Tamarind Health Benefits: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹುಣಸೆ ಹಣ್ಣಿನ ಸೇವನೆ ಅಭ್ಯಾಸ ಮಾಡಿಕೊಳ್ಳಿ
ಹುಣಸೆ ಹಣ್ಣು: ಸಿಹಿ ಜತೆಗೆ ಹುಳಿಗೆ ಪ್ರಸಿದ್ಧಿ ಪಡೆದ ಹುಣಸೆ ಹಣ್ಣಿನ ಸೂಪ್, ಸಾಸ್ ಜತೆಗೆ ಅಪ್ಪೆ ಹುಳಿಯನ್ನು ಮಾಡುತ್ತಾರೆ. ಅಡುಗೆಯಲ್ಲಿ ರುಚಿ ನೀಡುವುದರ ಜತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಹುಣಸೆ ಹಣ್ಣನ್ನು ಸಾಮಾನ್ಯವಾಗಿ ಅಡುಗೆ ಪದಾರ್ಥದಲ್ಲಿ ಬಳಸುತ್ತಾರೆ. ಇನ್ನು, ಹುಣಸೆ ಹಣ್ಣಿನ ಚಟ್ನಿ, ಗೊಜ್ಜು ಮಾಡಿ ಸವಿದರೇ ಅದರ ಮಜವೇ ಬೇರೆ. ಅದಾಗ್ಯೂ, ಈಗಾತಾನೆ ಮರದಲ್ಲಿ ಬೆಳೆದ ಹುಣಸೆಕಾಯಿಯ ಉಪ್ಪಿನ ಕಾಯಿ ಸವಿದವರಿಗೆ ಇದರ ಹೆಸರು ಕೇಳಿದಾಕ್ಷಣ ಬಾಯಲ್ಲಿ ನೀರು ಬರದಿರಲು ಸಾಧ್ಯವೇ? ಈ ನಡುವೆ ಹುಣಸೆ ಹಣ್ಣು ಆರೋಗ್ಯವನ್ನು ಸುಧಾರಿಸುತ್ತದೆ. ಹುಣಸೆ ಹಣ್ಣನ್ನು ಸೇವಿಸುವುದರಿಂದ ಯಕೃತ್ತು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಸುರಕ್ಷಿತವಾಗಿರಬಹುದು.
ಸಿಹಿ ಜತೆಗೆ ಹುಳಿಗೆ ಪ್ರಸಿದ್ಧಿ ಪಡೆದ ಹುಣಸೆ ಹಣ್ಣಿನ ಸೂಪ್, ಸಾಸ್ ಜತೆಗೆ ಅಪ್ಪೆ ಹುಳಿಯನ್ನು ಮಾಡುತ್ತಾರೆ. ಅಡುಗೆಯಲ್ಲಿ ರುಚಿ ನೀಡುವುದರ ಜತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹುಣಸೆ ಹಣ್ಣು ಫೈಬರ್ಯುಕ್ತ ಪೌಷ್ಟಿಕಾಂಶದಿಂದ ಸಮೃದ್ಧವಾಗಿದೆ. ಯಾವುದೇ ಕೊಬ್ಬಿನಾಂಶವನ್ನು ಹೊಂದಿರುವುದಿಲ್ಲ. ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹುಣಸೆ ಹಣ್ಣಿನಲ್ಲಿರುವ ಪೌಷ್ಟಿಕ ಅಂಶಗಳು ಉರಿಯೂತವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಮಧುಮೇಹದಿಂದ ಬಳುತ್ತಿರುವವರಲ್ಲಿ ಮೇದೋಜ್ಜೀರಕ ಗ್ರಂಥಿಯ ಹಾನಿಯನ್ನು ತಡೆಗಟ್ಟುತ್ತದೆ.
ಜೀರ್ಣಕ್ರಿಯೆಗೆ ಸಹಾಯಕ ಹುಣಸೆ ಹಣ್ಣಿನಲ್ಲಿ ಪೊಟ್ಯಾಶಿಯಂ ಪೌಷ್ಟಿಕಾಂಶವನ್ನು ಕಾಣಬಹುದು. ಜತೆಗೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಗೊಳಿಸುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಈ ಹಣ್ಣನ್ನು ಸೇವಿಸಲಾಗುತ್ತದೆ. ಹುಣಸೆ ಹಣ್ಣಿನ ಎಲೆಗಳನ್ನು ಬಳಸುವುದು ಅತಿಸಾರಕ್ಕೆ ಒಳ್ಳೆಯ ಚಿಕಿತ್ಸೆಯಾಗಿದೆ. ಹೊಟ್ಟೆ ನೋವನ್ನು ನಿವಾರಿಸಲು ಬೇರು ಮತ್ತು ತೊಗಟೆಯನ್ನೂ ಸೇವಿಸಬಹುದು.
ಹುಣಸೆ ಹಣ್ಣು ಹೃದಯ ಸ್ನೇಹಿ ಹಣ್ಣು. ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಪೊಟ್ಯಾಶಿಯಂ ಅಂಶವನ್ನು ಹೊಂದಿರುತ್ತದೆ. ಜತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿದೆ.
ಅಲರ್ಜಿಯಂತಹ ನೆಗಡಿ, ಕೆಮ್ಮು ಎದುರಿಸಲು ಇದು ಪರಿಣಾಮಕಾರಿಯಾಗಿಸಹಾಯ ಮಾಡುತ್ತದೆ. ಮಿಟಮಿನ್ ಸಿ ಪೌಷ್ಟಿಕಾಂಶದಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?
ಆಯಾಸವಿಲ್ಲದೆ ಆದಾಯ ತರುವ ಹುಣಸೆ ಬೆಳೆಗೆ ರಾಜ್ಯದಾದ್ಯಂತ ಉತ್ತಮ ಬೇಡಿಕೆ
Published On - 10:48 am, Sun, 27 June 21