Vitamin D: ವಿಟಮಿನ್​ ಡಿ ಕೊರತೆಯಿಂದ ಉಂಟಾಗುವ ರೋಗ ಲಕ್ಷಣಗಳು ಮತ್ತು ಪರಿಹಾರ ಕ್ರಮಗಳು

ವಿಟಮಿನ್​ ಡಿ ಅಂಶದ ಉತ್ತಮ ಮೂಲವೆಂದರೆ ಸೂರ್ಯನ ಬೆಳಕು. ಬೆಳಿಗ್ಗೆ ಬೇಗ ಎದ್ದು ವಾರದಲ್ಲಿ ಎರಡರಿಂದ ಮೂರು ಬಾರಿಯಾದರೂ 10-20 ನಿಮಿಷಗಳ ಕಾಲ ಬಿಸಿಲಿನಲ್ಲಿ ನಿಲ್ಲಲು ಪ್ರಯತ್ನಿಸಿ.

Vitamin D: ವಿಟಮಿನ್​ ಡಿ ಕೊರತೆಯಿಂದ ಉಂಟಾಗುವ ರೋಗ ಲಕ್ಷಣಗಳು ಮತ್ತು ಪರಿಹಾರ ಕ್ರಮಗಳು
ಸಾಂದರ್ಭಿಕ ಚಿತ್ರ
Follow us
| Updated By: Skanda

Updated on: Jul 07, 2021 | 6:43 AM

ಕೊವಿಡ್​ 19 ಸಾಂಕ್ರಾಮಿಕ ಖಾಯಿಲೆಯಿಂದ ಜನರು ಅದೆಷ್ಟೋ ದಿನಗಳಿಂದ ಮನೆಯಲ್ಲಿಯೇ ಇದ್ದಾರೆ. ಮನೆ ಒಳಗಡೆ ಸುರಕ್ಷಿತವಾಗಿ ಕುಳಿತರೂ ಸಹ ಆರೋಗ್ಯ ಸಮಸ್ಯೆಗಳು ಕಾಡುತ್ತಿರಬಹುದು. ಸೂರ್ಯನ ಬೆಳಕಿನ ಕೊರತೆಯಿಂದ ವಿಟಮಿನ್​ ಡಿ ಕೊರತೆ ಕಂಡು ಬಂದಿರಬಹುದು. ಇದು ದೀರ್ಘಕಾಲದವರೆಗೆ ಮನುಷ್ಯನ ದೇಹದ ಮೇಲೆ ಮತ್ತು ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ತೋರಿಸುತ್ತದೆ. ಹಾಗಿರುವಾಗ ಇದಕ್ಕೆ ಪರಿಹಾರ ಕ್ರಮಗಳೇನು ಎಂಬುದನ್ನು ತಿಳಿಯೋಣ.

ಜನರು ವಿಟಮಿನ್​ ಡಿ ಕೊರತೆಯಿಂದ ಮಾತ್ರವಲ್ಲದೇ ಅಧಿಕ ತೂಕ, ನೋವು, ಒತ್ತಡ ಹಾಗೂ ಇತರ ವಿಟಮಿನ್​ ಕೊರತೆಯಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಟಮಿನ್​ ಡಿ ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೂಳೆಗಳನ್ನು ಸುಧಾರಿಸುತ್ತದೆ. ಜತೆಗೆ ಕ್ಯಾನ್ಸರ್​ ತಡೆಗಟ್ಟಲು ಸಹಾಯ ಮಾಡುತ್ತದೆ. ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ, ರೋಗ ನಿರೋಧಕ ಶಕ್ತಿಯ ಕೊರತೆ, ಬೇಗ ವಯಸ್ಸಾಗುವಿಕೆಯಿಂದ ವಿಟಮಿನ್​ ಡಿ ಅಂಶ ರಕ್ಷಿಸುತ್ತದೆ. ತಕ್ಷಣವೇ ಯಾವುದೇ ರೋಗ ಲಕ್ಷಣಗಳು ಕಂಡು ಬರುವುದಿಲ್ಲವಾದರೂ ನಿಧಾನವಾಗಿ ಸ್ನಾಯು ಸೆಳೆತ, ಬೆನ್ನು ನೋವು, ಆಯಾಸ, ಖಿನ್ನತೆ, ನಿದ್ರೆ ಮತ್ತು ಅಸ್ವಸ್ಥತೆಯ ಸಮಸ್ಯೆಗೆ ಕಾರಣವಾಗಬಹುದು.

ವಿಟಮಿನ್​ ಡಿ ಅಂಶದ ಉತ್ತಮ ಮೂಲವೆಂದರೆ ಸೂರ್ಯನ ಬೆಳಕು. ಬೆಳಿಗ್ಗೆ ಬೇಗ ಎದ್ದು ವಾರದಲ್ಲಿ ಎರಡರಿಂದ ಮೂರು ಬಾರಿಯಾದರೂ 10-20 ನಿಮಿಷಗಳ ಕಾಲ ಬಿಸಿಲಿನಲ್ಲಿ ನಿಲ್ಲಲು ಪ್ರಯತ್ನಿಸಿ. ಇದನ್ನು ಹೊರತು ಪಡಿಸಿದರೆ ಕಿತ್ತಳೆ, ಮೊಸರು, ಬೆಳ್ಳುಳ್ಳಿ, ಚಾಕಲೇಟ್​, ಕಪ್ಪು ಸಾಸಿವೆ, ಅಣಬೆಗಳು, ಅರಿಶಿಣದಂತಹ ಆಹಾರದಲ್ಲಿ ವಿಟಮಿನ್​ ಡಿ ಪ್ರಮಾಣ ಅಧಿಕವಾಗಿರುತ್ತದೆ. ಆಹಾರದಿಂದಲೇ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇಂತಹ ಆಹಾರ ಪದಾರ್ಥಗಳನ್ನು ಬಳಸಿ.

ಪೌಷ್ಟಿಕ ಆಹಾರ ಸೇವನೆಯ ಮೂಲಕ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಮನೆಯಲ್ಲೇ ಬೆಳೆಯುವ ಹಣ್ಣುಗಳು, ತರಕಾರಿಗಳ ಸೇವನೆ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಆರೋಗ್ಯ ಸುಧಾರಣೆಯನ್ನು ಮಾಡಿಕೊಳ್ಳಬಹುದು. ಇದನ್ನು ಹೊರತಾಗಿ ಆರೋಗ್ಯದಲ್ಲಿ ಏರು-ಪೇರು ಉಂಟಾದರೆ ಹತ್ತಿರದ ವೈದ್ಯರಲ್ಲಿ ಸಲಹೆ ಪಡೆಯಿರಿ. ಏಕೆಂದರೆ ಯಾವುದೋ ಒಂದು ಸಣ್ಣ ಆರೋಗ್ಯ ಸಮಸ್ಯೆಯ ನಿರ್ಲಕ್ಷ್ಯವು ದೊಡ್ಡ ಸಮಸ್ಯೆಯನ್ನೇ ತಂದೊಡ್ಡಬಹುದು.

ಇದನ್ನೂ ಓದಿ:

Tamarind Health Benefits: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹುಣಸೆ ಹಣ್ಣಿನ ಸೇವನೆ ಅಭ್ಯಾಸ ಮಾಡಿಕೊಳ್ಳಿ

ಹುಣಸೆ ಹಣ್ಣಿಗೆ ಬಂಪರ್ ಬೆಲೆ; ಕೊರೊನಾದಿಂದ ಕಂಗೆಟ್ಟ ರೈತರ ಮೊಗದಲ್ಲಿ ಮಂದಹಾಸ