Lemon Water : ಬೇಸಿಗೆಯಲ್ಲಿ ನಿಂಬೆ ನೀರು ಕುಡಿದರೆ ಆರೋಗ್ಯದಲ್ಲಾಗುತ್ತೆ ಮ್ಯಾಜಿಕ್
ಬೇಸಿಗೆ ಶುರುವಾದರೆ ಸಾಕು, ಹೊರಗಡೆ ಹೋಗಲು ಮನಸ್ಸಾಗುವುದಿಲ್ಲ. ಸುಡುಬಿಸಿಲಿಗೆ ತಣ್ಣನೆಯ ಪಾನೀಯ ಸೇವಿಸಬೇಕೆಂದೆನಿಸುತ್ತದೆ. ಹೀಗಾಗಿ ಹೆಚ್ಚಿನವರು ಉರಿ ಸೆಕೆಗೆ ನಿಂಬೆ ಪಾನಕ ಮಾಡಿ ಕುಡಿಯುತ್ತಾರೆ. ಆದರೆ ಬೇಸಿಗೆಯಲ್ಲಿ ನಿಂಬೆ ನೀರು ಸೇವನೆಯಿಂದ ಹತ್ತಾರು ಆರೋಗ್ಯ ಪ್ರಯೋಜನಗಳಿವೆ. ಇದರಲ್ಲಿರುವ ವಿಟಮಿನ್ ಸಿ, ಬಿ, ಇ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳು ದೇಹವನ್ನು ಆರೋಗ್ಯವಾಗಿಡಲು ಬಹಳ ಸಹಾಯ ಮಾಡುತ್ತವೆ. ಹಾಗಾದ್ರೆ ಬೇಸಿಗೆಯಲ್ಲಿ ನಿಂಬೆ ನೀರಿನ ಸೇವನೆಯಿಂದಾಗುವ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಬಹುತೇಕರು ಬೇಸಿಗೆ (Summer) ಯಲ್ಲಿ ರಿಫ್ರೆಶ್ ಆಗಿರಲು ನಿಂಬೆ ನೀರನ್ನು ಸೇವನೆ ಮಾಡುತ್ತಾರೆ. ಇದರಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಅಂಶ ಹೇರಳವಾಗಿದ್ದು ಇದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಬೇಸಿಗೆಯಲ್ಲಂತೂ ನಿಂಬೆ ಪಾನಕ (Lemon Juice) ಜನಪ್ರಿಯ ಪಾನೀಯವಾಗಿದೆ. ಸುಡುವ ಬಿಸಿಲಿಗೆ ನಿಂಬೆ ನೀರಿ (Lemon Water) ನ ನಿಯಮಿತ ಸೇವನೆಯೂ ದಿನವನ್ನು ಉಲ್ಲಾಸದಾಯಕದಾಯಕವಾಗಿಸುತ್ತದೆ. ಅಷ್ಟೇ ಅಲ್ಲದೇ ಈ ನಿಂಬೆ ನೀರು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನ (Health Benefits) ಗಳಿವೆ. ಹಾಗಾದ್ರೆ ಇದರ ಸೇವನೆ ಮಾಡುವುದಕ್ಕಿಂತ ಮುಂಚೆ ಆರೋಗ್ಯ ಲಾಭಗಳೇನು? ಎಂದು ತಿಳಿದುಕೊಳ್ಳುವುದು ಒಳ್ಳೆಯದು.
ನಿಂಬೆ ನೀರಿನ ಆರೋಗ್ಯ ಪ್ರಯೋಜನಗಳಿವು
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಹೇರಳವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ನಿಂಬೆ ನೀರು ಕುಡಿಯುವುದರಿಂದ ದೀರ್ಘಕಾಲದವರೆಗೆ ಚೈತನ್ಯ ಪಡೆಯಬಹುದು. ಬೇಸಿಗೆಯಲ್ಲಿ ಅತಿಯಾದ ಸುಸ್ತು, ಆಯಾಸ ಮತ್ತು ತಲೆತಿರುಗುವುದನ್ನು ಕಡಿಮೆ ಮಾಡುತ್ತದೆ.
- ದೇಹವನ್ನು ಹೆಚ್ಚು ಹೈಡ್ರೇಟ್ ಆಗಿರಿಸುತ್ತದೆ: ಬೇಸಿಗೆಯಲ್ಲಿ ನಾವು ನಿರ್ಜಲೀಕರಣಗೊಳ್ಳುವ ಸಾಧ್ಯತೆ ಹೆಚ್ಚು. ನಿಂಬೆ ರಸದೊಂದಿಗೆ ಬೆರೆಸಿದ ನೀರು ದೇಹವನ್ನು ಹೈಡ್ರೀಕರಿಸಿಡಲು ಸಹಾಯ ಮಾಡುತ್ತದೆ ನಿಯಮಿತವಾಗಿ ನಿಂಬೆ ನೀರು ಸೇವನೆಯಿಂದ ಇದು ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದಲ್ಲದೇ, ದೇಹದಿಂದ ಹಾನಿಕಾರಕ ತ್ಯಾಜ್ಯ ಹಾಗೂ ವಿಷವನ್ನು ಹೊರ ಹಾಕುತ್ತದೆ.
- ತೂಕ ಇಳಿಕೆಗೆ ಸಹಾಯಕ : ನಿಂಬೆಹಣ್ಣುಗಳು ಪೆಕ್ಟಿನ್ ಎಂಬ ನಾರಿನಂಶವಿದ್ದು, ಇದು ಹಸಿವನ್ನು ಕಡಿಮೆ ಮಾಡುತ್ತದೆ. ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಪ್ರತಿದಿನ ನಿಂಬೆ ನೀರು ಸೇವನೆಯಿಂದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ತೂಕ ಇಳಿಕೆ ಮಾಡಲು ಬಯಸುವರು ಈ ನಿಂಬೆ ನೀರು ಸೇವನೆ ಮಾಡುವುದು ಪರಿಣಾಮಕಾರಿಯಾಗಿದೆ.
- ಜೀರ್ಣಕ್ರಿಯೆಗೆ ಸಹಕಾರಿ : ಬೆಳಿಗ್ಗೆ ಸ್ವಲ್ಪ ನಿಂಬೆ ರಸ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳಿದ್ದರೆ ಅಂತಹವರು ಇದನ್ನು ಸೇವಿಸುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದಲ್ಲದೇ, ಗ್ಯಾಸ್ ಮತ್ತು ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
- ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ : ಬೇಸಿಗೆಯಲ್ಲಿ ಸುಡುವ ಬಿಸಿಲಿಗೆ ಚರ್ಮದ ಆರೈಕೆ ಮಾಡುವುದು ಕಷ್ಟದಾಯಕ. ಆದರೆ ನಿಂಬೆ ರಸದಲ್ಲಿರುವ ವಿಟಮಿನ್ ಸಿ ಅಂಶವು ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೆ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರ ಹಾಕುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ