AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಈ 5 ಹಣ್ಣಿನ ಸಂಯೋಜನೆಗಳು ನಿಮ್ಮ ಆರೋಗ್ಯಕ್ಕೆ ಹಾನಿ ತರಬಹುದು! ಆರೋಗ್ಯದ ಕುರಿತು ಗಮನವಿರಲಿ

ಸಾಮಾನ್ಯವಾಗಿ ಹಣ್ಣುಗಳೆಲ್ಲವನ್ನು ಮಿಶ್ರಣ ಮಾಡಿ ಸಲಾಡ್​ ಮಾಡಿ ಸ್ವೀಕರಿಸುತ್ತೇವೆ. ತಿನ್ನಲು ರುಚಿಯಾಗಿರುವುದಂತೂ ಸತ್ಯ. ಆದರೆ ಕೆಲವು ವಿರುದ್ಧ ಪೋಷಕಾಂಶಗಳು ಒಟ್ಟಿಗೆ ಸೇರಿಸಿ ಸೇವಿಸುವುದು ನಮ್ಮ ದೇಹದ ಆರೋಗ್ಯಕ್ಕೆ ಸಮಸ್ಯೆಯನ್ನು ತಂದೊಡ್ಡಬಹುದು.

Health Tips: ಈ 5 ಹಣ್ಣಿನ ಸಂಯೋಜನೆಗಳು ನಿಮ್ಮ ಆರೋಗ್ಯಕ್ಕೆ ಹಾನಿ ತರಬಹುದು! ಆರೋಗ್ಯದ ಕುರಿತು ಗಮನವಿರಲಿ
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on: Jul 10, 2021 | 8:13 AM

Share

ಸಾಮಾನ್ಯವಾಗಿ ಹಣ್ಣುಗಳೆಂದರೆ ಎಲ್ಲರಿಗೂ ಇಷ್ಟ. ಹಸಿದಾಗ ಮೊದಲು ನೆನಪಾಗುವುದೇ ಹಣ್ಣುಗಳು. ಅದರಲ್ಲಿಯೂ ನಮಗಿಷ್ಟವಾದ ಹಣ್ಣುಗಳ ಸಲಾಡ್​, ಜ್ಯೂಸ್​ ಮಾಡಿ ಸವಿಯುತ್ತೇವೆ. ಆದರೆ ಈ ಒಂದು ವಿಷಯವನ್ನು ಮಾತ್ರ ನೆನಪಿನಲ್ಲಿಡಿ. ಒಂದು ಹಣ್ಣಿನಲ್ಲಿರುವ ಪೋಷಕಾಂಶ ಮತ್ತು ಇನ್ನೊಂದು ಹಣ್ಣಿನಲ್ಲಿರುವ ವಿರುದ್ಧ ಪೋಷಕಾಂಶಗಳು ನಮ್ಮ ದೇಹಕ್ಕೆ ಒಂದೇ ಬಾರಿ ಸೇರಿದಾಗ ಅದು ಆರೋಗ್ಯವನ್ನು ಹಾನಿಗೊಳಿಸುತ್ತದೆ.

ಸಾಮಾನ್ಯವಾಗಿ ಹಣ್ಣುಗಳೆಲ್ಲವನ್ನು ಮಿಶ್ರಣ ಮಾಡಿ ಸಲಾಡ್​ ಮಾಡಿ ಸ್ವೀಕರಿಸುತ್ತೇವೆ. ತಿನ್ನಲು ರುಚಿಯಾಗಿರುವುದಂತೂ ಸತ್ಯ. ಆದರೆ ಕೆಲವು ವಿರುದ್ಧ ಪೋಷಕಾಂಶಗಳು ಒಟ್ಟಿಗೆ ಸೇರಿಸಿ ಸೇವಿಸುವುದು ನಮ್ಮ ದೇಹದ ಆರೋಗ್ಯಕ್ಕೆ ಸಮಸ್ಯೆಯನ್ನು ತಂದೊಡ್ಡಬಹುದು. ಹಾಗಿರುವಾಗ ಆಹಾರ ಸೇವನೆಯ ಕುರಿತಾಗಿ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ.

ಈ 5 ವಿಧದ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಬೇಡಿ ಕಿತ್ತಳೆ ಮತ್ತು ಕ್ಯಾರೆಟ್​: ಈ ಎರಡು ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸದಿರಿ. ಇದು ಎದೆಯುರಿ ಮತ್ತು ಮೂತ್ರಪಿಂಡ ಸಮಸ್ಯೆಯನ್ನು ತಂದೊಡ್ಡಬಹುದು.

ಪಪ್ಪಾಯಿ ಮತ್ತು ಲಿಂಬು: ಹುಳಿ ಮತ್ತು ಸಿಹಿ ಅಂಶಗಳನ್ನು ಯಾವಾಗಲೂ ಒಟ್ಟಿಗೆ ಸೇವಿಸಬಾರದು. ಇವುಗಳೆರಡನ್ನು ಒಟ್ಟಿಗೆ ಮಿಶ್ರಣ ಮಾಡಿ ಸೇವಿಸುವುದರಿಂದ ರಕ್ತಹೀನತೆ ಮತ್ತು ಹಿಮೋಗ್ಲೋಬಿನ್​ ಅಸಮತೋಲನ ಉಂಟಾಗುತ್ತದೆ.

ಕಿತ್ತಳೆ ಮತ್ತು ಹಾಲು: ಸಾಮಾನ್ಯವಾಗಿ ಹಾಲಿನ ಜತೆ ಹಣ್ಣುಗಳನ್ನು ಮಿಶ್ರಣ ಮಾಡಿ ಸೇವಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಜತೆಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ತರಬಹುದು. ಕಿತ್ತಳೆ ಹಣ್ಣಿನಲ್ಲಿರುವ ಆಮ್ಲವು ಜೀರ್ಣಕ್ರಿಯೆಗೆ ಬೇಕಾದ ಕಿಣ್ವಗಳನ್ನು ನಾಶ ಪಡಿಸುತ್ತದೆ.

ಪೇರಲ ಮತ್ತು ಬಾಳೆ ಹಣ್ಣು: ಇವೆರಡು ಹಣ್ಣುಗಳನ್ನು ಒಟ್ಟಿಗೆ ಸೇವಿಸಿದಾಗ ವಾಕರಿಗೆ, ಹೊಟ್ಟೆ ಉಬ್ಬುವುದು, ನಿರಂತರ ತಲೆನೋವಿನ ಸಮಸ್ಯೆಗಳು ಕಂಡು ಬರುತ್ತವೆ. ಹಾಗಾಗಿ ಈ ಎರಡು ಹಣ್ಣುಗಳನ್ನು ಒಟ್ಟಿಗೆ ಸೇವಿಸದಿರುವುದು ಒಳಿತು.

ಅನಾನಸ್​ ಮತ್ತು ಹಾಲು: ಅನಾನಸ್​ ಹಣ್ಣಿನಲ್ಲಿ ಬ್ರೊಮೆಲೇನ್​ ಸಂಯುಕ್ತ ಸಮೃದ್ಧಯವಾಗಿರುತ್ತದೆ. ಇದು ಹಾಲಿನೊಂದಿಗೆ ಬೆರೆತಾಗ ದೇಹದಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಇದು ಹೊಟ್ಟೆನೋವು, ವಾಕರಿಕೆ, ತಲೆನೋವು ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಇದನ್ನೂ ಓದಿ:

ಹಾಲಿನ ಜತೆ ಬಾಳೆಹಣ್ಣು ಮಿಶ್ರಣ ಸೇವಿಸುತ್ತಿದ್ದೀರಾ? ಆರೋಗ್ಯಕ್ಕೆ ಹಾನಿ ಎಂಬುದನ್ನು ಮರೆಯದಿರಿ!

Health Tips: ಬಾಳೆಹಣ್ಣು ಸೇವಿಸುವ ಅಭ್ಯಾಸ ಇದೆಯೇ? ಖಾಯಿಲೆಗಳಿಂದ ದೂರವಿರಲು ಹಣ್ಣುಗಳ ಸೇವನೆ ಉತ್ತಮ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ