‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ರಾಯಚೂರಿಗೆ ಬಂದಿದ್ದರು. ಅವರು ಮೊದಲ ಬಾರಿಗೆ ರಾಯಚೂರಿಗೆ ಬಂದು ಖುಷಿ ಹೊರಹಾಕಿದ್ದಾರೆ. ಈ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭವ್ಯಾಗಿದೆ. ಶಿಲ್ಪಾ ಶೆಟ್ಟಿ ಅವರು ಖುಷಿಯಿಂದ ಕನ್ನಡದಲ್ಲೂ ಮಾತನಾಡಿದ್ದಾರೆ. ಅವರ ಮುಖದಲ್ಲಿ ಖುಷಿ ಎದ್ದು ಕಾಣಿಸಿದೆ.
ಶಿಲ್ಪಾ ಶೆಟ್ಟಿ ಅವರು ಮಂಗಳೂರು ಮೂಲದವರು. ಅವರಿಗೆ ತುಳು ಭಾಷೆ ಬರುತ್ತದೆ. ಅವರು ರಾಯಚೂರಿಗೆ ಬಂದಿದ್ದರು. ಈ ವೇಳೆ ಅವರು ಕನ್ನಡದಲ್ಲೂ ಮಾತನಾಡಿದ್ದಾರೆ. ‘ನಾನು ಕರ್ನಾಟಕದ ಹುಡುಗಿ’ ಎಂದು ಹೇಳಿದ್ದಾರೆ. ರಾಯಚೂರು ಕರ್ನಾಟಕದಲ್ಲಿ ಇದೆ ಎಂಬ ವಿಚಾರ ತಿಳಿದು ಅವರು ಖುಷಿಪಟ್ಟರಂತೆ. ‘ಇದು ನಮ್ಮ ಜಾಗ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 18, 2025 09:07 AM
Latest Videos