- Kannada News Photo gallery Max Manju And Goutami Jadhav family visits Shri Vanadurga Tatha Jalanthargatha Naga Sanidhya Temple
ಗೌತಮಿ ಕುಟುಂಬದಲ್ಲೊಬ್ಬರಾದ ಮ್ಯಾಕ್ಸ್ ಮಂಜು; ಫೋಟೋ ವೈರಲ್
ಗೌತಮಿ ಜಾಧವ್ ಹಾಗೂ ಉಗ್ರಂ ಮಂಜು ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ಇದ್ದರು. ಆ ಬಳಿಕ ಇಬ್ಬರ ಮಧ್ಯೆ ಕಿರಿಕ್ ಆಯಿತು. ಇಬ್ಬರೂ ಅನೇಕ ಬಾರಿ ಕಿತ್ತಾಡಿಕೊಂಡಿದ್ದು ಇದೆ. ಬಿಗ್ ಬಾಸ್ನಿಂದ ಹೊರ ಬಂದ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಮೂಡಿದೆ.
Updated on:Mar 27, 2025 | 8:28 AM

ಗೌತಮಿ ಜಾಧವ್ ಹಾಗೂ ಉಗ್ರಂ ಮಂಜು ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಕಿತ್ತಾಟ ನಡೆದಿತ್ತು. ಆರಂಭದಲ್ಲಿ ಉತ್ತಮ ಗೆಳೆಯರಾಗಿದ್ದ ಅವರು ನಂತರ ಕಿರಿಕ್ ಮಾಡಿಕೊಂಡರು. ಈಗ ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಇವರ ಮಧ್ಯೆ ಇದ್ದ ಗೆಳೆತನ ಮುಂದುವರಿದಿದೆ.

ಗೌತಮಿ ಜಾಧವ್ ಅವರು ವನದುರ್ಗಿಯನ್ನು ಅಪಾರವಾಗಿ ನಂಬುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವನ ದುರ್ಗ ದೇವಾಲಯ ಇದೆ. ಇಲ್ಲಿಗೆ ಅವರು ಅನೇಕ ಬಾರಿ ಭೇಟಿ ಕೊಟ್ಟಿದ್ದರು. ಈಗ ಮಂಜು ಹಾಗೂ ಗೌತಮಿ ಕುಟುಂಬ ಒಟ್ಟಾಗಿ ಇಲ್ಲಿಗೆ ತೆರಳಿದೆ.

ಉಗ್ರಂ ಮಂಜು ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಕುಟುಂಬ ಸಮೇತವಾಗಿ ವನದುರ್ಗ ತಾಯಿ ಆಶೀರ್ವಾದ ಪಡೆದ ಕ್ಷಣ’ ಎಂಬ ಕ್ಯಾಪ್ಶನ್ ನೀಡಿದ್ದು ಗಮನ ಸೆಳೆದಿದೆ.

ಮಂಜು ತಂದೆ ತಾಯಿ ಜೊತೆ ಗೌತಮಿ ಹಾಗೂ ಅವರ ಪತಿ ಅಭಿಷೇಕ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋನೂ ಉಗ್ರಂ ಮಂಜು ಅವರು ಪೋಸ್ಟ್ ಮಾಡಿದ್ದಾರೆ. ಇದು ಇವರ ಮಧ್ಯೆ ಬೆಳೆದಿರುವ ಬಾಂಧವ್ಯಕ್ಕೆ ಸಾಕ್ಷಿ ಆಗಿದೆ.

ಉಗ್ರಂ ಮಂಜು ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರ ನಟನೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಅವರಿಗೆ ಬಿಗ್ ಬಾಸ್ನಿಂದ ಜನಪ್ರಿಯತೆ ಹೆಚ್ಚಿದ್ದು, ಸಾಕಷ್ಟು ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ.
Published On - 8:27 am, Thu, 27 March 25



















