಪ ಇವುಗಳನ್ನು ನಿಯಂತ್ರಣಕ್ಕೆ ತರಲು ಮೊದಲಿಗೆ ಅವರ ಮಾನಸಿಕ ಆರೋಗ್ಯ ನಿಯಂತ್ರಣ ಅತ್ಯವಶ್ಯಕ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:

Women Mental Health: ಮಹಿಳೆಯರ ಮಾನಸಿಕ ಸ್ಥಿತಿ ಮತ್ತು ಆರೋಗ್ಯ ಸಮಸ್ಯೆಗೆ ಕಾರಣಗಳು

Pregnancy Care: ಕೊವಿಡ್​ ಸಮಯದಲ್ಲಿ ಗರ್ಭಿಣಿಯರಿಗಾಗಿ ಆರೋಗ್ಯ ಸಲಹೆಗಳು; ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada