ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಉಮಾಶ್ರೀ ಅವರು ಧಾರಾವಾಹಿಗಳಲ್ಲಿ 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯನ್ನು ಮಾಡಿದ್ದಾರೆ. ಈಗ ಅವರು ಹೊನ್ನಾವರದಲ್ಲಿ ಬಂದು ಯಕ್ಷಗಾನ ಮಾಡಿದ್ದಾರೆ. ರಾಮಚಂದ್ರ ಚಿಟ್ಟಾಣಿಯವರ ಆಸೆ ಈಡೇರಿಸಲು ಎಂಬುದು ವಿಶೇಷ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಸಂತೋಷವನ್ನು ಅವರು ವಿವರಿಸಿದ್ದಾರೆ.
ನಟಿ ಉಮಾಶ್ರೀ ಅವರು ಬಣ್ಣದ ಲೋಕಕ್ಕೆ ಹೊಸಬರಲ್ಲ. ಅವರಿಗೆ ಹಲವು ದಶಕಗಳ ಅನುಭವ ಇದೆ. ನಾನಾ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಯಕ್ಷಗಾನದಲ್ಲಿ ನಟಿಸಿದ್ದಾರೆ. ಅದೂ ರಾಮಚಂದ್ರ ಚಿಟ್ಟಾಣಿಯವರ ಆಸೆ ಈಡೇರಿಸಲು. ಹೊನ್ನಾವರದಲ್ಲಿ ನಡೆದ ಯಕ್ಷಗಾನದಲ್ಲಿ ಅವರು ಮಂತರೆಯ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಸುಬ್ರಮಣ್ಯ ಚಿಟ್ಟಾಣಿಯವರು ಬಂದು ಯಕ್ಷಗಾನ ಮಾಡಲು ಕೋರಿದರು. ನಾನು ಇದನ್ನು ಎಂದಿಗೂ ಮಾಡಿಲ್ಲ. ಕಷ್ಟ ಆಗುತ್ತದೆ, ಮಾಡುವುದಿಲ್ಲ ಎಂದೆ. ರಾಮಚಂದ್ರ ಚಿಟ್ಟಾಣಿಯವರು ನನ್ನ ಬಳಿ ಮಂತರೆಯ ಪಾತ್ರ ಮಾಡಿಸಬೇಕು ಎಂದು ಹೇಳಿದ್ದರಂತೆ. ಈ ಮಾತನ್ನು ಸುಬ್ರಮಣ್ಯ ಚಿಟ್ಟಾಣಿಯವರು ನನಗೆ ಹೇಳಿದರು. ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಮಾಡಿದೆ’ ಎಂದಿದ್ದಾರೆ ಉಮಾಶ್ರೀ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 18, 2025 08:24 AM
Latest Videos