Health Tips: ಬಾಳೆಹಣ್ಣು ಸೇವಿಸುವ ಅಭ್ಯಾಸ ಇದೆಯೇ? ಖಾಯಿಲೆಗಳಿಂದ ದೂರವಿರಲು ಹಣ್ಣುಗಳ ಸೇವನೆ ಉತ್ತಮ

Banana Health Benefits: ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹಣ್ಣು. ದಿನಕ್ಕೆ ಎರಡು ಹಣ್ಣನ್ನಾದರೂ ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ನೀಡುವ ಹಣ್ಣುಗಳ ಸೇವನೆಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

Health Tips: ಬಾಳೆಹಣ್ಣು ಸೇವಿಸುವ ಅಭ್ಯಾಸ ಇದೆಯೇ? ಖಾಯಿಲೆಗಳಿಂದ ದೂರವಿರಲು ಹಣ್ಣುಗಳ ಸೇವನೆ ಉತ್ತಮ
ಬಾಳೆ ಹಣ್ಣು
Follow us
TV9 Web
| Updated By: shruti hegde

Updated on: Jul 07, 2021 | 8:16 AM

ಆರೋಗ್ಯಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ನಾವು ಹಣ್ಣಿನಿಂದ ಪಡೆದುಕೊಳ್ಳಬಹುದು. ಹಾಗಾಗಿಯೇ ಅನೇಕ ಜನರಿಗೆ ಹಣ್ಣುಗಳೆಂದರೆ ಇಷ್ಟ. ಕೇವಲ ರುಚಿಗಷ್ಟೇ ಸವಿಯುವುದರ ಹೊರತಾಗಿ ದೇಹದ ಆರೋಗ್ಯಕರ ದೃಷ್ಟಿಯಿಂದ ಹೆಚ್ಚು ಹಣ್ಣುಗಳನ್ನು ಸೇವಿಸುತ್ತಾರೆ. ಪ್ರತಿಯೊಂದು ಹಣ್ಣು ಕೂಡಾ ಉತ್ತಮ ಪೋಷಕಾಂಶಗಳನ್ನು ಹೊಂದಿದೆ. ಜತೆಗೆ ಅನಾರೋಗ್ಯವನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಹಾಗಿರುವಾಗ ಹಿತಮಿತವಾಗಿ ಬಳಸಿ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಬಾಳೆಹಣ್ಣು ಸೇವನೆಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ದಿನಕ್ಕೆ ಎರಡು ಹಣ್ಣನ್ನಾದರೂ ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ನೀಡುವ ಹಣ್ಣುಗಳ ಸೇವನೆಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಹಾಗಿರುವಾಗ ಬಾಳೆಹಣ್ಣು ಸೇವನೆಯ ಆರೋಗ್ಯ ಪ್ರಯೋಜನಗಳು ಈ ಕೆಳಗಿನಂತಿವೆ.

*ಬಾಳೆಹಣ್ಣು ದೇಹದ ಸ್ನಾಯುಗಳನ್ನು ಆರೋಗ್ಯವಾಗಿರಿಸುತ್ತದೆ ಮತ್ತು ರಕ್ತ ಕಣಗಳನ್ನು ಸುಧಾರಿಸುತ್ತದೆ.

*ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ

*ಮಲಬದ್ಧತೆ ಸಮಸ್ಯೆಯಿಂದ ನಿವಾರಣೆ ಪಡೆಯಬಹುದು

*ಬಾಳೆಹಣ್ಣಿನಲ್ಲಿರುವ ಪೊಟ್ಯಾಷಿಯಂ ಅಂಶ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ

*ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬಾಳೆಹಣ್ಣು ಸೇವನೆ ಉತ್ತಮ

*ದೃಷ್ಟಿ ಸಮಸ್ಯೆ, ವಾಯು ಮತ್ತು ಕ್ಯಾನ್ಸರ್ ಲಕ್ಷಣಗಳಿಂದ ದೂರವಿರಲು ಸಹಾಯಕವಾಗಿದೆ

*ಫೈಬರ್​ ಅಂಶ ಅಧಿಕವಾಗಿರುವುದರಿಂದ ಮಲಬದ್ಧತೆ ಮತ್ತು ಹೊಟ್ಟೆ ನೋವಿನ ಸಮಸ್ಯೆ ಪರಿಹಾರಕ್ಕೆ ಸಹಾಯಕವಾಗಿದೆ

*ದೇಹದಲ್ಲಿ ಖನಿಜಾಂಶವನ್ನು ಹೆಚ್ಚಿಸುತ್ತದೆ ಆದ್ದರಿಂದ ತಜ್ಞರು ದಿನಕ್ಕೆ ಎರಡು ಬಾಳೆಹಣ್ಣುಗಳನ್ನು ಸೇವಿಸಲು ಸಲಹೆ ನೀಡುತ್ತಾರೆ

ಇದನ್ನೂ ಓದಿ:

Health Tips: ಸಿಟ್ರಸ್​ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆಯೇ? ಇಲ್ಲಿದೆ ಮಾಹಿತಿ

Health tips: ಬೆಳಗ್ಗೆ ಎದ್ದ ತಕ್ಷಣ ಬ್ರೆಡ್-ಜಾಮ್​​ ಸೇವನೆ ಒಳ್ಳೆಯದಲ್ಲ! ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು? ಇಲ್ಲಿದೆ ವಿವರ