Health Benefits: ಶುಂಠಿಯಲ್ಲಿನ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ, ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳುತ್ತೀರಿ

ರುಚಿಯ ಜತೆಗೆ ಉತ್ತಮ ಆರೋಗ್ಯಕ್ಕಾಗಿ ಶುಂಠಿ ಚಹಾವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ಹೊಟ್ಟೆ ನೋವಿನಿಂದ ಕ್ಯಾನ್ಸರ್ ವರೆಗಿನ ಅನೇಕ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

Health Benefits: ಶುಂಠಿಯಲ್ಲಿನ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ, ಪ್ರತಿದಿನ ಸೇವಿಸುವ ಅಭ್ಯಾಸ ಮಾಡಿಕೊಳ್ಳುತ್ತೀರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jul 08, 2021 | 6:59 AM

ಶುಂಠಿಯನ್ನು ಹಲವು ವಿಧಗಳಲ್ಲಿ ಬಳಸಬಹುದು ಎಂಬುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಉಪಯೋಗಿಸುವ ಬಗ್ಗೆ ಮಾತ್ರ ಮಾಹಿತಿ ಕೊರತೆ ಇದೆ. ಶುಂಠಿ ಗಂಟಲು ನೋವು, ಶೀತ, ಕೆಮ್ಮು, ತಲೆನೋವು ಮುಂತಾದ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಬಳಸಲಾಗುತ್ತದೆ. ಇದು ಶೋಗಲ್, ಪ್ಯಾರಾಡಾಲ್, ಜಿಂಜರಾನ್, ಜಿಂಜರಾಲ್ ನಂತಹ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರುಚಿಯ ಜತೆಗೆ ಉತ್ತಮ ಆರೋಗ್ಯಕ್ಕಾಗಿ ಶುಂಠಿ ಚಹಾವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದು ಹೊಟ್ಟೆ ನೋವಿನಿಂದ ಕ್ಯಾನ್ಸರ್ ವರೆಗಿನ ಅನೇಕ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

1. ಉರಿಯೂತವನ್ನು ಕಡಿಮೆ ಮಾಡುತ್ತದೆ ಶುಂಠಿಯಲ್ಲಿ ಉರಿಯೂತವನ್ನು ನಿವಾರಿಸುವ ಗುಣಗಳಿವೆ. ಉರಿಯೂತ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಶುಂಠಿ ಸೇವಿಸಿ. ನೀವು ದೀರ್ಘಕಾಲದ ಗಂಟಲು ನೋವು, ಶೀತ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದರೆ ಶುಂಠಿಯನ್ನು ತಿನ್ನಬಹುದು. ಉರಿಯೂತಕ್ಕೆ ಶುಂಠಿ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇದನ್ನು ನೈಸರ್ಗಿಕ ನೋವು ನಿವಾರಕ ಎಂದು ಕರೆಯುತ್ತಾರೆ.

2. ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ದೂರ ಮಾಡುತ್ತದೆ ಶುಂಠಿಯಲ್ಲಿ ವಿಟಮಿನ್ ಕೆ ಇರುತ್ತದೆ. ಶುಂಠಿ ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ವಿಟಮಿನ್ ಕೆ ಯ ಉತ್ತಮ ಮೂಲವಾಗಿದ್ದು, ಹೃದಯಾಘಾತದಂತಹ ಅಪಾಯದಿಂದ ರಕ್ಷಣೆ ನೀಡುತ್ತದೆ. ರಕ್ತ ಹೆಪ್ಪುಗಟ್ಟುವುದನ್ನು ಶುಂಠಿ ತಡೆಯುತ್ತದೆ.

3. ಶಿಲೀಂಧ್ರಗಳ ಸೋಂಕಿನ ವಿರುದ್ಧ ಹೋರಾಡುತ್ತದೆ ಶುಂಠಿಯಲ್ಲಿ ಆಂಟಿಫಂಗಲ್ ಗುಣಗಳಿವೆ. ಇದು ಬಾಯಿಯಲ್ಲಿನ ಶಿಲೀಂಧ್ರಗಳ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

4. ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ ಶುಂಠಿಯಲ್ಲಿ ಜಿಂಜರಾಲ್ ಎಂಬ ಸಂಯುಕ್ತವಿದೆ. ಇದು ಅಂಡಾಶಯ, ಪ್ರಾಸ್ಟೇಟ್ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಲ್ಲಿಸುತ್ತದೆ.

5. ವಾಕರಿಕೆ ಕಡಿಮೆ ಮಾಡುತ್ತದೆ ಶುಂಠಿ ವಾಕರಿಕೆ ಮತ್ತು ವಾಂತಿಯನ್ನು ಕಡಿಮೆ ಮಾಡುತ್ತದೆ. ಈ ಕಾರಣಕ್ಕೆ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಶುಂಠಿಯನ್ನು ಅನೇಕ ವರ್ಷಗಳಿಂದ ಬಳಸಲಾಗುತ್ತಿದೆ.

6. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ ಶುಂಠಿ ಸೇವನೆಯು ಆಹಾರದಲ್ಲಿನ ವಿಷ ಭರಿತ ಅಂಶ, ಶೀತ ಮತ್ತು ಜ್ವರ ಮುಂತಾದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

7. ಹೊಟ್ಟೆ ನೋವು ನಿವಾರಕ ಶುಂಠಿ ಚಹಾ ಕುಡಿಯುವುದರಿಂದ ಹೊಟ್ಟೆ ನೋವು ಮತ್ತು ಹೊಟ್ಟೆಯಲ್ಲಿ ಉಂಟಾಗುವ ಸೆಳೆತ ದೂರವಾಗುತ್ತದೆ.

8. ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿಯನ್ನು ತಿನ್ನಬಹುದು. ಇದಕ್ಕಾಗಿ ನೀವು ಶುಂಠಿ ಜತೆಗೆ ನಿಂಬೆ ರಸ, ಉಪ್ಪು ಬೆರೆಸಿ ಸೇವಿಸುವುದು ಉತ್ತಮ.

ಇದನ್ನೂ ಓದಿ:

Health Tips: ಹಾಲು ಕುಡಿಯುವ ಅಭ್ಯಾಸ ಒಳ್ಳೆಯದು, ಆದರೆ ಹಾಲಿನೊಂದಿಗೆ ಈ ಐದು ಪದಾರ್ಥಗಳನ್ನು ಸೇವಿಸುವುದು ಅಪಾಯಕಾರಿ

Health Benefits: ಚೀನಿಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ತಿಳಿದರೆ, ಇದನ್ನು ದಿನನಿತ್ಯ ತಿನ್ನುವ ಅಭ್ಯಾಸ ಮಾಡಿಕೊಳ್ಳುತ್ತೀರಿ