Women Mental Health: ಮಹಿಳೆಯರ ಮಾನಸಿಕ ಸ್ಥಿತಿ ಮತ್ತು ಆರೋಗ್ಯ ಸಮಸ್ಯೆಗೆ ಕಾರಣಗಳು

ಮಾನಸಿಕ ಆರೋಗ್ಯ ಮಹಿಳೆಯರ ಮೇಲೆ ಮತ್ತು ಪುರುಷರ ಮೇಲೆ ವಿಭಿನ್ನವಾದ ಪರಿಣಾಮ ಬೀರುತ್ತದೆ. ಹಾಗಿರುವಾಗ ಆದಷ್ಟು ಸೂಕ್ಷ್ಮ ವಿಷಯಗಳ ಕುರಿತಾದ, ಮಹಿಳೆಯರ ಮನಸ್ಸಿಗೆ ಒತ್ತಡವನ್ನು ಉಂಟು ಮಾಡುವ ವಿಷಯಗಳನ್ನು ಚರ್ಚಿಸದಿರುವುದು ಒಳ್ಳೆಯದು.

Women Mental Health: ಮಹಿಳೆಯರ ಮಾನಸಿಕ ಸ್ಥಿತಿ ಮತ್ತು ಆರೋಗ್ಯ ಸಮಸ್ಯೆಗೆ ಕಾರಣಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Jul 05, 2021 | 8:18 PM

ಮಹಿಳೆಯರು ಸೂಕ್ಷ್ಮ ಮನಸ್ಸುಳ್ಳವರು. ಅವರ ಸ್ವಭಾವ ಮತ್ತು ನಡವಳಿಕೆ ಹೆಚ್ಚು ಸಭ್ಯವಾಗಿರುತ್ತದೆ ಹಾಗೂ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ, ಹೇಗೆ ಆಲೋಚಿಸುತ್ತೇವೆ.. ಹೇಗೆ ಚಿಂತಿಸುತ್ತೇವೆ ಅವುಗಳ ಮೇಲೆ ನಮ್ಮ ಮಾನಸಿಕ ಸ್ಥಿತಿ ಬದಲಾಗುತ್ತದೆ. ನಮ್ಮ ಮಾನಸಿಕ ಸ್ಥಿತಿಯ ಬದಲಾವಣೆಯು ವರ್ತನೆಯನ್ನು ಬದಲಾಯಿಸುತ್ತದೆ. ಹಾಗಿದ್ದಾಗ ಮಹಿಳೆಯರು ಹೆಚ್ಚು ಒತ್ತಡಕ್ಕೆ ಸಿಲುಕಿದಂತೆ ಅವರ ಮಾನಸಿಕ ಸ್ಥಿತಿ ಬದಲಾಗುತ್ತದೆ. ಅನಗತ್ಯ ಚಿಂತೆ, ಎಚ್ಚು ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳೂ ಸಹ ಮಹಿಳೆಯರ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಮಾನಸಿಕ ಆರೋಗ್ಯ ಮಹಿಳೆಯರ ಮೇಲೆ ಮತ್ತು ಪುರುಷರ ಮೇಲೆ ವಿಭಿನ್ನವಾದ ಪರಿಣಾಮ ಬೀರುತ್ತದೆ. ಹಾಗಿರುವಾಗ ಆದಷ್ಟು ಸೂಕ್ಷ್ಮ ವಿಷಯಗಳ ಕುರಿತಾದ, ಮಹಿಳೆಯರ ಮನಸ್ಸಿಗೆ ಒತ್ತಡವನ್ನು ಉಂಟು ಮಾಡುವ ವಿಷಯಗಳನ್ನು ಚರ್ಚಿಸದಿರುವುದು ಒಳ್ಳೆಯದು. ಹೆಚ್ಚು ಮನಸ್ಸಿಗೆ ಘಾಸಿ ಮಾಡುವಂತಹ ವಿಚಾರಗಳು ಮನಸ್ಸಿನ ಹಿಡಿತವನ್ನು ತಪ್ಪಿಸುತ್ತದೆ. ಹಾಗಿರುವಾಗ ಮಹಿಳೆಯರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ತೊಂದರೆಗಳು ಯಾವುವು ಎಂಬುದನ್ನು ನೋಡೋಣ.

ಖಿನ್ನತೆ ಮಹಿಳೆಯರಲ್ಲಿ ಮಾನಸಿಕ ಖಿನ್ನತೆ ಹೆಚ್ಚು ಪರಿಣಾಮವನ್ನು ಬೀರುತ್ತದೆ. ಋತು ಚಕ್ರಕ್ಕೆ ಸಂಬಂಧಿಸಿದ ಹಾರ್ಮೋನ್​ಗಳಿಂದ ಮಹಿಳೆಯರು ಖಿನ್ನತೆಗೆ ಒಳಗಾಗುವುದು ಹೆಚ್ಚು. ಹಾಗಿರುವಾಗ ಹೆಚ್ಚು ಆತಂಕ ಪಡಿಸುವ ಮತ್ತು ಮಹಿಳೆಯರು ಭಯಬೀಳುವ ವಿಷಯಗಳನ್ನು ಹೆಚ್ಚು ಮಾತನಾಡುವುದನ್ನು ತಪ್ಪಿಸುವುದು ಒಳ್ಳೆಯದು. ಇದರಿಂದ ಸಿಟ್ಟು, ಮುಂಗೋಪ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗುತ್ತದೆ. ಇದು ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆಗಳು ಹೆಚ್ಚು.

ಕೆಲಸದ ಒತ್ತಡ ಹೆಚ್ಚಿನ ಮಹಿಳೆಯರು ಗೃಹಿಣಿಯರು. ಹೊರತಾಗಿ ಈಗಿನ ಕಾಲಘಟ್ಟದಲ್ಲಿನ ಯುವತಿಯರು ಮತ್ತು ಮಹಿಳೆಯರು ಕೆಲಸಕ್ಕೆ ಹೋಗುತ್ತಾರೆ. ಮನೆ ಕೆಲಸದ ಜತೆಗೆ ಹೊರಗಡೆ ಹೋಗಿ ದುಡಿಯುತ್ತಾರೆ. ಕೆಲಸದ ಒತ್ತಡ ಮಹಿಳೆಯರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮವನ್ನು ಬೀರಬಹುದು. ಹೀಗಿರುವಾಗ ಮನೆಯಲ್ಲಿ ಆದಷ್ಟು ಹೆಚ್ಚು ಒತ್ತಡಕ್ಕೆ ಮಹಿಳೆಯರು ಸಿಲುಕುವಂತೆ ನೋಡಿಕೊಳ್ಳಿ. ಮಕ್ಕಳ ಪಾಲನೆ ಪೋಷಣೆಯ ಜತೆಗೆ ಮನೆಯವರ ಹಿತವನ್ನು ಬಯಸುತ್ತಾ, ಆರೋಗ್ಯದ ಕುರಿತಾಗಿ ಯೋಚಿಸುವ ಮಹಿಳೆಯರ ಮನಸ್ಥಿತಿಗೆ ಘಾಸಿ ಉಂಟಾಗುವಂತೆ ಮಾಡಬೇಡಿ.

ಮನಸ್ತಾಪ ಅಥವಾ ಜಗಳ ಮನೆಯಲ್ಲಿ ನಡೆಯುವ ಕೆಲವು ಗಂಭೀರ ಚರ್ಚೆಗಳು, ಕೌಟುಂಬಿಕ ಕಲಹ ಅಥವಾ ಜಗಳ ಮಹಿಳೆಯರ ಮಾನಸಿಕ ಸ್ಥಿತಿಯನ್ನು ಬದಲಾಯಿಸುತ್ತದೆ. ಹೆಚ್ಚು ಒತ್ತಡಕ್ಕೆ ಸಿಲುಕುವಂತೆ ಮಾಡುತ್ತದೆ. ಮನಸ್ಸಿಗಾಗುವ ನೋವು ಆರೋಗ್ಯದ ಸ್ಥಿತಿಯನ್ನು ಬದಲಾಯಿಸುತ್ತದೆ. ಹಾಗಾಗಿ ಮಹಿಳೆಯರೊಂದಿಗೆ ಆದಷ್ಟು ಸಾಂತವಾಗಿ ವರ್ತಿಸಿ. ಯಾವುದೇ ಗಂಭೀರ ಚರ್ಚೆಯಾಗಿದ್ದರೂ ಕೂಡಾ ತಾಳ್ಮೆಯಿಂದ ಅವರೊಡನೆ ಕುಳಿತು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ಒಂದೇ ಬಾರಿ ಮಹಿಳೆಗೆ ರೇಗುವುದು ಅಥವಾ ಗದರುವುದರಿಂದ ಅವರ ಮಾನಸಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಬಹುದು.

ನಿದ್ರೆಯ ಕೊರತೆ ಬಹಳಷ್ಟು ಮಹಿಳೆಯರಿಗೆ ನಿದ್ರೆಯ ಕೊರತೆ ಹೆಚ್ಚು ಕಾಡುವ ಸಮಸ್ಯೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸದಲ್ಲಿ ತೊಡಗಿದ್ದ ಮಹಿಳೆಗೆ ಮಾನಸಿಕ ಒತ್ತಡವು ನಿದ್ರೆಯ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದರಿಂದ ಮಹಿಳೆ ಹೆಚ್ಚು ಕುಂಠಿತಗೊಳ್ಳುತ್ತಾಳೆ. ನಿಶ್ಚಿಂತೆಯಿಂದ ನಿದ್ರೆ ಮಾಡುವುದರಿಂದ ಅದೆಷ್ಟೋ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಹಾಗಿರುವಾಗ ಮಹಿಳೆಯರು ಸರಿಯಾದ ಸಮಯದಲ್ಲಿ ಮಲಗುವುದು ಮತ್ತು ಎದ್ದೇಳುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಸೂಚನೆ: ಅತ್ಯಂತ ಸೂಕ್ಷ್ಮವಾದ ಮನಸ್ಸನ್ನು ಹೆಚ್ಚು ಆರೋಗ್ಯವಾಗಿ ನೋಡಿಕೊಳ್ಳುವುದು ಮುಖ್ಯ. ಮನಸ್ಸಿಗೆ ಹೆಚ್ಚು ಘಾಸಿಯಾಗದಂತೆ ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ. ಆರೋಗ್ಯದಲ್ಲಿ ಏನೇ ಏರು-ಪೇರು ಉಂಟಾದರೂ ಸಹ ಹತ್ತಿರದ ವೈದ್ಯ ಬಳಿ ಸಲಹೆ ಪಡೆಯಿರಿ. ಪೌಷ್ಟಿಕ ಆಹಾರ ಸೇವನೆ ಮತ್ತು ಪ್ರೋಟೀನ್​ಯುಕ್ತ ಆಹಾರ ಸೇವನೆಯ ಮೂಲಕ ನಿಮ್ಮ ಆರೋಗ್ಯದ ಆರೈಕೆ ಮಾಡಿಕೊಳ್ಳಿ.

ಇದನ್ನೂ ಓದಿ:

Pregnancy Care: ಕೊವಿಡ್​ ಸಮಯದಲ್ಲಿ ಗರ್ಭಿಣಿಯರಿಗಾಗಿ ಆರೋಗ್ಯ ಸಲಹೆಗಳು; ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಿ

Health Tips: ಉರಿಯೂತ ಸಮಸ್ಯೆಯನ್ನು ಆಹಾರದಿಂದ ಸೋಲಿಸುವುದು ಹೇಗೆ? ಇಲ್ಲಿದೆ ಮಾಹಿತಿ