International Kissing Day 2021: ಇಂದು ಅಂತಾರಾಷ್ಟ್ರೀಯ ಚುಂಬನ ದಿನ; ಒಂದು ಮುತ್ತಿನ ಹಿಂದಿನ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?

ಅಂತರಾಷ್ಟ್ರೀಯ ಚುಂಬನ ದಿನ: ಪ್ರತೀ ವರ್ಷ ಜುಲೈ 6ನೇ ತಾರೀಕಿನಂದು ಮುತ್ತಿನ ದಿನವನ್ನು ಆಚರಿಸಲಾಗುತ್ತದೆ. ಒಂದು ಚುಂಬನ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

International Kissing Day 2021: ಇಂದು ಅಂತಾರಾಷ್ಟ್ರೀಯ ಚುಂಬನ ದಿನ; ಒಂದು ಮುತ್ತಿನ ಹಿಂದಿನ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on:Jul 06, 2021 | 10:21 AM

ಒಂದು ಚುಂಬನದ ಹಿಂದೆ ಅನೇಕ ಯೋಚನೆ, ಭರವಸೆ, ಬಯಕೆ, ಆಸೆ, ಪ್ರೀತಿ, ವಿಶ್ವಾಸಗಳೆಲ್ಲವೂ ಇರುತ್ತದೆ. ಅದೆಷ್ಟೋ ಭಾವನೆಗಳನ್ನು ಒಂದು ಮುತ್ತಿನಿಂದ ನಿರೂಪಿಸಬಹುದು. ಅದು, ಇಷ್ಟು ಕಾಲ ಹೆತ್ತು ಹೊತ್ತು ಬೆಳೆಸಿದ ಅಮ್ಮನಿಗಾಗಿರಬಹುದು, ಧೈರ್ಯ ತುಂಬಿ ಜೀವನದಲ್ಲಿ ಬದುಕಲು ಒಳ್ಳೆಯ ಹಾದಿ ತೋರಿಸಿಕೊಟ್ಟ ಅಪ್ಪನಿಗಾಗಿರಬಹುದು, ಅದೆಷ್ಟೋ ಕಷ್ಟಗಳಿಗೆ ಸ್ಪಂದಿಸಿ ವಿಶ್ವಾಸ ತುಂಬುತ್ತಿರುವ ಅಣ್ಣ, ತಮ್ಮ, ಅಕ್ಕ, ತಂಗಿಯರಿಗಾಗಿರಬಹುದು, ಕಷ್ಟ ಕಾಲದಲ್ಲಿ ಕೈಹಿಡಿದು ಸಾಗುತ್ತಿರುವ ಪ್ರೀತಿಯ ಸಂಗಾತಿಗೇ ಆಗಿರಬಹುದು ಇಲ್ಲವೇ ಈಗಷ್ಟೇ ಪ್ರೀತಿಯಲ್ಲಿ ಬಿದ್ದ ಹರಿಹರೆಯದ ಯುವಜನತೆಗಾಗಿರಬಹುದು. ಒಂದು ಮುತ್ತಿನ ಹಿಂದೆ ಅನೇಕ ಆರೋಗ್ಯ ಪ್ರಯೋಜನಗಳೂ ಇವೆ. 

ಇಂದು ಅಂತರಾಷ್ಟ್ರೀಯ ಚುಂಬನ ದಿನ. ಪ್ರತೀ ವರ್ಷ ಜುಲೈ 6ನೇ ತಾರೀಕಿನಂದು ಮುತ್ತಿದಿನವನ್ನು ಆಚರಿಸಲಾಗುತ್ತದೆ.  ಪ್ರೇಮಿಗಳ ದಿನ, ಪರಿಸರ ದಿನ, ಅಮ್ಮನ ದಿನ, ಅಪ್ಪನ ದಿನ, ಅಪ್ಪುಗೆಯ ದಿನ, ಶಿಕ್ಷಕರ ದಿನ, ಪುಸ್ತಕ ದಿನ ಹೀಗೆ ನಾನಾ ರೀತಿಯ ಆಚರಣೆಗಳಿವೆ. ಆಚರಿಸುವ ಒಂದೊಂದು ದಿನವೂ ಸಹ ಒಂದೊಂದು ಉದ್ದೇಶವನ್ನು ಹೊಂದಿದೆ. ಚುಂಬನ ಎಂಬುದು ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ರೂಪ. ಚುಂಬನವು ಸಹಜ ಪ್ರವೃತ್ತಿಯೋ ಅಥವಾ ಕಲಿಕೆಯೋ ಎಂಬುದು ಇನ್ನೂ ನಿಖರವಾಗಿಲ್ಲ. ಆದರೆ ಒಂದು ಮುತ್ತು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಚುಂಬನವು ಒಳ್ಳೆಯದು ಚುಂಬನವು ನಿಮ್ಮ ಮೆದುಳಿನ ಪ್ರತಿಫನ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಈ ಭಾವನೆಯು ನಿಮ್ಮ ದೇಹದಲ್ಲಿನ ಆಕ್ಸಿಟೋಸಿನ್​, ಡೋಪಮೈನ್​ ಮತ್ತು ವಾಸಾಪ್ರೆಸಿನ್​ ಒಳ್ಳೆಯ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇದು ನಿಮ್ಮ ಮನಸ್ಥಿತಿಯ ಸುಧಾರಣೆಗೆ ಸಹಾಯವಾಗುತ್ತದೆ.

ದೇಹದ ಕ್ಯಾಲೋರಿಯನ್ನು ಕರಗಿಸುತ್ತದೆ ಚುಂಬನದಿಂದ ದೇಹದಲ್ಲಿನ ಕ್ಯಾಲೋರಿಗಳನ್ನು ಸುಡಬಹುದಾಗಿದೆ. ಚುಂಬನದಿಂದ ನಿಮ್ಮಲ್ಲಾಗುವ ಬದಲಾವಣೆಗಳು ದೇಹದ ಕ್ಯಾಲೋರಿ ಮಟ್ಟವನ್ನು ನಿಯಂತ್ರಿಸುತ್ತದೆ. ನೀವು 80 ಕೆಜಿ ತೂಕದವರಾಗಿದ್ದರೆ 30 ನಿಮಿಷಗಳ ಒಂದು ಚುಂಬನವು ಶೇ. 60 ಕ್ಯಾಲೋರಿಗಳಷ್ಟು ಸುಡುತ್ತವೆ.

ಒತ್ತಡವನ್ನು ಕಡಿಮೆ ಮಾಡುತ್ತದೆ ಚುಂಬನವು ಮಾನಸಿಕ ಸ್ಥಿತಿ ಮತ್ತು ಒತ್ತಡ ಕಡಿಮೆ ಮಾಡುತ್ತದೆ. ಪ್ರೀತಿಯಿಂದ ಅಮ್ಮನಿಗೆ ಅಥವಾ ಅಪ್ಪನಿಗೆ ನೀಡುವ ಮುತ್ತು ಮಾನಸಿಕ ಸ್ಥಿತಿಯನ್ನು ಬದಲಾಯಿಸುತ್ತದೆ. ಮನಸ್ಸಿಗೆ ಖುಷಿ ನೀಡುತ್ತದೆ. ಇದು ನಿಮ್ಮ ಮನಸ್ಸನ್ನು ನಿರಾಳಗೊಳಿಸುತ್ತದೆ. ಇದರಿಂದ ಆರೋಗ್ಯಕರ ಸಮಸ್ಯೆಗಳು ದೂರವಾಗುತ್ತವೆ. 2005ರಲ್ಲಿ ನಡೆಸಲಾದ ವೆಸ್ಟರ್ನ್​ ಜರ್ನಲ್​ ಆಫ್​ ಕಮ್ಯನಿಕೇಶನ್​ ಅಧ್ಯಯನವು ಒಂದು ಚುಂಬನ ದೇಹದ ಒತ್ತಡ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ.

ಹಲ್ಲುಗಳ ಆರೋಗ್ಯ ಚುಂಬನವು ಲಾಲಾರಸವನ್ನು ಉತ್ಪತ್ತಿ ಮಾಡುತ್ತವೆ. ಇದು ಬಾಯಿಯಲ್ಲಿರುವ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಅತಿಯಾಗಿ ಉತ್ಪತ್ತಿಯಾಗುವ ಲಾಲಾರಸವು ಆಹಾರ ಕಣಗಳನ್ನು ಬಾಯಿಯಿಂದ ಸ್ವಚ್ಛಗೊಳಿಸುತ್ತದೆ. ಒಣ ಬಾಯಿಯನ್ನು ನಿವಾರಿಸುವ ಮೂಲಕ ಉಸಿರಾಟ ಕ್ರಿಯೆಯನ್ನು ಶುದ್ಧಗೊಳಿಸುತ್ತದೆ.

ಜೀವಿತಾವಧಿಯನ್ನು ಸುಧಾರಿಸುತ್ತದೆ ಚುಂಬನದ ಒಟ್ಟಾರೆ ಆರೋಗ್ಯ ಪ್ರಯೋಜನಗಳನ್ನು ಗಮನಿಸಿದರೆ ಇದು ನಿಮ್ಮ ಯೋಗ ಕ್ಷೇಮವನ್ನು ಸುಧಾರಿಸುತ್ತದೆ. ಚುಂಬನದ ಮೂಲಕ ಆಯಸ್ಸು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಪ್ರಕೃತಿಯು ನಮ್ಮನ್ನು ಒಂದು ಕಾರಣಕ್ಕಾಗಿ ಚುಂಬಿಸಲು ಉತ್ತೇಜಿಸುತ್ತದೆ. ಒಂದು ಸ್ಪಷ್ಟ ಉದ್ದೇಶದ ಜತೆಗೆ ಆರೋಗ್ಯದ ಅನೇಕ ಪ್ರಯೋಜನಗಳನ್ನು ಹೊಂದಿದೆ. ಒಳ್ಳೆಯ ಮನೋಭಾವದ ಮೂಲಕ ಒಬ್ಬರನ್ನೊಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಚುಂಬಿಸುವುದು ಒಳ್ಳೆಯದು.

ಇದನ್ನೂ ಓದಿ:

Kiss Day: ಮತ್ತೇರಿಸುವ ಮುತ್ತಿನಲ್ಲಿ ಎಷ್ಟೊಂದು ವಿಧ, ಯಾವ ಮುತ್ತಿಗೆ ಏನು ಅರ್ಥ?

Published On - 9:54 am, Tue, 6 July 21