ವಿಶ್ವ ದಾಖಲೆ: ಪಾಕಿಸ್ತಾನ್ ತಂಡದಲ್ಲೊಬ್ಬ ‘ಡಕ್’ಮ್ಯಾನ್
New Zealand vs Pakistan: ನ್ಯೂಝಿಲೆಂಡ್ ವಿರುದ್ಧದ 5ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿದೆ. ಈ ಮೂಲಕ ನ್ಯೂಝಿಲೆಂಡ್ ತಂಡಕ್ಕೆ 130 ರನ್ಗಳ ಗುರಿ ನೀಡಿದೆ. 5 ಪಂದ್ಯಗಳ ಈ ಸರಣಿಯನ್ನು ನ್ಯೂಝಿಲೆಂಡ್ ತಂಡವು ಈಗಾಗಲೇ 3-1 ಅಂತರದಿಂದ ವಶಪಡಿಸಿಕೊಂಡಿದ್ದು, ಇದೀಗ ಅಂತಿಮ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ.
Updated on: Mar 26, 2025 | 1:54 PM

ಪಾಕಿಸ್ತಾನ್ ತಂಡದ ಯುವ ದಾಂಡಿಗ ಹಸನ್ ನವಾಝ್ (Hasan Nawaz) ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆದರೆ ಇದು ಅತ್ಯಂತ ಕೆಟ್ಟ ದಾಖಲೆ ಎಂಬುದಷ್ಟೇ ವ್ಯತ್ಯಾಸ. ಅಂದರೆ ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೂಲಕ ಪಾದಾರ್ಪಣೆ ಮಾಡಿದ ಹಸನ್ ನವಾಝ್ ಈವರೆಗೆ 3 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ 2 ಎಸೆತಗಳನ್ನು ಎದುಸಿ ಶೂನ್ಯಕ್ಕೆ ಔಟಾಗಿದ್ದ ಹಸನ್ ನವಾಝ್, ದ್ವಿತೀಯ ಪಂದ್ಯದಲ್ಲಿ 3 ಎಸೆತಗಳನ್ನು ಎದುರಿಸಿ ಮತ್ತೆ ಸೊನ್ನೆ ಸುತ್ತಿದ್ದರು. ಇದಾಗ್ಯೂ ಮೂರನೇ ಟಿ20 ಪಂದ್ಯದಲ್ಲಿ 44 ಎಸೆತಗಳಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು.

ಆದರೆ ನಾಲ್ಕನೇ ಟಿ20 ಪಂದ್ಯದಲ್ಲಿ ಕೇವಲ 1 ರನ್ಗಳಿಸಿ ಔಟಾಗಿದ್ದಾರೆ. ಇದೀಗ 5ನೇ ಟಿ20 ಪಂದ್ಯದಲ್ಲಿ 3 ಎಸೆತಗಳನ್ನು ಎದುರಿಸಿ ಮತ್ತೊಮ್ಮೆ ಸೊನ್ನೆ ಸುತ್ತಿದ್ದಾರೆ. ಈ ಮೂಲಕ ಒಂದೇ ಸರಣಿಯಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾಗಿ ಅನಗತ್ಯ ದಾಖಲೆಗೆ ಕೊರೊಳೊಡ್ಡಿದ್ದಾರೆ.

ಅಂದರೆ ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ್ ಪರ ಒಂದೇ ಸರಣಿಯಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾದ ಮೊದಲ ಆರಂಭಿಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಟಿ20 ಸರಣಿಯಯೊಂದರಲ್ಲಿ ಮೂರು ಬಾರಿ ಡಕ್ ಔಟ್ ಆದ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ಮೊದಲ ಬ್ಯಾಟರ್ ಎಂಬ ಹೀನಾಯ ವಿಶ್ವ ದಾಖಲೆಯನ್ನು ನವಾಝ್ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಪಾಕಿಸ್ತಾನ್ ಪರ ಮೂವರು ಆರಂಭಿಕರು ಮಾತ್ತ ಒಂದೇ ಸರಣಿಯಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಅವರೆಂದರೆ ಮೊಹಮ್ಮದ್ ರಿಝ್ವಾನ್, ಮೊಹಮ್ಮದ್ ಹಫೀಝ್ ಹಾಗೂ ಶಹಜೈಬ್ ಹಸನ್. ಈ ಮೂವರು ಟಿ20 ಸರಣಿವೊಂದರಲ್ಲಿ ತಲಾ 2 ಬಾರಿ ಸೊನ್ನೆ ಸುತ್ತಿದ್ದರು. ಇದೀಗ 3 ಬಾರಿ ಸೊನ್ನೆ ಸುತ್ತುವ ಮೂಲಕ ಹಸನ್ ನವಾಝ್ ಟಿ20 ಕ್ರಿಕೆಟ್ನ ಹೊಸ ಡಕ್ಮ್ಯಾನ್ ಎನಿಸಿಕೊಂಡಿದ್ದಾರೆ.



















