IPL 2025: ಒಂದೇ ಪಂದ್ಯಕ್ಕೆ ಸುಸ್ತಾದ ಸಂಜು ಸ್ಯಾಮ್ಸನ್; ಹಾರಿದವು ವಿಕೆಟ್ಸ್! ವಿಡಿಯೋ ನೋಡಿ
Sanju Samson Fails Again: ರಾಜಸ್ಥಾನ ರಾಯಲ್ಸ್ ತಂಡವು ಐಪಿಎಲ್ 2025ರ 6ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಳಪೆ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 13 ರನ್ ಗಳಿಸಿ ಬೇಗನೆ ಔಟ್ ಆದರು. ಉಳಿದ ಬ್ಯಾಟ್ಸ್‌ಮನ್‌ಗಳು ಕೂಡಾ ಅದ್ಭುತ ಪ್ರದರ್ಶನ ನೀಡಲು ವಿಫಲರಾದರು. ಹೀಗಾಗಿ ರಾಜಸ್ಥಾನ ತಂಡ ಕೇವಲ 151 ರನ್ ಗಳಿಸಿತು.
ಐಪಿಎಲ್ 2025 ರ 6ನೇ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ ಕೇವಲ 151 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಈ ಕಳಪೆ ಸಾಧನೆಗೆ ಬ್ಯಾಟಿಂಗ್ ವಿಭಾಗವೇ ಪ್ರಮುಖ ಕಾರಣವಾಯಿತು. ಅದರಲ್ಲೂ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಬಹುಬೇಗನೇ ಪೆವಿಲಿಯನ್ ಸೇರಿಕೊಂಡಿದ್ದು, ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು. ಸಂಜು ಜೊತೆಗೆ ಆ ನಂತರ ಬಂದ ಯಾವ ಬ್ಯಾಟ್ಸ್‌ಮನ್ ಕೂಡ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು.
ರಾಜಸ್ಥಾನ್ ಇನ್ನಿಂಗ್ಸ್ನ 3.5 ನೇ ಓವರ್‌ನಲ್ಲಿ, ಸಂಜು ಸ್ಯಾಮ್ಸನ್ ಕೆಕೆಆರ್ ವೇಗಿ ವೈಭವ್ ಅರೋರಾ ಎಸೆತದಲ್ಲಿ ದೊಡ್ಡ ಹೊಡೆತವನ್ನು ಆಡುವ ಪ್ರಯತ್ನದಲ್ಲಿ ಕ್ಲೀನ್ ಬೌಲ್ಡ್ ಆದರು. ತಮ್ಮ ಇನ್ನಿಂಗ್ಸ್ನಲ್ಲಿ 11 ಎಸೆತಗಳನ್ನು ಎದುರಿಸಿದ ಸಂಜು 13 ರನ್ ಕಲೆಹಾಕಲಷ್ಟೇ ಶಕ್ತರಾದರು. ವಾಸ್ತವವಾಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಸಂಜು 37 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳಿಂದ 66 ರನ್ ಕಲೆಹಾಕಿದ್ದರು. ಆದರೆ ಈ ಪಂದ್ಯದಲ್ಲಿ ವಿಫಲರಾದರು. ಹೀಗಾಗಿ ಕಳೆದ ಕೆಲವು ವರ್ಷಗಳಿಂದ ಸಂಜು ಅನುಭವಿಸುತ್ತಿರುವ ವೈಫಲ್ಯ ಪಂದ್ಯದಲ್ಲೂ ಮುಂದುವರೆಯಿತು. ವಾಸ್ತವವಾಗಿ ಪ್ರತಿ ಐಪಿಎಲ್ನ ಆರಂಭದ ಮೊದಲ ಪಂದ್ಯದಲ್ಲಿ ಸಂಜು ಬ್ಯಾಟ್ ಅಬ್ಬರಿಸುತ್ತದೆ. ಆದರೆ ಆ ಬಳಿಕದ ಪಂದ್ಯಗಳಲ್ಲಿ ಸಂಜು ಪ್ರದರ್ಶನ ಅಷ್ಟಕಷ್ಟೆ. ಈ ಪ್ರವೃತಿ ಇದೀಗ ಈ ಸೀಸನ್ನಲ್ಲೂ ಮುಂದುವರೆದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ