ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರು ರೀಲ್ಸ್ ಹುಚ್ಚಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿಷೇಧಿತ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದೇ ಈಗ ಅವರಿಗೆ ಮುಳುವಾಗಿದೆ. ಪೊಲೀಸರು ತನಿಖೆ ಮಾಡಿದಾಗ ರಿಯಲ್ ಮಚ್ಚಿನ ಬಗ್ಗೆ ಇವರಿಬ್ಬರು ಸೂಕ್ತ ಮಾಹಿತಿ ನೀಡಿಲ್ಲ. ಮಚ್ಚು ಎಲ್ಲಿದೆ ಎಂಬುದನ್ನು ಬಾಯಿ ಬಿಟ್ಟಿಲ್ಲ. ಹಾಗಾಗಿ ಪೊಲೀಸ್ ಕಸ್ಟಡಿಗೆ ಅವರನ್ನು ನೀಡಲಾಗಿದೆ.
ರೀಲ್ಸ್ ಹುಚ್ಚಿನಿಂದಾಗಿ ವಿನಯ್ ಗೌಡ ಮತ್ತು ರಜತ್ ಕಿಶನ್ (Rajath Kishan) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದು ಅವರಿಗೆ ಮುಳುವಾಗಿದೆ. ಇನ್ನು, ಪೊಲೀಸರ ತನಿಖೆ ವೇಳೆ ರಿಯಲ್ ಮಚ್ಚಿನ ಬಗ್ಗೆ ಇವರಿಬ್ಬರು ಮಾಹಿತಿ ನೀಡಿಲ್ಲ. ಮಚ್ಚು ಎಲ್ಲಿದೆ ಎಂಬುದನ್ನು ಬಾಯಿ ಬಿಟ್ಟಿಲ್ಲ. ಆದ್ದರಿಂದ ಪೊಲೀಸ್ ಕಸ್ಟಡಿಗೆ (Police Custody) ಅವರನ್ನು ನೀಡಲಾಗಿದೆ. 3 ದಿನಗಳ ಪೊಲೀಸ್ ಕಸ್ಟಡಿಗೆ ತೆರಳುವಾಗ ರಜತ್ ಮತ್ತು ವಿನಯ್ (Vinay Gowda) ಅವರ ಮಂಕಾಗಿ ಕುಳಿತಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Mar 26, 2025 10:34 PM